alex Certify ಇಲ್ಲಿದೆ ಜಗತ್ತಿನ ಅತಿ ಹಿರಿಯ ಜೀವಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಜಗತ್ತಿನ ಅತಿ ಹಿರಿಯ ಜೀವಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಆಮೆಗಳು ಬಹಳ ವರ್ಷ ಕಾಲ ಬದುಕುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜೋನಾಥನ್, ಸೀಶೆಲ್ಸ್ ದೈತ್ಯ ಆಮೆ ಬಹುಶಃ ತಿಳಿದಿರುವ ಅತ್ಯಂತ ಹಳೆಯ ಭೂ ಪ್ರಾಣಿ ಅಂತಾನೇ ಹೇಳಲಾಗುತ್ತದೆ.

ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸಿಸುತ್ತಿರುವ ಜೋನಾಥನ್, ಎರಡು ವಿಶ್ವ ಮಹಾಯುದ್ಧಗಳನ್ನು ಕಂಡಿದೆ. ಇದಕ್ಕೀಗ 189 ವರ್ಷ ವಯಸ್ಸಾಗಿದೆ.

ಮಹಾ ಖಿನ್ನತೆ, ಮಾರಣಾಂತಿಕ ಸ್ಪ್ಯಾನಿಷ್ ಫ್ಲೂ ಬಳಿಕ ಇದೀಗ ಕೊರೋನಾ ವೈರಸ್ ಈ ದ್ವೀಪದಲ್ಲಿ ಇನ್ನೂ ಇದೆ. ಮೂಲತಃ ಹಿಂದೂ ಮಹಾಸಾಗರದ ಸೀಶೆಲ್ಸ್ ನಿಂದ ಜೋನಾಥನ್ ನನ್ನು, 50 ವರ್ಷದವನಾಗಿದ್ದಾಗ 1882ರಲ್ಲಿ ಮೂರು ಆಮೆಗಳೊಂದಿಗೆ ದಕ್ಷಿಣ ಅಟ್ಲಾಂಟಿಕ್ ದ್ವೀಪಕ್ಕೆ ಕರೆತರಲಾಯಿತು.

1930ರಲ್ಲಿ ಸಂತ ಹೆಲೆನಾ ಗವರ್ನರ್ ಸರ್ ಸ್ಪೆನ್ಸರ್ ಡೇವಿಸ್ ಅವರು ಜೋನಾಥನ್ ಎಂದು ಹೆಸರಿಟ್ಟರು. ಸೀಶೆಲ್ಸ್ ದೈತ್ಯ ಆಮೆ ಜೋನಾಥನ್, ಸೇಂಟ್ ಹೆಲೆನಾ ರಾಜ್ಯಪಾಲರ ಅಧಿಕೃತ ನಿವಾಸವಾದ ಪ್ಲಾಂಟೇಶನ್ ಹೌಸ್ ಮೈದಾನದಲ್ಲಿ ವಾಸಿಸುತ್ತಿದೆ. 1832ರ ಸಮಯದಲ್ಲಿ ಜೊನಾಥನ್ ಜನಿಸಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿಂದು ಸಾವಿರದೊಳಗೆ ಹೊಸ ಕೇಸ್, ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಜೋನಾಥನ್ ಎಷ್ಟು ಆರೋಗ್ಯವಂತ ಗೊತ್ತಾ..?

ಜೋನಾಥನ್ ಗಿನ್ನಿಸ್ ವಿಶ್ವ ದಾಖಲೆಗೂ ಪಾತ್ರನಾಗಿದ್ದಾನೆ. ಸುಮಾರು 1832ರಲ್ಲಿ ಜನಿಸಿದ ಈ ಆಮೆ, ಐಫೆಲ್ ಟವರ್ ಗಿಂತಲೂ ಹಳೆಯದು. ಐಫೆಲ್‌ ಟವರ್‌ ಅನ್ನು 1887ರಲ್ಲಿ ಪೂರ್ಣಗೊಳಿಸಲಾಯಿತು. ಜೋನಾಥನ್ ಜಾತಿಯ ಆಮೆ, ಅಲ್ಡಬ್ರಾ ದೈತ್ಯ ಆಮೆಯ ಉಪಜಾತಿಯಾಗಿದ್ದು ಇವುಗಳನ್ನು ಒಂದು ಕಾಲದಲ್ಲಿ ಅಳಿದುಹೋಗಿವೆ ಅಂತಾನೇ ಭಾವಿಸಲಾಗಿತ್ತು.

