alex Certify ಈ ವರ್ಷ ಯಾವಾಗ ಬರಲಿದೆ ರಕ್ಷಾ ಬಂಧನ…? ರಾಖಿ ಕಟ್ಟುವುದಕ್ಕೆ ಶುಭ ಘಳಿಗೆ ಯಾವುದು….? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಯಾವಾಗ ಬರಲಿದೆ ರಕ್ಷಾ ಬಂಧನ…? ರಾಖಿ ಕಟ್ಟುವುದಕ್ಕೆ ಶುಭ ಘಳಿಗೆ ಯಾವುದು….? ಇಲ್ಲಿದೆ ಮಾಹಿತಿ

ರಕ್ಷಾ ಬಂಧನ, ಅಣ್ಣ-ತಂಗಿಯ, ಅಕ್ಕ ತಮ್ಮನ ಬಾಂಧವ್ಯಕ್ಕೆ ಸಂಕೇತವಾಗಿರೋ ಹಬ್ಬ. ಸಹೋದರರಿಗೆ ಸಹೋದರಿ ರಾಖಿ ಕಟ್ಟುತ್ತಾಳೆ ಅನ್ನೋ ಖುಷಿ ಇದ್ದರೆ, ಇನ್ನು ಸಹೋದರಿಯರಿಗೆ ತಾವು ಅಣ್ಣನಿಗೋ ತಮ್ಮನಿಗೋ ರಾಖಿ ಕಟ್ಟುತ್ತೇವೆ ಅನ್ನೋ ಸಡಗರ. ಈ ರಾಖಿ ಹಬ್ಬವನ್ನ ಪ್ರತಿವರ್ಷ ಸಾವನ್ ಪೂರ್ಣಿಮಾ ದಿನದಂದು ಆಚರಿಸಲಾಗುತ್ತೆ.

ಶತ ಶತಮಾನದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದನ್ನ ಶ್ರಾವಣ ಪೂರ್ಣಿಮಾ ಅಥವಾ ಕಜರಿ ಪೂನಂ ಅಂತಾನೂ ಕರೆಯಲಾಗುತ್ತೆ. ಇದೇ ಹಬ್ಬ ಈ ವರ್ಷ ಆಗಸ್ಟ್ 11ರ ಗುರುವಾರದಂದು ಬರುತ್ತದೆ. ರಕ್ಷಾ ಬಂಧನ 2022ರ ಶುಭ ಸಂದರ್ಭದಲ್ಲಿ, ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ಮತ್ತು ಕಷ್ಟ ಬಂದಾಗೆಲ್ಲ ತಮ್ಮನ್ನ ರಕ್ಷಿಸಬೇಕು ಅಂತ ರಾಖಿ ಕಟ್ಟುವ ಮೂಲಕ ನಿರೀಕ್ಷೆ ಇಡುತ್ತಾರೆ. ಅದೇ ಸಮಯದಲ್ಲಿ ಸಹೋದರರು ತಮ್ಮ ಸಹೋದರಿಯರನ್ನು ಎಲ್ಲ ತೊಂದರೆಗಳಿಂದ ರಕ್ಷಿಸುವುದಾಗಿ ಭರವಸೆ ನೀಡುತ್ತಾರೆ. ಈ ವರ್ಷದ ರಕ್ಷಾ ಬಂಧನದ ಮಹತ್ವ ಏನು ಅನ್ನೋದನ್ನ ತಿಳಿಯೋಣ.

