alex Certify ʼಆದಿಪುರುಷʼ ನಿರ್ದೇಶಕನಿಗೆ 4 ಕೋಟಿ ಮೌಲ್ಯದ ಫೆರಾರಿ ಸೂಪರ್‌ ಕಾರ್ ಗಿಫ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆದಿಪುರುಷʼ ನಿರ್ದೇಶಕನಿಗೆ 4 ಕೋಟಿ ಮೌಲ್ಯದ ಫೆರಾರಿ ಸೂಪರ್‌ ಕಾರ್ ಗಿಫ್ಟ್…!

ಬಾಲಿವುಡ್‌ನ ಮುಂಬರುವ ಬಹುಭಾಷಾ ಸಿನಿಮಾ “ಆದಿಪುರುಷ” ಕ್ಕೆ ಹಣಕಾಸು ಒದಗಿಸುತ್ತಿರುವ ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಚಿತ್ರದ ನಿರ್ದೇಶಕನಿಗೆ ದೊಡ್ಡ ಗಿಫ್ಟ್ ನೀಡಿದ್ದಾರೆ.

ಓಂ ರಾವತ್‌ ಈ ಚಿತ್ರದ ನಿರ್ದೇಶಕ. ಅವರಿಗೆ ಕೆಂಪು ಬಣ್ಣದ ಫೆರಾರಿ ಎಫ್8 ಟ್ರಿಬ್ಯೂಟೊ ಸೂಪರ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದು, ವರದಿಗಳ ಪ್ರಕಾರ ಸೂಪರ್ ಐಷಾರಾಮಿ ವಾಹನದ ಬೆಲೆ 4.02 ಕೋಟಿ ರೂ. ಆಗಿದೆ.

ಕಾರು ಶೋರೂಮ್‌ನಿಂದ ನೇರವಾಗಿ ಅವರಿಗೆ ಹೋಗಿಲ್ಲ, ಬದಲಿಗೆ ಅದನ್ನು ಭೂಷಣ್ ಕುಮಾರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಕುಮಾರ್ ಅವರು ತಮ್ಮ ಸಹೋದ್ಯೋಗಿಗಳಿಗೆ ದುಬಾರಿ ಕಾರುಗಳು ಮತ್ತು ಉಡುಗೊರೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ.

ಈ ವರ್ಷದ ಆರಂಭದಲ್ಲಿ ‘ಭೂಲ್ ಭುಲೈಯಾ 2’ ಸೂಪರ್ ಯಶಸ್ಸಿನ ನಂತರ, ಭೂಷಣ್ ಕುಮಾರ್ ಕಾರ್ತಿಕ್ ಆರ್ಯನ್ ಅವರಿಗೆ 4.70 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಆರೆಂಜ್ ಮೆಕ್ಲಾರೆನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಆದಿಪುರುಷನಲ್ಲಿ ಭಗವಾನ್ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಜನವರಿ 12, 2023ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...