alex Certify ಇಲ್ಲಿದೆ ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳ ಪಟ್ಟಿ; ಇಂಟ್ರಸ್ಟಿಂಗ್‌ ಲಿಸ್ಟ್‌ ಬಿಡುಗಡೆ ಮಾಡಿದ ಸ್ನಾಪ್‌ ಚಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳ ಪಟ್ಟಿ; ಇಂಟ್ರಸ್ಟಿಂಗ್‌ ಲಿಸ್ಟ್‌ ಬಿಡುಗಡೆ ಮಾಡಿದ ಸ್ನಾಪ್‌ ಚಾಟ್

ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆಂದು ಇರುವ ವಿಶ್ಯುವಲ್ ಮೆಸೇಜಿಂಗ್ ಆಪ್, ಸ್ನ್ಯಾಪ್ ಚಾಟ್ ಇಂದು YouGov ನ ಸಹಭಾಗಿತ್ವದಲ್ಲಿ ಭಾರತೀಯ ಅಡ್ಡಹೆಸರಿನ ಸಂಸ್ಕೃತಿಯನ್ನು ಅನಾವರಣ ಮಾಡಿದೆ. ಸ್ನ್ಯಾಪ್ ಚಾಟ್ ಮತ್ತು YouGov ಸಹಭಾಗಿತ್ವದಲ್ಲಿ ಈ ಅಡ್ಡ ಹೆಸರಿನ ಸಂಶೋಧನೆ ನಡೆದಿದ್ದು, ದೇಶಾದ್ಯಂತ ಇರುವ ವಿಭಿನ್ನ ಬಗೆಯ ಅಡ್ಡ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ.

ದೇಶಾದ್ಯಂತ ಸೋನು, ಬಾಬು, ಮಚ್ಚ, ಶೋನಾ ಮತ್ತು ಪಿಂಕಿ ಎಂಬ ಅಡ್ಡ ಹೆಸರುಗಳು ಅತ್ಯಂತ ಜನಪ್ರಿಯವಾಗಿವೆ. ಈ ಅಡ್ಡ ಹೆಸರಿನ ಬಗ್ಗೆ ಸ್ನ್ಯಾಪ್ ಚಾಟ್ ಅಧ್ಯಯನವನ್ನೇ ನಡೆಸಿದೆ. ಸ್ನ್ಯಾಪ್ ಚಾಟ್ ನ ಲೆನ್ಸ್ ನಲ್ಲಿ ಆಗ್ಮೆಂಟೆಡ್ ರಿಯಾಲಿಟಿಯಲ್ಲಿ(AR) ಭಾರತದ ಟಾಪ್ ಅಡ್ಡ ಹೆಸರುಗಳು ಮತ್ತು ನನ್ನ ಅಡ್ಡಹೆಸರು ಎಂಬ ಎರಡು ಬಗೆಯ ಅಡ್ಡ ಹೆಸರುಗಳ ಬಗ್ಗೆ ಅಧ್ಯಯನ ನಡೆಸಿದೆ.

ಮೊದಲ ಇಂಟರ್ ಆ್ಯಕ್ಟೀವ್ ಎಆರ್ ಲೆನ್ಸ್ ಗೆ ‘India’s Top Nicknames’ ಎಂದು ಕರೆಯಲಾಗಿತ್ತು. ಇದರಲ್ಲಿ ಭಾರತದ ಐದು ಅತ್ಯಂತ ಜನಪ್ರಿಯ ಅಡ್ಡ ಹೆಸರುಗಳನ್ನು ಆಯ್ಕೆ ಮಾಡಲಾಯಿತು. ಕೇವಲ ಇದಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಭಾರತೀಯರಿಗೆ `ನನ್ನ ಅಡ್ಡ ಹೆಸರು’ ಅನ್ನು ತಮ್ಮದೇ ಆದ ಅಡ್ಡ ಹೆಸರನ್ನು ಸೃಷ್ಟಿಸಲು ಅವಕಾಶ ನೀಡಲಾಗಿತ್ತು. ಗುಡ್ಡು, ಸನ್ನಿ ಮತ್ತು ಟಿಂಕು ಎಂಬ ಹೆಸರಿನಿಂದ ಏಂಜಲ್ ಮತ್ತು ಬೇಬಿವರೆಗೆ ಹೊಸ ಕಸ್ಟಮ್ ನಿಕ್ ನೇಮ್ ಗಳು ಬಂದವು.

