alex Certify ಸೇನಾ ಹೆಲಿಕಾಪ್ಟರ್​​ ದುರಂತದಲ್ಲಿ ಬದುಕುಳಿದ ಏಕೈಕ ಸೇನಾ ಸಿಬ್ಬಂದಿ ಯಾರು ಗೊತ್ತಾ…..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇನಾ ಹೆಲಿಕಾಪ್ಟರ್​​ ದುರಂತದಲ್ಲಿ ಬದುಕುಳಿದ ಏಕೈಕ ಸೇನಾ ಸಿಬ್ಬಂದಿ ಯಾರು ಗೊತ್ತಾ…..? ಇಲ್ಲಿದೆ ಮಾಹಿತಿ

ഹെലികോപ്ടര്‍ അപകടം; 14-പേരില്‍ ജീവനോടെയുള്ളത് ഗ്രൂപ്പ് ക്യാപ്റ്റന്‍ വരുണ്‍ സിങ് മാത്രം, ചികിത്സയില്‍ | Who is Gp Capt Varun Singh? The lone survivor in CDS chopper crashಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಅವರ ಪತ್ನಿ ಮಧುಲಿಕಾ ರಾವತ್​​ ಹಾಗೂ ಇತರೆ 11 ಮಂದಿಯನ್ನು ಹೊತ್ತು ಸಾಗುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್​​ ತಮಿಳುನಾಡಿನ ಕೂನೂರ್​​ನಲ್ಲಿ ದುರಂತಕ್ಕೀಡಾಗಿದೆ. ಈ ದುರಂತದಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ದುರಂತ ಅಂತ್ಯ ಕಂಡಿದ್ದಾರೆ ಎಂದು ಐಎಎಫ್​ ಟ್ವೀಟ್​ ಮಾಡಿದೆ.

ವೆಲ್ಲಿಂಗ್ಟನ್​ನ ಡಿಫೆನ್ಸ್​ ಸರ್ವೀಸ್​ ಸ್ಟಾಫ್​​ ಕಾಲೇಜಿಗೆ ತೆರಳುತ್ತಿದ್ದ ವೇಳೆಯಲ್ಲಿ ಹೆಲಿಕಾಪ್ಟರ್​ ದುರಂತ ಅಂತ್ಯ ಕಂಡಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಭಾರತೀಯ ಸೇನೆಯ ಎಂಐ 15 ವಿ5 ಹೆಲಿಕಾಪ್ಟರ್​​​ ತಮಿಳುನಾಡಿನ ಕುನೂರ್​ ಬಳಿಯಲ್ಲಿ ದುರಂತಕ್ಕೀಡಾಗಿತ್ತು.

ಭಾರತೀಯ ವಾಯುಪಡೆ ನೀಡಿರುವ ಮಾಹಿತಿಯ ಪ್ರಕಾರ ಗ್ರೂಪ್​ ಕ್ಯಾಪ್ಟನ್​​​ ವರುಣ್​ ಸಿಂಗ್​ ಎಸ್ಸಿ, ಡಿಎಸ್​​ಎಸ್​ಸಿಯ ಡೈರೆಕ್ಟಿಂಗ್​ ಸಿಬ್ಬಂದಿ ಮಾತ್ರ ಈ ದುರಂತದಿಂದ ಬದುಕುಳಿದಿದ್ದಾರೆ.

ವರುಣ್​ ಸಿಂಗ್​​ಗೆ ಗಂಭೀರ ಗಾಯಗಳಾಗಿದ್ದು ವೆಲ್ಲಿಂಗ್ಟನ್​​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​​ರಿಗೆ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ದಿನದಂದು ಕೇಂದ್ರ ಸರ್ಕಾರ ಶೌರ್ಯ ಚಕ್ರ ನೀಡಿ ಗೌರವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...