alex Certify ರಾಣಿ ಎಲಿಜಬೆತ್ ಗೆ 300 ಡೈಮಂಡ್​ ಸ್ಟಡ್​ ನೆಕ್ಲೇಸ್​ ಉಡುಗೊರೆಯಾಗಿ ನೀಡಿದ್ದ ಹೈದ್ರಾಬಾದ್​ ನಿಜಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಣಿ ಎಲಿಜಬೆತ್ ಗೆ 300 ಡೈಮಂಡ್​ ಸ್ಟಡ್​ ನೆಕ್ಲೇಸ್​ ಉಡುಗೊರೆಯಾಗಿ ನೀಡಿದ್ದ ಹೈದ್ರಾಬಾದ್​ ನಿಜಾಮ

ಬ್ರಿಟನ್​ನ ಸಿಂಹಾಸನದ ಮೇಲೆ ಸುದೀರ್ಘವಾಗಿ 70 ವರ್ಷಗಳಿದ್ದ ರಾಣಿ ಎಲಿಜಬೆತ್​ 2 ಅವರು 96 ನೇ ವಯಸ್ಸಿನಲ್ಲಿ ಸೆಪ್ಟೆಂಬರ್​ 8ರಂದು ನಿಧನರಾದರು.

ಸ್ಕಾಟ್ಲೆಂಡ್​ನ ಅವರ ಬೇಸಿಗೆ ನಿವಾಸವಾದ ಬಾಲ್ಮೋರಲ್​ ಕ್ಯಾಸಲ್​ನಲ್ಲಿ ಕೊನೆಯುಸಿರೆಳೆದರು ಎಂದು ಅರಮನೆಯು ಘೋಷಿಸಿತ್ತು. 10 ದಿನಗಳ ಅಧಿಕೃತ ಶೋಕಾಚರಣೆಯ ನಂತರ ರಾಣಿಯ ಅಂತ್ಯಕ್ರಿಯೆ ನಡೆಯಲಿದೆ.

ಈ ನಡುವೆ ರಾಣಿಯ ಒಡನಾಟವನ್ನು ವಿವಿಧ ದೇಶಗಳು ನೆನಪಿಸಿಕೊಂಡಿವೆ. ಭಾರತದಲ್ಲೂ ಸಹ ವಿವಿಧ ರಾಜ್ಯಗಳಿಗೆ ರಾಣಿ ಭೇಟಿ ಕೊಟ್ಟಿದ್ದರು ಎಂಬುದಕ್ಕೆ ಅನೇಕ ಪುರಾವೆಗಳು ಈಗ ಹೊರಗೆ ಬಂದಿವೆ.

ಅವರ ಐತಿಹಾಸಿಕ ಭಾವಚಿತ್ರಗಳಲ್ಲಿ ಕಾಣಿಸುವ ಒಂದು ವಜ್ರದ ಹಾರವು ಭಾರತದಿಂದ ಕಳಿಸಲಾದ ಮದುವೆಯ ಉಡುಗೊರೆಯಾಗಿತ್ತು ಎಂಬುದು ವಿಶೇಷ.

ಕ್ವೀನ್ಸ್​ ವಾರ್ಡ್​ರೋಬ್​ನಲ್ಲಿ ವಿಶೇಷ ಸ್ಥಾನ ಪಡೆದಿದ್ದ 300-ವಜ್ರದ ನೆಕ್ಲೇಸ್​ ಅನ್ನು ಹೈದರಾಬಾದ್​ನ ನಿಜಾಮ್,​ ಅವರ ಮದುವೆಯ ಉಡುಗೊರೆಯಾಗಿ ನೀಡಿದ್ದರು. ಅದನ್ನು 1930ರ ದಶಕದಲ್ಲಿ ತಯಾರಿಸಲಾಗಿತ್ತು.

1947 ರಲ್ಲಿ ಹೈದರಾಬಾದಿನ ನಿಜಾಮನಿಂದ ಮದುವೆಯ ಉಡುಗೊರೆಯಾಗಿ ಅಂದಿನ ರಾಜಕುಮಾರಿ ಎಲಿಜಬೆತ್​ ಅವರಿಗೆ ನೀಡಲಾಗಿತ್ತು. ರಾಜಕುಮಾರಿ ಎಲಿಜಬೆತ್​ ಅವರೇ ಮದುವೆಯ ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಬೇಕು ಎಂದು ಲಂಡನ್​ನಲ್ಲಿರುವ ಸಂಸ್ಥೆಗೆ ನಿಜಾಮ್​ ಕೋರಿದ್ದರು, ಸರಿಸುಮಾರು 300 ವಜ್ರಗಳನ್ನು ಹೊಂದಿರುವ ಈ ಪ್ಲಾಟಿನಂ ನೆಕ್ಲೇಸ್​ ಅನ್ನು ಅವರು ಆಯ್ಕೆ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...