alex Certify ಟಿಕೆಟ್ ನಿರೀಕ್ಷೆಯಲ್ಲಿದ್ದ 63 ಹಾಲಿ ಬಿಜೆಪಿ ಸಂಸದರಿಗೆ ಮೋದಿ, ‘ಶಾ’ಕ್: ಶೇ. 21ರಷ್ಟು ಎಂಪಿಗಳಿಗೆ ಗೇಟ್ ಪಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್ ನಿರೀಕ್ಷೆಯಲ್ಲಿದ್ದ 63 ಹಾಲಿ ಬಿಜೆಪಿ ಸಂಸದರಿಗೆ ಮೋದಿ, ‘ಶಾ’ಕ್: ಶೇ. 21ರಷ್ಟು ಎಂಪಿಗಳಿಗೆ ಗೇಟ್ ಪಾಸ್

ನವದೆಹಲಿ: ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿರುವ ಬಿಜೆಪಿ 267 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಶೇಕಡ 21ರಷ್ಟು ಹಾಲಿ ಸಂಸದರಿಗೆ ಗೇಟ್ ಪಾಸ್ ನೀಡಲಾಗಿದೆ. ಸಂಸದರ ವಿರುದ್ಧ ಕೇಳಿ ಬಂದ ಅಸಮಾಧಾನ, ಆಕ್ರೋಶ, ಜಾತಿ ಲೆಕ್ಕಾಚಾರ, ಸ್ವಯಂ ನಿವೃತ್ತಿ ಸೇರಿದಂತೆ ಹಲವು ಕಾರಣಗಳಿಂದ 63 ಸಂಸದರಿಗೆ ಟಿಕೆಟ್ ಕೈತಪ್ಪಿದೆ.

370 ಸ್ಥಾನ ಗೆಲ್ಲುವ ಗುರಿಯೊಂದಿಗೆ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಮಾರ್ಚ್ 2ರಂದು 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 33 ಹಾಲಿ ಸಂಸದರಿಗೆ ಟಿಕೆಟ್ ಕೊಡದೆ ಮೋದಿ, ಅಮಿತ್ ಶಾ ಜೋಡಿ ಅಚ್ಚರಿ ಮೂಡಿಸಿತ್ತು. ಪ್ರಜ್ಞಾ ಠಾಕೂರ್, ರಮೇಶ್ ಬಿಧೂರಿ, ಪರ್ವೇಶ್ ವರ್ಮಾ ಸೇರಿದಂತೆ ಹಲವು ಪ್ರಮುಖರಿಗೆ ಟಿಕೆಟ್ ಕೈತಪ್ಪಿದೆ. ಮಾರ್ಚ್ 13ರಂದು ಬಿಡುಗಡೆಯಾದ ಬಿಜೆಪಿ ಎರಡನೇ ಪಟ್ಟಿಯಲ್ಲಿ 72 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾಗಿದೆ. ಎರಡನೇ ಪಟ್ಟಿಯಲ್ಲಿ 30 ಹಾಲಿ ಸಂಸದರನ್ನು ಕೈ ಬಿಡುವ ಮೂಲಕ ಮೋದಿ ಅಮಿತ್ ಶಾ ಜೋಡಿ ಶಾಕ್ ನೀಡಿದೆ. ಎರಡನೇ ಪಟ್ಟಿಯಲ್ಲಿ ಡಿ.ವಿ. ಸದಾನಂದ ಗೌಡ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಸೇರಿ ಹಲವರಿಗೆ ಟಿಕೆಟ್ ಕೈತಪ್ಪಿದೆ.

ಆಯಾ ರಾಜ್ಯಗಳ ರಾಜಕೀಯ ಪರಿಸ್ಥಿತಿ, ಜಾತಿ ಲೆಕ್ಕಾಚಾರ, ಸಂಸದರ ವಿವಾದಿತ ಹೇಳಿಕೆಗಳು, ಕ್ಷೇತ್ರದಲ್ಲಿ ಅಸಮಾಧಾನ, ಮತದಾರರ ಅಭಿಪ್ರಾಯ ಆಧರಿಸಿ ಕೆಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. 267 ಅಭ್ಯರ್ಥಿಗಳ ಪೈಕಿ 140 ಹಾಲಿ ಸಂಸದರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಲಾಗಿದ್ದು, ಕೆಲವು ಸಂಸದರು ಸ್ವಯಂ ಪ್ರೇರಣೆಯಿಂದ ಚುನಾವಣೆಯಿಂದ ಹಿಂದೆ ಸರಿದ ಕಾರಣ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...