alex Certify ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನಲ್ಲಿ ಯಾವುದು ಅಪಾಯಕಾರಿ….? ಹಾಗೇ ಯಾವುದು ಕರಗಿಸುವುದು ತುಂಬಾ ಕಷ್ಟ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನಲ್ಲಿ ಯಾವುದು ಅಪಾಯಕಾರಿ….? ಹಾಗೇ ಯಾವುದು ಕರಗಿಸುವುದು ತುಂಬಾ ಕಷ್ಟ……?

ಅನಾವಶ್ಯಕ ಬೊಜ್ಜು ಸೌಂದರ್ಯ ಕ್ಕೆ ಮಾರಕವಷ್ಟೇ ಅಲ್ಲ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ನಮ್ಮ ದೇಹದಲ್ಲಿ ಕೊಬ್ಬು 2 ವಿಧದಲ್ಲಿ ಸಂಗ್ರಹಣೆಯಾಗುತ್ತದೆ. ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಇದರಲ್ಲಿ ಯಾವುದು ತುಂಬಾ ಅಪಾಯ, ಯಾವುದನ್ನು ಕರಗಿಸುವುದು ತುಂಬಾ ಕಷ್ಟ ಎಂಬುದನ್ನು ತಿಳಿದುಕೊಳ್ಳೋಣ.

*ಮೃದುವಾದ ಕೊಬ್ಬು ಚರ್ಮದ ಮೇಲ್ಮೈ ಕೆಳಗೆ ಸಂಗ್ರಹಿಸಲಾಗುತ್ತದೆ. ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇದು ಕಳಪೆ ಆಹಾರ, ವ್ಯಾಯಾಮದ ಕೊರತೆಯ ಕಾರಣದಿಂದ ಉಂಟಾಗುತ್ತದೆ. ಪುರುಷರಿಗೆ ಹೋಲಿಸಿದರೆ ಇದು, ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತದೆ. ಈ ಕೊಬ್ಬನ್ನು ಕರಗಿಸುವುದು ತುಂಬಾ ಸುಲಭ, ನಿಯಮಿತವಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರವಾದ ಆಹಾರ ಸೇವಿಸುವುದರಿಂದ ಈ ಕೊಬ್ಬು ಕರಗುತ್ತದೆ.

*ಗಟ್ಟಿಯಾದ ಕೊಬ್ಬು ಹೆಚ್ಚು ಹಾನಿಕಾರಕವಾಗಿದೆ. ದೇಹದೊಳಗಿನ ಅಂಗಗಳ ನಡುವೆ ಸಂಗ್ರಹವಾಗುತ್ತದೆ. ಇದು ವ್ಯಾಯಾಮದ ಕೊರತೆ, ಕೊಬ್ಬು ಹೆಚ್ಚಾಗಿರುವ ಮತ್ತು ಕ್ಯಾಲೋರಿ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದರಿಂದ ಉಂಟಾಗುತ್ತದೆ. ಇದು ಹೆಚ್ಚಾಗಿ ಪುರುಷರಲ್ಲಿ ಕಂಡು ಬರುತ್ತದೆ. ಇದನ್ನು ಕರಗಿಸಲು ಪ್ರತಿದಿನ ಕಠಿಣವಾದ ವ್ಯಾಯಾಮ ಮಾಡಿ, ಸಂಸ್ಕರಿಸಿದ ಕಾರ್ಬ್, ಹಣ್ಣುಗಳು, ಪ್ರೋಟೀನ್, ಸಸ್ಯಹಾರ, ಧಾನ್ಯಗಳನ್ನು ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...