alex Certify ತುಪ್ಪ ಮತ್ತು ಬೆಣ್ಣೆ ಇವೆರಡರಲ್ಲಿ ಯಾವುದು ಆರೋಗ್ಯಕರ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಪ್ಪ ಮತ್ತು ಬೆಣ್ಣೆ ಇವೆರಡರಲ್ಲಿ ಯಾವುದು ಆರೋಗ್ಯಕರ……?

ಡಯಟ್ ಮಾಡುವ ಭರದಲ್ಲಿ ಅನೇಕರು ತುಪ್ಪವನ್ನು ಕಡೆಗಣಿಸುತ್ತಾರೆ. ತುಪ್ಪ ತಿಂದರೆ ದಪ್ಪಗಾಗುತ್ತಾರೆ ಎಂಬುದು ಅವರ ಭಾವನೆ. ಆದರೆ ಆಹಾರ ತಜ್ಞರು ತುಪ್ಪದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದ್ದಾರೆ. ಇದರ ಬಗ್ಗೆ ಅರಿವಿರುವವರು ತುಪ್ಪವನ್ನು ಸೇವನೆ ಮಾಡಲು ಹಿಂದೇಟು ಹಾಕುವುದಿಲ್ಲ. ಅನೇಕರಿಗೆ ಬೆಣ್ಣೆ ಫೇವರಿಟ್.‌ ಬೆಣ್ಣೆ ಆರೋಗ್ಯಕರವೇ? ಅಥವಾ ತುಪ್ಪವನ್ನು ಸೇವಿಸುವುದು ಸೂಕ್ತವಾ ಅನ್ನೋ ಗೊಂದಲ ಹಲವರಲ್ಲಿ ಇರಬಹುದು. ಈ ಬಗ್ಗೆ ತಿಳಿದುಕೊಳ್ಳೋಣ.

ತುಪ್ಪ ಪ್ರಾಚೀನ ಕಾಲದಿಂದಲೂ ಭಾರತೀಯ ಅಡುಗೆಮನೆಯ ಭಾಗವಾಗಿದೆ. ವಿಶೇಷವಾಗಿ ಮಕ್ಕಳಿಗೆ ತುಪ್ಪ ತಿನ್ನಿಸುವಂತೆ ಹಿರಿಯರು ಸಲಹೆ ನೀಡ್ತಾರೆ. ತುಪ್ಪ ತಿನ್ನಿಸುವುದರಿಂದ ಅವರ ಮೂಳೆಗಳು ಗಟ್ಟಿಯಾಗುತ್ತವೆ. ತುಪ್ಪ ನಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿಡುವ ಸೂಪರ್‌ಫುಡ್‌ನಂತೆ. ಇದು ಉತ್ತಮ ಕೊಬ್ಬಿನ ಮೂಲವಾಗಿದೆ. ತುಪ್ಪದಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ಸಂಶೋಧನೆಗಳ ಪ್ರಕಾರ ಮಕ್ಕಳು ಪ್ರತಿದಿನ ತುಪ್ಪವನ್ನು ತಿನ್ನಬಹುದು. ತುಪ್ಪ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ.

ಇನ್ನು ಬೆಣ್ಣೆಯ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಪುಟ್ಟ ಕೃಷ್ಣ. ಆದರೆ ಉಪ್ಪುರಹಿತ ಬಿಳಿ ಬೆಣ್ಣೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು. ಮನೆಯಲ್ಲೇ ಮೊಸರನ್ನು ಕಡೆದು ತೆಗೆದ ಬಿಳಿ ಬೆಣ್ಣೆಯನ್ನು ಸೇವನೆ ಮಾಡುವುದು ಉತ್ತಮ. ಮಾರುಕಟ್ಟೆಯಲ್ಲಿ ದೊರೆಯುವ ಬೆಣ್ಣೆಯನ್ನು ಸಂಪೂರ್ಣವಾಗಿ ಸಂಸ್ಕರಿಸಿ ಅದಕ್ಕೆ ಉಪ್ಪನ್ನು ಸೇರಿಸಲಾಗುತ್ತದೆ. ಆದ್ದರಿಂದ ಇದು ದೀರ್ಘಕಾಲದವರೆಗೆ ಇರುತ್ತದೆ.