ಜೋನಾಥನ್ ತನ್ನ ಸಾಮಾನ್ಯ ಸರಾಸರಿ 150 ವರ್ಷಗಳ ಜೀವಿತಾವಧಿಯನ್ನು ಮೀರಿದ್ದರೂ, ಕೆಲವು ವಯೋಮಾನದ ಸಮಸ್ಯೆಗಳ ಹೊರತಾಗಿ ಸೌಮ್ಯ ಪ್ರಾಣಿ ಇನ್ನೂ ತುಂಬಾ ಆರೋಗ್ಯಕರವಾಗಿದೆ ಎಂದು ಪಶುವೈದ್ಯರು ಹೇಳಿದ್ದಾರೆ. ಕಣ್ಣಿನಲ್ಲಿ ಪೊರೆಯಿಂದಾಗಿ ಕಣ್ಣು ಕಾಣಿಸದೆ ಇರಬಹುದು. ಎಲ್ಲಾ ವಾಸನೆಯ ಪ್ರಜ್ಞೆ ಕಳೆದುಕೊಂಡಿರಬಹುದು. ಆದರೆ, ಇನ್ನೂ ಉತ್ತಮ ಶ್ರವಣ ಕೌಶಲ್ಯವನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ.

ಆಮೆಗಳು ಯಾಕೆ ದೀರ್ಘಕಾಲ ಬದುಕುತ್ತವೆ..?

ಈ ಬಗ್ಗೆ ಇನ್ನೂ ಸರಿಯಾಗಿ ಸಂಶೋಧನೆ ಮಾಡದಿದ್ದರೂ, ವಿಜ್ಞಾನಿಗಳು ಕೆಲವು ಸಿದ್ಧಾಂತಗಳನ್ನು ಹೊಂದಿದ್ದಾರೆ. ಇತ್ತೀಚಿನ ಅಧ್ಯಯನವು ಜೀವಕೋಶದ ಹಾನಿ ಮತ್ತು ಸಾವಿಗೆ ಕಾರಣವಾಗುವ ವಸ್ತುಗಳನ್ನು ನೋಡಿದೆ. ಮತ್ತು ಜೋನಾಥನ್ ನಂತಹ ದೈತ್ಯ ಆಮೆಯನ್ನೂ ಒಳಗೊಂಡಂತೆ ಆಮೆ ಜಾತಿಗಳ ಜೀವಕೋಶಗಳನ್ನು ಗಣನೆಗೆ ತೆಗೆದುಕೊಂಡಿತು.

ಹಾನಿಗೊಳಗಾದ ಜೀವಕೋಶಗಳನ್ನು ತ್ವರಿತವಾಗಿ ಕೊಲ್ಲುವ ಮೂಲಕ, ಅಪೋಪ್ಟೋಸಿಸ್ ಎಂಬ ಪ್ರಕ್ರಿಯೆಯನ್ನು ಬಳಸಿಕೊಂಡು ಜೀವಕೋಶದ ಹಾನಿಯ ದೀರ್ಘಕಾಲೀನ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಈ ಪ್ರಾಣಿಗಳು ಹೊಂದಿವೆ ಎಂದು ಅದು ಬಹಿರಂಗಪಡಿಸಿತು. ಹೀಗಾಗಿ ಅದರ ಜೀವಿತಾವಧಿ ಹೆಚ್ಚಳಕ್ಕೆ ಇದು ಕಾರಣವಾಗಿದೆ.

ಇನ್ನು ಜೋನಾಥನ್, ಈ ದ್ವೀಪದ ಏಕೈಕ ಪ್ರಸಿದ್ಧ ನಿವಾಸಿಯಲ್ಲ. ಬದಲಾಗಿ ಸೇಂಟ್ ಹೆಲೆನಾವು ನೆಪೋಲಿಯನ್ ಬೊನೋಪಾರ್ಟೆ 1815ರ ವಾಟರ್ ಲೂ ಕದನದ ನಂತರ ತನ್ನ ಕೊನೆಯ ದಿನಗಳನ್ನು ದೇಶಭ್ರಷ್ಟನಾಗಿ ಬದುಕಿದ ಸ್ಥಳ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ, 1966ರಲ್ಲಿ ಟಾಂಗಾದಲ್ಲಿ 189ನೇ ವಯಸ್ಸಿನಲ್ಲಿ ಮೃತಪಟ್ಟ ಭೂಮಿಯಲ್ಲಿರುವ ಅತ್ಯಂತ ಹಳೆಯ ಪ್ರಾಣಿಯ ಗಿನ್ನಿಸ್ ದಾಖಲೆಯನ್ನು ‘ತಯಿ ಮಲಿಲಾ’ ಎಂಬ ಹೆಸರಿನ ಆಮೆ ಹೊಂದಿತ್ತು. ಭಾರತದ ಕೋಲ್ಕತ್ತಾದಲ್ಲಿ ಅನೇಕರು ಅದಕ್ಕೆ 255 ವರ್ಷಗಳಾಗಿತ್ತು ಎಂದು ನಂಬಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...