alex Certify ವಿವಾದಾತ್ಮಕ ಗೌಪ್ಯತಾ ನೀತಿ ಕುರಿತಂತೆ ಮಹತ್ವದ ನಿರ್ಧಾರ ಘೋಷಿಸಿದ ʼವಾಟ್ಸಾಪ್ʼ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದಾತ್ಮಕ ಗೌಪ್ಯತಾ ನೀತಿ ಕುರಿತಂತೆ ಮಹತ್ವದ ನಿರ್ಧಾರ ಘೋಷಿಸಿದ ʼವಾಟ್ಸಾಪ್ʼ​

ಫೇಸ್​​ಬುಕ್​​ನೊಂದಿಗೆ ಬಳಕೆದಾರರ ಡೇಟಾ ಹಂಚಿಕೆ ಮಾಡುವ ವಾಟ್ಸಾಪ್​​ ನಿರ್ಧಾರ ಭಾರತೀಯ ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂಬ ಆರೋಪಗಳ ನಡುವೆಯೇ ವಾಟ್ಸಾಪ್​ ಸ್ವಯಂಪ್ರೇರಿತವಾಗಿ ಈ ಹೊಸ ಗೌಪ್ಯತಾ ನೀತಿಯನ್ನ ನಿಲ್ಲಿಸಿದೆ ಎಂದು ದೆಹಲಿ ಹೈಕೋರ್ಟ್ಗೆ ತಿಳಿಸಿದೆ.‌

ವಿವಾದಾತ್ಮಕ ಗೌಪ್ಯತಾ ನೀತಿಯನ್ನ ಪ್ರಶ್ನಿಸಿ ವಿಚಾರಣೆಗೆ ಮುಂದಾದ ಸಿಸಿಐನ ಕ್ರಮವನ್ನ ಪ್ರಶ್ನಿಸಿ ಮೆಸೆಂಜಿಗ್​ ಫ್ಲಾಟ್​​ಫಾರಂ ಹಾಗೂ ಅದರ ಮಾಲೀಕರಾದ ಫೇಸ್​ಬುಕ್​ ಹೈಕೋರ್ಟ್​ಗೆ ಸಲ್ಲಿಸಿದ್ದ ಮನವಿಯನ್ನ ನ್ಯಾಯಪೀಠ ಆಲಿಸುತ್ತಿತ್ತು.

ಈ ಹಿಂದೆ ಸಿಸಿಐ ವಿಚಾರಣೆ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನ ಹೈಕೋರ್ಟ್​ನ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಅಲ್ಲದೇ ಗೌಪ್ಯತಾ ನೀತಿ ಕುರಿತಂತೆ ಸ್ಪಷ್ಟ ಮಾಹಿತಿ ಕೇಳಿ ಎರಡೂ ಕಂಪನಿಗಳಿಗೆ ನೋಟಿಸ್​ ಕಳುಹಿಸಿತ್ತು.

ಕಳೆದ ತಿಂಗಳು ಕೇಂದ್ರ ಸರ್ಕಾರ, ವಾಟ್ಸಾಪ್​​ ಬಲವಂತವಾಗಿ ಬಳಕೆದಾರರ ಬಳಿ ಗೌಪ್ಯತೆ ನೀತಿಯನ್ನ ಒಪ್ಪಿಕೊಳ್ಳುವಂತೆ ಮಾಡುತ್ತಿದೆ ಎಂದು ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿತ್ತು.

ವಾಟ್ಸಾಪ್​​ ಹೊಸ ಗೌಪ್ಯತಾ ನೀತಿಯು ಫೆಬ್ರವರಿ ತಿಂಗಳಿನಿಂದಲೇ ಜಾರಿಗೆ ಬರಬೇಕಿತ್ತು. ಆದರೆ ಸಾಕಷ್ಟು ವಿರೋಧಗಳ ಹಿನ್ನೆಲೆ ಈ ಗೌಪ್ಯತಾ ನೀತಿ ಜಾರಿ ಮುಂದೂಡಿಕೆಯಾಗುತ್ತಲೇ ಇತ್ತು. ಅಲ್ಲದೇ ವಾಟ್ಸಾಪ್​​ನ ಈ ಹೊಸ ಗೌಪ್ಯತಾ ನೀತಿ ಕಂಪನಿಗೆ ಸಾಕಷ್ಟು ಹಿನ್ನಡೆಯನ್ನ ಉಂಟು ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...