ತುಪ್ಪ ಮತ್ತು ಬೆಣ್ಣೆ: ಯಾವುದು ಆರೋಗ್ಯಕರ?

ತುಪ್ಪ ಮತ್ತು ಬೆಣ್ಣೆ ಇವೆರಡೂ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ತುಪ್ಪ ಆರೋಗ್ಯಕರ ಕೊಬ್ಬು. ಇದರಲ್ಲಿ ವಿಟಮಿನ್ ಎ ಜೊತೆಗೆ ಒಮೆಗಾ 3 ಫ್ಯಾಟಿ ಆಸಿಡ್ ಕೂಡ ಇದೆ. ಬಲವರ್ಧಿತ ಬೆಣ್ಣೆಯು ವಿಟಮಿನ್ ಎ ಅನ್ನು ಹೊಂದಿರಬಹುದು.

ತುಪ್ಪ ಮತ್ತು ಬೆಣ್ಣೆಯಲ್ಲಿರುವ ಕ್ಯಾಲೋರಿಗಳು: 100 ಗ್ರಾಂ ಬೆಣ್ಣೆಯಲ್ಲಿ 717 ಕ್ಯಾಲೋರಿ, 71 ಪ್ರತಿಶತ ಆರೋಗ್ಯಕರ ಕೊಬ್ಬು ಮತ್ತು 3 ಗ್ರಾಂ ಅನಾರೋಗ್ಯಕರ ಕೊಬ್ಬು ಇರುತ್ತದೆ. ಅದೇ ರೀತಿ 100 ಗ್ರಾಂ ತುಪ್ಪದಲ್ಲಿ 900 ಕ್ಯಾಲೋರಿ, 60 ಪ್ರತಿಶತ ಆರೋಗ್ಯಕರ ಕೊಬ್ಬಿನಂಶವಿರುತ್ತದೆ. ತುಪ್ಪದಲ್ಲಿ ಯಾವುದೇ ಅನಾರೋಗ್ಯಕರ ಕೊಬ್ಬಿನಂಶವಿರುವುದಿಲ್ಲ.

ತುಪ್ಪ ಮತ್ತು ಬೆಣ್ಣೆಯ ರುಚಿ ಮತ್ತು ಉಪಯೋಗ: ತುಪ್ಪ ಮತ್ತು ಬೆಣ್ಣೆ ಎರಡೂ ವಿಭಿನ್ನ ರುಚಿಗಳನ್ನು ಹೊಂದಿರುತ್ತವೆ. ಆದ್ದರಿಂದ ಅವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸುವುದರಲ್ಲಿ ಆಶ್ಚರ್ಯವೇನಿಲ್ಲ. ಭಾರತದಲ್ಲಿ  ತುಪ್ಪವನ್ನು ಎಲ್ಲಾ ರೀತಿಯ ಮೇಲೋಗರಗಳು, ದಾಲ್ ಮತ್ತು ಮಾಂಸ ಭಕ್ಷ್ಯಗಳನ್ನು ಬೇಯಿಸಲು ಬಳಸಲಾಗುತ್ತದೆ. ಸಿಹಿ ತಿನಿಸುಗಳಲ್ಲಿ ಕೂಡ ತುಪ್ಪ ಬೇಕೇ ಬೇಕು. ತುಪ್ಪವನ್ನು ಹೆಚ್ಚಿನ ತಾಪಮಾನದಲ್ಲಿಯೂ ಬೇಯಿಸಬಹುದು. ಬೆಣ್ಣೆ ಕೂಡ ಬಹುಉಪಯೋಗಿ. ಸಾಸ್‌, ಪರೋಟ, ಮಾಂಸದ ಖಾದ್ಯಗಳಿಗೆ ಬೆಣ್ಣೆ ಬಳಸುತ್ತೇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...