ಭಾರತೀಯ Gen Z ಮತ್ತು ಯುವ ಮಿಲೇನಿಯಲ್ ಗಳು ಆನ್ಲೈನ್ ನಲ್ಲಿ ತಮ್ಮ ಅಡ್ಡ ಹೆಸೆರುಗಳನ್ನು ಬಳಸುವುದನ್ನು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಇದಕ್ಕೆ ಪ್ರಮುಖ ಕಾರಣ ಅವರ ಹೆಸರುಗಳನ್ನು ಸ್ನ್ಯಾಪಿಯಾಗಿ, ಕೂಲ್ ಆಗಿ ಕಾಣುವಂತೆ ಮತ್ತು ತಮ್ಮ ಖಾಸಗಿತನವನ್ನು ರಕ್ಷಣೆ ಮಾಡಿಕೊಳ್ಳುವುದಾಗಿದೆ. ಇದಲ್ಲದೇ, ಅಡ್ಡಹೆಸರುಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದಾಗಿದೆ. ವಿಶೇಷವೆಂದರೆ ಶೇ.96 ರಷ್ಟು ಜನರು ತಮ್ಮ ಜೀವನದ ಒಂದಲ್ಲಾ ಒಂದು ಹಂತದಲ್ಲಿ ತಮ್ಮ ಅಡ್ಡ ಹೆಸರನ್ನು ಬಳಸುತ್ತಿದ್ದಾರೆ ಎಂಬುದನ್ನು ಅಂಕಿಅಂಶಗಳು ದೃಢಪಡಿಸಿವೆ.

ಭಾರತದಲ್ಲಿ, ಅಡ್ಡಹೆಸರುಗಳು ಕೇವಲ ಲೇಬಲ್ ಗಳಾಗಿಲ್ಲ. ಇವುಗಳು ಒಬ್ಬ ವ್ಯಕ್ತಿಯ ವೈಯಕ್ತಿಕ ಗುರುತುಗಳನ್ನು ಹೇಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾಮಾನ್ಯವಾಗಿ ಸಾಕುಪ್ರಾಣಿಗಳ ಹೆಸರುಗಳು, ಮನೆಯ ಹೆಸರು ಅಥವಾ ದಾಕ್ ನಾಮ್ ಎಂದು ಕರೆಯಲಾಗುತ್ತದೆ. ಈ ಅಡ್ಡಹೆಸರುಗಳು ನಮ್ಮ ಸಂಸ್ಕೃತಿಯಲ್ಲೇ ಸಮ್ಮಿಳಿತವಾಗಿಬಿಟ್ಟಿವೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಮಟ್ಟಿಗೆ ಹೇಳುವುದಾದರೆ, ಇಲ್ಲಿ ಹತ್ತು ಹಲವಾರು ಅಡ್ಡ ಹೆಸರುಗಳು ಕಂಡುಬರುತ್ತವೆ. ಅವುಗಳಲ್ಲಿ ಸಮೀಕ್ಷೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಅಡ್ಡ ಹೆಸರುಗಳೆಂದರೆ ಮಚ್ಚ, ಚಿನ್ನು, ಅನು, ಅಮ್ಮು ಮತ್ತು ಮಗಾ.

