alex Certify ವಾಟ್ಸಾಪ್​ ಬಳಕೆದಾರರಿಗೆ ಗುಡ್ ​​ನ್ಯೂಸ್​: ಸೇರ್ಪಡೆಯಾಗಿದೆ ಮತ್ತೊಂದು ಹೊಸ ಫೀಚರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್​ ಬಳಕೆದಾರರಿಗೆ ಗುಡ್ ​​ನ್ಯೂಸ್​: ಸೇರ್ಪಡೆಯಾಗಿದೆ ಮತ್ತೊಂದು ಹೊಸ ಫೀಚರ್​

ಹಲವಾರು ನೂತನ ಅಪ್​ಡೇಟ್ಸ್​ಗಳೊಂದಿಗೆ ಬಂದಿರುವ ವಾಟ್ಸಾಪ್ ಇದಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದೆ. ಇದೀಗ ತನ್ನ ನೂತನ ಅಪ್‌ಡೇಟ್‌ನಲ್ಲಿ ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಿಸಿದ್ದು, ಇದು ಐಒಎಸ್​ ಹಾಗೂ ಅಂಡ್ರಾಯ್ಡ್​ ಫೋನ್​ಗಳಿಗೂ ಅನ್ವಯ ಆಗಲಿದೆ.

ಆರಂಭದಲ್ಲಿ ವಾಟ್ಸಾಪ್​​ ಗ್ರೂಪ್‌ಗೆ 256 ಸದಸ್ಯರನ್ನು ಸೇರಿಸಲು ಅವಕಾಶ ಇತ್ತು. ಬಳಿಕ ಆ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಿತ್ತು. ಈಗ ಗ್ರೂಪ್‌ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡಿದೆ. ಕಳೆದ ತಿಂಗಳು ಜಾರಿಗೊಳಿಸಿದ್ದ ಈ ಹೊಸ ಅಪ್​ಡೇಟ್​ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿತ್ತು, ಇದನ್ನೀಗ ಎಲ್ಲಾ ಸ್ಮಾರ್ಟ್​ಫೋನ್​ಗಳಲ್ಲಿಯೂ ಬಳಸಬಹುದಾಗಿದೆ ಎಂದು ಕಂಪೆನಿ ಹೇಳಿದೆ.

ಇದನ್ನು ಅಪ್​ಡೇಟ್​ ಮಾಡುವುದು ಹೇಗೆ ? ಇಲ್ಲಿದೆ ವಿವರ

ವಾಟ್ಸ್​ಆ್ಯಪ್​ ಓಪನ್​ ಮಾಡಿದಾಗ ಮೇಲಿನ ಎಡಭಾಗದಲ್ಲಿ ಮನುಷ್ಯರ ಆಕೃತಿ ಗ್ರೂಪ್​ ಚಿಹ್ನೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿ

ಆಗ start your community ಸಂದೇಶ ಕಾಣಿಸುತ್ತದೆ.

ಕೆಳಭಾಗದಲ್ಲಿರುವ ‘ಗೆಟ್ ಸ್ಟಾರ್ಟ್’ ಆಯ್ಕೆಯನ್ನು ಟ್ಯಾಪ್ ಮಾಡಿ

ಸಮುದಾಯದ ಹೆಸರನ್ನು ಬರೆಯಿರಿ ಮತ್ತು ವಿವರಣೆಯನ್ನು ಭರ್ತಿ ಮಾಡಿ

ಕೆಳಗಿನ ಬಲಭಾಗದಲ್ಲಿ ಮುಂದೆ/ಮುಂದಿನ ಬಾಣದ ಮೇಲೆ ಟ್ಯಾಪ್ ಮಾಡಿ

ಈಗ ನೀವು ಎರಡು ಆಯ್ಕೆಗಳನ್ನು ನೋಡುತ್ತೀರಿ – ಹೊಸ ಗುಂಪನ್ನು ರಚಿಸಿ ಮತ್ತು ಅಸ್ತಿತ್ವದಲ್ಲಿರುವ ಗುಂಪನ್ನು ಸೇರಿಸಿ

ಇದಕ್ಕೆ ಸೇರಿಸಲು ನೀವು ಈಗಾಗಲೇ ಬಹು ಗುಂಪುಗಳನ್ನು ಹೊಂದಿದ್ದರೆ, ಅಸ್ತಿತ್ವದಲ್ಲಿರುವ ಗುಂಪನ್ನು ಸೇರಿಸು ಕ್ಲಿಕ್ ಮಾಡಿ

ನೀವು ಗುಂಪುಗಳ ಪಟ್ಟಿಯನ್ನು ನೋಡುತ್ತೀರಿ – ಅವುಗಳಲ್ಲಿ ಆಯ್ಕೆಮಾಡಿ

ಕೆಳಗಿನ ಬಲಭಾಗದಲ್ಲಿ ಮುಂದೆ/ಮುಂದಿನ ಬಾಣದ ಮೇಲೆ ಟ್ಯಾಪ್ ಮಾಡಿ

ಅಷ್ಟೇ, ನಿಮ್ಮ ಸಮುದಾಯವು ಈಗ ‘ಸಮುದಾಯ’ ಆಯ್ಕೆಯ ಅಡಿಯಲ್ಲಿ ಗೋಚರಿಸುತ್ತದೆ

ಈ ಹೊಸ ಫೀಚರ್​ ಮೂಲಕ ನೀವು ಈಗ ಒಂದೇ ಗುಂಪಿನಲ್ಲಿ 1024 ಮಂದಿಯನ್ನು ಸೇರಿಸಿ ಒಟ್ಟಿಗೇ ಸಂವಹನ ನಡೆಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...