alex Certify ನಿಮಗೂ ಬಂದಿದೆಯಾ ಈ ವಾಟ್ಸಾಪ್‌ ಮೆಸೇಜ್‌ ? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೂ ಬಂದಿದೆಯಾ ಈ ವಾಟ್ಸಾಪ್‌ ಮೆಸೇಜ್‌ ? ಹಾಗಾದ್ರೆ ಈ ಸುದ್ದಿ ಓದಿ

ʼಕೌನ್​ ಬನೇಗಾ ಕರೋಡ್ಪತಿʼ (ಕೆಬಿಸಿ) ಭಾರತೀಯರ ಹೃದಯಕ್ಕೆ ಹತ್ತಿರವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಶೋ ವ್ಯಾಪಕ ಪ್ರಶಂಸೆಯನ್ನು ಗಳಿಸಿದೆ ಮತ್ತು ಅನೇಕ ಭಾರತೀಯ ಮನೆಗಳಲ್ಲಿ ಚಾಚೂ ತಪ್ಪದೇ ವೀಕ್ಷಿಸುತ್ತಾರೆ. ಆ ಶೋನಲ್ಲಿ ಸ್ಪರ್ಧಿಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರೆ ನಗದು ಬಹುಮಾನ ನೀಡಲಾಗುತ್ತದೆ. ಈ ಶೋ ತನ್ನ ವೀಕ್ಷಕರಿಗೆ ಸಹ ಆಟವಾಡಲು ಅವಕಾಶ ನೀಡುತ್ತದೆ.

ಭಾರತ ಮತ್ತು ಪಾಕಿಸ್ತಾನದ ಕೆಲ ವಂಚಕರು ಕಾರ್ಯಕ್ರಮದ ವಿಶ್ವಾಸಾರ್ಹತೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅನೇಕರನ್ನು ವಂಚಿಸಿದ್ದಾರೆ. ಅವರು ಜನರನ್ನು ವಂಚಿಸುವ ಒಂದು ಮಾದರಿಯನ್ನು ಸಹ ಹೊಂದಿದ್ದಾರೆ.

ಸೆೈಬರ್​ ವಂಚಕರು ತಮ್ಮ ಗುರಿಗಳನ್ನು ಸೆಳೆಯಲು 25 ಲಕ್ಷ ರೂಪಾಯಿಗಳ ಲಾಟರಿ ಭರವಸೆ ನೀಡುವ ವಾಟ್ಸಾಪ್​ ಸಂದೇಶವನ್ನು ಕಳುಹಿಸುತ್ತಾರೆ. ಅವರು ಕೆಬಿಸಿ ಆನ್​ಲೈನ್​ ಲಾಟರಿ ಇಲಾಖೆಯಿಂದ ಬಂದವರು ಎಂದು ಹೇಳಿಕೊಳ್ಳುತ್ತಾರೆ.

ಸ್ಕ್ಯಾಮರ್​ಗಳು ನಿರ್ದಿಷ್ಟ ಸಂಖ್ಯೆಗೆ ಕರೆ ಮಾಡಿ ಪ್ರಚೋದಿಸುತ್ತಾರೆ ಮತ್ತು ನಂತರ ಮುಂಗಡ ಹಣವನ್ನು ಕೇಳಿ ವಂಚಿಸುತ್ತಾರೆ. ಇತ್ತೀಚೆಗಷ್ಟೇ ಹೈದರಾಬಾದಿನ ವ್ಯಕ್ತಿಯೊಬ್ಬರು ಇಂತಹದೊಂದು ಆಫರ್​ ಗೆ ಬಲಿಯಾಗಿ ಸುಮಾರು 3 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಮತ್ತೊಂದು ನಿದರ್ಶನದಲ್ಲಿ, ನಕಲಿ ಕೆಬಿಸಿ ಲಾಟರಿ ಯೋಜನೆಯನ್ನು ಬಳಸಿಕೊಂಡು 100 ಕ್ಕೂ ಹೆಚ್ಚು ಜನರನ್ನು ವಂಚಿಸಿದ ಇಬ್ಬರನ್ನು ದೆಹಲಿ ಪೊಲೀಸರು ಕೆಲ ತಿಂಗಳ ಹಿಂದೆ ಬಂಧಿಸಿದ್ದಾರೆ.

ವಂಚಕರು ಕೆಬಿಸಿ ಲಾಟರಿ, ಕೌನ್​ ಬನೇಗಾ ಜಂಟಿಯಾಗಿ ಆಯೋಜಿಸಿದ್ದ ಲಾಟರಿಯಲ್ಲಿ ತಮ್ಮ ಮೊಬೈಲ್​ ಸಂಖ್ಯೆ ಗೆದ್ದಿದೆ ಎಂದು ಹೇಳಿಕೊಂಡು ಅಪರಿಚಿತ ಸಂಖ್ಯೆಗಳಿಂದ ವಾಟ್ಸಪ್​ ಸಂದೇಶಗಳನ್ನು ಕಳುಹಿಸುತ್ತಾರೆ.

ವಾಟ್ಸಾಪ್​ ಸಂದೇಶದಲ್ಲಿ ನಂಬಿಕೆ ಹುಟ್ಟಿಸಲು ರಿಲಯನ್ಸ್​ ಜಿಯೋ ಮತ್ತು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಲೋಗೋಗಳನ್ನು ಹಾಕುತ್ತಾರೆ ಮತ್ತು 25 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಭರವಸೆ ನೀಡುತ್ತಾರೆ. ನಂತರ ಆ ಲಾಟರಿಯನ್ನು ಕ್ಲೈಮ್​ ಮಾಡಲು ಅದೇ ವಾಟ್ಸಪ್​ ಸಂದೇಶದಲ್ಲಿ ಸಂಖ್ಯೆಯನ್ನು ನೀಡುತ್ತಾರೆ. ಸಂತ್ರಸ್ತರು ಆ ಸಂಖ್ಯೆಗೆ ಕರೆ ಮಾಡಿದರೆ, ಲಾಟರಿಯನ್ನು ಕ್ಲೈಮ್​ ಮಾಡಲು ಮೊದಲು ರೀಫಂಡ್​, ಸಂಸ್ಕರಣಾ ಶುಲ್ಕ/ಜಿಎಸ್​ಟಿ/ದಾಖಲಾತಿ ಶುಲ್ಕವನ್ನು ಪಾವತಿಸುವಂತೆ ವಂಚಕರು ಕೇಳುತ್ತಾರೆ.

ಸಂತ್ರಸ್ತರು ಮೊದಲ ಹಣ ಕೊಟ್ಟರೆ ಬಳಿಕ, ಅವರು ಒಂದಲ್ಲ ಒಂದು ನೆಪದಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ಮುಂದೆ ಲಾಟರಿ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಮತ್ತಷ್ಟು ಹಣ ವಸೂಲಿ ಮಾಡುತ್ತಾರೆ. ಒಟ್ಟಾರೆ ದೊಡ್ಡ ಮೊತ್ತಕ್ಕೆ ಟೋಪಿಹಾಕಿ ಬಿಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...