ಆದರೆ, ಈ ಜನಪ್ರಿಯತೆಯನ್ನು ಬದಿಗಿಟ್ಟು ನೋಡಿದರೆ, ಈ ಪ್ರೀತಿಯ ಅಡ್ಡಹೆಸರುಗಳು ಭಾರತೀಯರು ತಮ್ಮನ್ನು ತಾವು ಗ್ರಹಿಸಿಕೊಳ್ಳುವ ಮತ್ತು ಇತರೊಂದಿಗೆ ಸಂವಹನ ನಡೆಸುವ ವಿಧಾನದ ಮೇಲೆ ಹೇಗೆ ಮಹತ್ವದ ಪ್ರಭಾವ ಬೀರಿದ್ದಾರೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಡ್ಡ ಹೆಸರುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಜನಪ್ರಿಯತೆಯ ಜತೆಯಲ್ಲಿ ಅಡ್ಡಹೆಸರುಗಳು ಹೆಮ್ಮೆಯ ವಿಚಾರವಾಗಿವೆ. ಅಡ್ಡ ಹೆಸರುಗಳ ಬಗ್ಗೆ ಬಹುತೇಕ ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಂದೆಡೆ ಕೇವಲ ಶೇ.15 ರಷ್ಟು ಜನರು ತಮ್ಮ ಅಡ್ಡ ಹೆಸರುಗಳನ್ನು ಸಾರ್ವಜನಿಕವಾಗಿ ಬಳಸಲು ಮುಜುಗರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

APAC, Snap Inc ನ ಮೀಡಿಯಾ ಪಾರ್ನರ್ ಶಿಪ್ ನ ನಿರ್ದೇಶಕ ಕನಿಷ್ಕ್ ಖನ್ನಾ ಅವರು ಮಾತನಾಡಿ, “ಅಡ್ಡ ಹೆಸರುಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿವೆ ಮತ್ತು ಇವುಗಳು ಸ್ನೇಹಿತರು ಅಥವಾ ಕುಟುಂಬದಲ್ಲಿ ನಮ್ಮ ನೈಜವಾದ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಕೆಲವೊಂದು ಸ್ವಾರಸ್ಯಕರ, ಚಿತ್ರವಿಚಿತ್ರವಾದ, ರೊಮ್ಯಾಂಟಿಕ್ ಮತ್ತು ವಿನೋದದವರೆಗಿನ ಭಾರತೀಯ ಅಡ್ಡಹೆಸರುಗಳನ್ನು ನೋಡುತ್ತಿದ್ದೇವೆ. ಈ ಕಸ್ಟಮೈಸ್ಡ್ ಎನಿಸುವ ಅಡ್ಡ ಹೆಸರು AR ಅನುಭವವು ಬಳಕೆದಾರರನ್ನು ಅಂದರೆ, ಅಡ್ಡ ಹೆಸರನ್ನು ಹೇಳುವ ವ್ಯಕ್ತಿ ಮತ್ತು ಆ ಹೆಸರಿನಿಂದ ಕರೆಯಿಸಿಕೊಳ್ಳುವ ವ್ಯಕ್ತಿಗಳನ್ನು ಪರಸ್ಪರ ಹತ್ತಿರಕ್ಕೆ ತರಲು ಸಹಾಯ ಮಾಡುತ್ತದೆ. ಅಲ್ಲದೇ, ಈ ವಿನೋದಮಯವಾದ ಅಡ್ಡ ಹೆಸರುಗಳನ್ನು ಹಂಚಿಕೊಳ್ಳುವಾಗ ಸಂತೋಷವನ್ನು ತರುತ್ತದೆ’’ ಎಂದಿದ್ದಾರೆ.

