alex Certify ಸುಶ್ಮಿತಾ ಸೇನ್ ​- ಲಲಿತ್​ ಮೋದಿ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶ್ಮಿತಾ ಸೇನ್ ​- ಲಲಿತ್​ ಮೋದಿ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ ?

ಐಪಿಎಲ್​ ಸಂಸ್ಥಾಪಕ ಮತ್ತು ಉದ್ಯಮಿ ಲಲಿತ್​ ಮೋದಿ ಅವರು ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಸುಶ್ಮಿತಾ ಸೇನ್​ ಅವರೊಂದಿಗೆ ಪ್ರಸ್ತುತ ಡೇಟಿಂಗ್​ ನಡೆಸುತ್ತಿರುವುದು ಸಾಕಷ್ಟು ಮಂದಿಗೆ ಅಚ್ಚರಿ ತಂದಿದೆ.

ಕಳೆದ ವಾರ ಸಾಮಾಜಿಕ ಮಾಧ್ಯಮ ಪೋಸ್ಟ್​ನಲ್ಲಿ, ಲಲಿತ್​ ಮೋದಿ, ಸುಶ್ಮಿತಾ ಅವರನ್ನು ತಮ್ಮ ಬೆಟರ್​ ಹಾಫ್​ ಎಂದು ಕರೆದಿದ್ದಾರೆ. ಹಾಗೆಯೇ ಮುಂದೊಂದು ದಿನ ಮದುವೆಯ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ. ಸುಶ್ಮಿತಾ ಮತ್ತು ಲಲಿತ್​ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ನೆಟ್ಟಿಗರು ಚರ್ಚೆ ನಡೆಸಿದ್ದಾರೆ.

ಸುಶ್ಮಿತಾ ಹೈದರಾಬಾದ್​ನ ಬಂಗಾಳಿ ಕುಟುಂಬದ ಭಾರತೀಯ ವಾಯುಪಡೆಯ ಮಾಜಿ ವಿಂಗ್​ ಕಮಾಂಡರ್​ ಶುಬೀರ್​ ಸೇನ್​ ಮತ್ತು ಸುಬ್ರಾ ಸೇನ್​ ದಂಪತಿಗೆ ನವೆಂಬರ್​ 19, 1975ರಂದು ಜನಿಸಿದರು. ಮತ್ತೊಂದೆಡೆ, 58 ವರ್ಷದ ಲಲಿತ್​ ಮೋದಿ ಅವರು ಕ್ರಿಶನ್​ ಕುಮಾರ್​ ಮೋದಿ ಮತ್ತು ಅವರ ಪತ್ನಿ ಬೀನಾ ಮೋದಿಯವರ ಹಿರಿಯ ಮಗನಾಗಿದ್ದು ನವೆಂಬರ್​ 29 ರಂದು ದೆಹಲಿಯಲ್ಲಿ ಜನಿಸಿದರು.

ಲಲಿತ್​ ಮೋದಿ ಅವರು ಸುಶ್ಮಿತಾ ಅವರೊಂದಿಗೆ ಹಲವಾರು ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. ಅಲ್ಲಿಂದ ಅವರ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ.

ಲಲಿತ್​ ಈ ಹಿಂದೆ ಮಿನಲ್​ ಸಗ್ರಾನಿ ಅವರನ್ನು 1991 ರಲ್ಲಿ ವಿವಾಹವಾಗಿದ್ದರು. ಅವರಿಗೆ ಮಗ ರುಚಿರ್​ ಮತ್ತು ಮಗಳು ಆಲಿಯಾ ಇದ್ದಾರೆ. ಮಿನಲ್​ 2018 ರಲ್ಲಿ ಕ್ಯಾನ್ಸರ್​ನಿಂದ ಮೃತರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...