alex Certify ಜೆಫ್​ ಬೆಜೋಸ್​ ಭೂಮಿಗೆ ಮರಳಲು ಬೇಡ ಅನುಮತಿ: ಆನ್‌ ಲೈನ್‌ ನಲ್ಲಿ ಆರಂಭವಾಗಿದೆ ಪಿಟಿಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಫ್​ ಬೆಜೋಸ್​ ಭೂಮಿಗೆ ಮರಳಲು ಬೇಡ ಅನುಮತಿ: ಆನ್‌ ಲೈನ್‌ ನಲ್ಲಿ ಆರಂಭವಾಗಿದೆ ಪಿಟಿಷನ್

ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ ಮುಂದಿನ ತಿಂಗಳು ತಮ್ಮ ಸಹೋದರನ ಜೊತೆ ಬಾಹ್ಯಾಕಾಶದಲ್ಲಿ ಪ್ರವಾಸ ಕೈಗೊಳ್ಳೋದಾಗಿ ಘೋಷಣೆ ಮಾಡಿದ್ದಾರೆ. ಬ್ಲೂ ಒರಿಜಿನ್​ ಮಾಲೀಕರಾಗಿರುವ ಜೆಫ್​ ಬೆಜೋಸ್​ ತಮ್ಮ ಕಂಪನಿಯ ಮೊದಲ ಸಬ್​ ಆರ್ಬಿಟಲ್​ ಸೈಟ್​ ಸೀಯಿಂಗ್​ ಪ್ರಯಾಣಕ್ಕೆ ಉತ್ಸುಕರಾಗಿದ್ದಾರೆ.

ಆದರೆ ಈ ನಡುವೆ ಸಾವಿರಾರು ಮಂದಿ ನೆಟ್ಟಿಗರು ಜೆಫ್​ ಬೆಜೋಸ್​ ವಾಪಸ್​ ಭೂಮಿಗೆ ಮರಳದಂತೆ ತಡೆಯಲು ಆನ್​ಲೈನ್​ ಪಿಟೀಷನ್​ ಒಂದಕ್ಕೆ ಸಹಿ ಹಾಕುತ್ತಿದ್ದಾರೆ ಎನ್ನಲಾಗಿದೆ.

ಜೆಫ್​ ಬೆಜೋಸ್​ಗೆ ಭೂಮಿಗೆ ಮರಳು ಅನುಮತಿ ನೀಡಬೇಡಿ ಎಂಬ ಶೀರ್ಷಿಕೆಯುಳ್ಳ ಆನ್​​ಲೈನ್​ ಪಿಟಿಷನ್​ ಇದಾಗಿದೆ. ಅಲ್ಲದೇ ಮಾನವೀಯತೆಯನ್ನ ಉಳಿಸಿಕೊಳ್ಳೋದು ಇದೀಗ ನಿಮ್ಮ ಕೈಯಲಿದೆ ಎಂದೂ ಈ ಪಿಟೀಷನ್​ನಲ್ಲಿ ಬರೆಯಲಾಗಿದೆ. ಭಾನುವಾರದ ವೇಳೆಗೆ ಈ ಪಿಟೀಷನ್​ಗೆ 18,114 ಮಂದಿ ಸಹಿಯನ್ನ ಹಾಕಿದ್ದಾರೆ ಎನ್ನಲಾಗಿದೆ.

28 ಮಿಲಿಯನ್ ಪೌಂಡ್​ ಹರಾಜಿನ ವಿಜೇತರು ಹಾಗೂ ತನ್ನ ಸಹೋದರ ಮಾರ್ಕ್​ ಜೊತೆ ಜೆಫ್​ ಬೆಜೋಸ್​ ಜುಲೈ 20ರಂದು ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ. ಇದು ಬ್ಲೂ ಒರಿಜಿನ್ ಕಂಪನಿಯ ಮೊದಲ ಸಬ್​ ಆರ್ಬಿಟಲ್​ ಸೈಟ್​ ಸೀಯಿಂಗ್​ ಪ್ರವಾಸವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...