ಭಾರತೀಯರು ಬಳಸುವ ಅಡ್ಡಹೆಸರುಗಳು ಆಳವಾದ ಸಂಪರ್ಕಗಳು ಮತ್ತು ಮೌಲ್ಯಾಧಾರಿತವಾದ ಸಂಬಂಧಗಳನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ. ಅಡ್ಡ ಹೆಸರುಗಳನ್ನು ಬಳಸುವುದರಿಂದ ಮತ್ತೊಬ್ಬರಿಗೆ ತುಂಬಾ ಸನಿಹದಲ್ಲಿರುವಂತಹ ಅನುಭವವಾಗುತ್ತದೆ ಎಂದು ಶೇ.67 ರಷ್ಟು ಭಾರತೀಯರು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಅಡ್ಡ ಹೆಸರುಗಳ ಪರಿಕಲ್ಪನೆಯಲ್ಲಿ ಭಾವನಾತ್ಮಕ ಸಂಬಂಧ ಮತ್ತು ಸಾಂಸ್ಕೃತಿಕ ಬಾಂಧವ್ಯ ಅಡಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಇದುವರೆಗೆ ಅಡ್ಡಹೆಸರನ್ನು ಹೊಂದಿರುವ ಜನರ ಪೈಕಿ ಶೇ.60 ರಷ್ಟು ಜನರು ತಮ್ಮ ಬಾಲ್ಯ ಅಥವಾ ಶಾಲಾ ವ್ಯಾಸಂಗದ ಸಂದರ್ಭದಲ್ಲಿ ಅಡ್ಡ ಹೆಸರುಗಳನ್ನು ಹೊಂದಿದ್ದುದಾಗಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ಶಾಲೆಗೆ ಸೇರುವ ಮುನ್ನ ಇದ್ದ ಅಡ್ಡ ಹೆಸರೇ ಚಾಲ್ತಿಯಲ್ಲಿದ್ದು, ಒಬ್ಬರನ್ನು ಗುರುತಿಸಲು ಕರೆಯುತ್ತಿದ್ದ ಅಡ್ಡ ಹೆಸರು ಶಾಶ್ವತ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಅಡ್ಡ ಹೆಸರುಗಳು ಪ್ರತ್ಯೇಕವಾದ ಅರ್ಥವನ್ನು ನೀಡುತ್ತವೆ. ಶೇ.61 ರಷ್ಟು ಜನರ ಪ್ರಕಾರ ತಮ್ಮ ಮನೆಗಳಲ್ಲಿ ನಿಜವಾದ ಹೆಸರಿನ ಬದಲು ಬೇರೆ ಹೆಸರಿನಿಂದ ಕರೆಯಲ್ಪಟ್ಟರೆ, ಶೇ.60 ಜನರ ಪ್ರಕಾರ ತಮ್ಮನ್ನು ಜನರು ಅಡ್ಡ ಹೆಸರಿನಿಂದಲೇ ಕರೆಯುತ್ತಾರೆಯೇ ಹೊರತು ನಿಜವಾದ ಹೆಸರಿನಿಂದ ಕರೆಯುವುದಿಲ್ಲ. ಈ ಮೂಲಕ ನಮ್ಮನ್ನು ಗುರುತಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಅಡ್ಡ ಹೆಸರುಗಳು ನಮ್ಮ ಗುರುತಿನ ಹೃದಯ ಮತ್ತು ಆತ್ಮವಿದ್ದಂತೆ ಹಾಗೂ ಇವುಗಳು ನಾವು ಪ್ರೀತಿಸುವ ಬಲವಾದ ಸಂಪರ್ಕಗಳನ್ನು ಸೂಚಿಸುತ್ತವೆ ಎಂದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ಅಡ್ಡ ಹೆಸರಿನ ಎರಡು ಲೆನ್ಸ್ ಗಳು ಭಾರತದಲ್ಲಿ ಸ್ನ್ಯಾಪ್ ಚಾಟ್ ನಲ್ಲಿ ಜೂನ್ 21 ರಿಂದ ಲಭ್ಯವಾಗಲಿವೆ. ಈ ಲೆನ್ಸ್ ನಲ್ಲಿ ‘IN’s Top Nicknames’ and ‘My Nickname IN’ ಎಂದು ಸರ್ಚ್ ಮಾಡಿದರೆ ನಿಮಗೆ ಅಡ್ಡ ಹೆಸರಿನ ಅನುಭವ ಸಿಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...