ಸಾವನ್‌ ಪೂರ್ಣಿಮಾ, ಅಂದರೆ ಸಾವನ್‌ ತಿಂಗಳನಿಂದ ಬರುವ ಹುಣ್ಣಿಮೆಯಂದು ಬರುವ ದಿನದಂದು ಈ ಪವಿತ್ರ ಹಬ್ಬವನ್ನ ಆಚರಿಸಲಾಗುತ್ತೆ. ಪಂಚಾಂಗದ ಪ್ರಕಾರ, 2022ರ ಆಗಸ್ಟ್ 11ರಂದು ಬೆಳಿಗ್ಗೆ 10.38 ರಿಂದ ಪೂರ್ಣಿಮಾ ತಿಥಿ ಪ್ರಾರಂಭವಾಗುತ್ತೆ. ಮತ್ತೊಂದೆಡೆ ಇದೇ ಹುಣ್ಣಿಮೆ ಮರುದಿನ ಆಗಸ್ಟ್ 12 ಶುಕ್ರವಾರ 7.05 ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದಯ ತಿಥಿಯ ಪ್ರಕಾರ ಆಗಸ್ಟ್ 11ರಂದು ರಕ್ಷಾ ಬಂಧನ ಹಬ್ಬವನ್ನ ಆಚರಿಸಲಾಗುತ್ತೆ.
ಪೂರ್ಣಿಮಾ ತಿಥಿ ಆರಂಭ, ಆಗಸ್ಟ್ 11, 2022 ಸಮಯ ಬೆಳಿಗ್ಗೆ 10:38

ರಕ್ಷಾ ಬಂಧನ ಭದ್ರಾ ಪೂಂಜ್ – ಸಂಜೆ 5:17 ರಿಂದ 6.18ವರೆಗೆ

ರಕ್ಷಾ ಬಂಧನ ವಿಶೇಷ ಈ ಬಾರಿ ಬೆಳಿಗ್ಗೆ 9.28ರಿಂದ ರಾತ್ರಿ 9.14ರವರೆಗೆ ರಾಖಿಯನ್ನ ಕಟ್ಟಬಹುದು.

ಪುರಾಣದ ಕಥೆಗಳಲ್ಲೂ ರಾಖಿ ಹಬ್ಬದ ಉಲ್ಲೇಖವಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶ್ರೀಕೃಷ್ಣನ ಬೆರಳಿಗೆ ಗಾಯವಾಗುತ್ತೆ. ಆಗ ದ್ರೌಪದಿ ತನ್ನ ಸೀರೆಯನ್ನ ಹರಿದು ಶ್ರೀ ಕೃಷ್ಣನ ಕೈಗೆ ಆದ ಗಾಯಕ್ಕೆ ಕಟ್ಟುತ್ತಾಳೆ. ದ್ರೌಪದಿ ನೋವಿಗೆ ಸ್ಪಂದಿಸಿದ ರೀತಿಗೆ ಶ್ರೀಕೃಷ್ಣ ಪ್ರಸನ್ನನಾಗುತ್ತಾನೆ. ಆ ಕ್ಷಣದಿಂದಲೇ ದ್ರೌಪದಿಯನ್ನ ತನ್ನ ಸಹೋದರಿ ಅಂತ ಶ್ರೀಕೃಷ್ಣನು ಹೇಳುತ್ತಾನೆ. ಅನ್ನೊ ಕಥೆ ಇದೆ.

ಇದೊಂದು ಹಬ್ಬವಾದರೂ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿ ಮಾಡುತ್ತೆ. ಅಷ್ಟೆ ಅಲ್ಲ ರಾಖಿ ತಟ್ಟೆಯನ್ನ ಸಿಂಗರಿಸಿ ಸಹೋದರನಿಗೆ ತಿಲಕ ಇಟ್ಟು ರಾಖಿ ಕಟ್ಟುವುದೇ ಒಂದು ಸಡಗರ, ರಾಖಿ ಕಟ್ಟಿದ್ದಕ್ಕೆ ಸಹೋದರಿಯರಿಗೆ ಪ್ರೀತಿ ಉಡುಗೊರೆ ಕೊಡುವುದು ತಾನು ಯಾವತ್ತಿಗೂ ನಿನ್ನ ಜೊತೆ ಇರುತ್ತೇನೆ ಅನ್ನೊ ಭರವಸೆ ಕೊಡುವುದಿದೆ ಅಲ್ಲ.. ಆ ಒಂದು ಭಾವನೆ ಅದ್ಭುತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...