alex Certify ಉಗುರುಗಳ ಉತ್ತಮ ‘ಆರೋಗ್ಯ’ಕ್ಕಾಗಿ ಮಾಡಬೇಕಾದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರುಗಳ ಉತ್ತಮ ‘ಆರೋಗ್ಯ’ಕ್ಕಾಗಿ ಮಾಡಬೇಕಾದ್ದೇನು…?

ಕೈ ಉಗುರು ಆರೋಗ್ಯವಾಗಿರಲು ಮೆನಿಕ್ಯೂರ್ ಮಾಡಿಕೊಳ್ಳುವುದು ಒಂದೇ ಅಲ್ಲ. ಹೆಚ್ಚುವರಿ ಜಾಗ್ರತೆ ವಹಿಸಿದರೆ ಉಗುರುಗಳ ಅಂದ ಇನ್ನಷ್ಟು ಹೆಚ್ಚು ಆಗುವುದರಲ್ಲಿ ಸಂದೇಹವಿಲ್ಲ.

* ಉಗುರು ಶಕ್ತಿಹೀನವಾಗಿ ಕಂಡು ಬರುತ್ತಿವೆಯೇ, ಹಾಗಿದ್ದರೆ ನಾವು ಸೇವಿಸುವ ಆಹಾರದಲ್ಲಿ ಬಯೋಟಿನ್ ಇರುವಂತೆ ನೋಡಿಕೊಳ್ಳಬೇಕು. ಇದು ಉಗುರು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಬಯೋಟಿನ್ ಹೆಚ್ಚಾಗಿರುವ ಅಣಬೆ, ಮೊಟ್ಟೆ, ಕಾಲಿಫ್ಲವರ್, ಬಾಳೆ, ಸೋಯಾಬೀನ್ಸ್  ಕಾಳಿನ ಸೇವನೆ ಉತ್ತಮ.

* ಉಗುರು ಆರೋಗ್ಯವಾಗಿರಲು ಅದಕ್ಕೆ ಬಣ್ಣ ಹಚ್ಚಿಕೊಳ್ಳುವುದು ಉತ್ತಮ. ಬಣ್ಣ ಉಗುರಿಗೆ ರಕ್ಷಣೆಯಾಗಿರುತ್ತದೆ. ಆದರೆ ಆಗಾಗ ಸ್ವಲ್ಪ ವಿರಾಮ ನೀಡಬೇಕು. ಇದರಿಂದ ಉಗುರುಗಳಿಗೆ ಗಾಳಿ ತಾಗಿ ಫ್ರೆಶ್ ಆಗಿರುತ್ತದೆ. ಸಾಧ್ಯವಾದಷ್ಟು ಅಸಿಟೋನ್ ಇಲ್ಲದ ನೇಲ್ ಪಾಲಿಷ್ ರಿಮೋವರ್ ಆಯ್ದುಕೊಂಡರೆ ಉತ್ತಮ.

* ಉಗುರುಗಳ ಜೊತೆ ಅದರ ಸುತ್ತ ಇರುವ ತೆಳುವಾದ ಪೊರೆಯಂತಹ ಚರ್ಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಬಹಳ ಜನ ಮೆನಿಕ್ಯೂರ್ ನ ಭಾಗವಾಗಿ ಆ ಚರ್ಮವನ್ನು ಹಿಂದಕ್ಕೆ ತಳ್ಳುವುದು, ಇಲ್ಲವೇ ಟ್ರಿಮ್ ಮಾಡುವುದು ಮಾಡುತ್ತಾರೆ. ಆದರೆ ಅದರ ಅಗತ್ಯವಿಲ್ಲ.

* ಫ್ಯಾಷನ್ ಎಂದರೆ ಉಗುರನ್ನು ದೊಡ್ಡದಾಗಿ ಬೆಳೆಸಿ ಬಣ್ಣ ಹಾಕಿಕೊಳ್ಳುವುದೇ ಅಲ್ಲ. ಇಂದಿನ ಟ್ರೆಂಡ್ ಪ್ರಕಾರ ಅವನ್ನು ವಿಭಿನ್ನವಾಗಿ ಕತ್ತರಿಸಿಕೊಂಡು, ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಫ್ಯಾಷನ್. ಹೀಗೆ ಮಾಡುವುದರಿಂದ ಉಗುರುಗಳು ಆರೋಗ್ಯವಾಗಿ ಬೆಳೆಯುತ್ತವೆ.

* ನೀರಿನೊಂದಿಗೆ ಹೆಚ್ಚು ಕೆಲಸ ಮಾಡುವಾಗ ಸಾಧ್ಯವಾದಷ್ಟು ಗ್ಲೌಸ್ ಹಾಕಿಕೊಳ್ಳುವುದು ಆರೋಗ್ಯಕರ. ಇಲ್ಲವಾದರೆ ಹೆಚ್ಚು ಕಾಲ ನೀರಲ್ಲಿ ನೆನೆಯುವುದರಿಂದ ಉಗುರು ಶಕ್ತಿ ಕಳೆದುಕೊಳ್ಳುತ್ತದೆ.

* ಉಗುರಿಗೆ ಸಂಬಂಧಿಸಿದ ಎಂತಹ ಇನ್ಫೆಕ್ಷನ್ ಆದರೂ ಸರಿ ನಿರ್ಲಕ್ಷಿಸಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...