alex Certify BIG NEWS:‌ ಹೆಚ್ಚಾಗುತ್ತಿದೆ ʼಸಿಮ್​ ಸ್ವಾಪ್ʼ​ ಸೈಬರ್​ ಅಪರಾಧ; ಬೆಚ್ಚಿಬೀಳಿಸುವಂತಿದೆ ವಂಚನಾ ವಿಧಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಹೆಚ್ಚಾಗುತ್ತಿದೆ ʼಸಿಮ್​ ಸ್ವಾಪ್ʼ​ ಸೈಬರ್​ ಅಪರಾಧ; ಬೆಚ್ಚಿಬೀಳಿಸುವಂತಿದೆ ವಂಚನಾ ವಿಧಾನ…!

ಉತ್ತರ ದೆಹಲಿಯಲ್ಲಿ ವಾಸವಿರುವ 35 ವರ್ಷದ ವಕೀಲೆಯೊಬ್ಬರು ಇತ್ತಿಚಿಗೆ ಸಿಮ್​ ಸ್ವಾಪ್​ ಎಂಬ ಹೊಸ ಸೈಬರ್​ ಕ್ರೈಮ್​ ಜಾಲದ ಬಲಿಪಶುವಾಗಿದ್ದಾರೆ. ಯಾವುದೋ ಒಂದು ಅನಾಮಧೇಯ ವ್ಯಕ್ತಿಯಿಂದ ಮೂರು ಮಿಸ್ಡ್​ ಕಾಲ್​ ಸ್ವೀಕರಿಸಿದ ಬಳಿಕ ವಕೀಲೆಯ ಬ್ಯಾಂಕ್​ ಖಾತೆಯಿಂದ ದೊಡ್ಡ ಮೊತ್ತದ ಹಣ ಡೆಬಿಟ್​ ಆಗಿದೆ ಎನ್ನಲಾಗಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ವಕೀಲರು ಬ್ಯಾಂಕ್​ ವಿವರ ಅಥವಾ ಒಟಿಪಿ ಹೀಗೆ ಯಾವುದೇ ಮಾಹಿತಿಯನ್ನು ಸೈಬರ್​ ವಂಚಕರೊಂದಿಗೆ ಹಂಚಿಕೊಂಡಿರಲಿಲ್ಲ.

ವಕೀಲೆ ಈ ಕರೆಗಳನ್ನು ರಿಸೀವ್​ ಕೂಡ ಮಾಡಿರಲಿಲ್ಲ. ಆದರೂ ವಕೀಲನ ಖಾತೆಯಿಂದ ಹಣ ಮಾತ್ರ ಡೆಬಿಟ್​ ಆಗಿತ್ತು. ಸೈಬರ್​ ವಂಚಕರು ಎಷ್ಟು ಹಣ ದೋಚಿದ್ದಾರೆ ಎಂಬ ಮಾಹಿತಿಯನ್ನು ರಹಸ್ಯವಾಗಿ ಇಡಲಾಗಿದೆ. ಆದರೆ ವರದಿಗಳ ಪ್ರಕಾರ ಲಕ್ಷಗಳ ಮೊತ್ತದಲ್ಲಿ ವಕೀಲರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ರೀತಿಯ ಸೈಬರ್​ ಕ್ರೈಂ ಹೇಗೆ ನಡೆಯುತ್ತದೆ..?

ವಕೀಲರಿಗೆ ಅಪರಿಚಿತ ಮೊಬೈಲ್​ ಸಂಖ್ಯೆಯಿಂದ ಮೂರು ಮಿಸ್ಡ್​ ಕಾಲ್​ ಬಂದಿತ್ತು. ಯಾವುದೇ ಕರೆಯನ್ನು ವಕೀಲೆ ಸ್ವೀಕರಿಸಿರಲಿಲ್ಲ. ಆದರೆ ಅವರು ತಮ್ಮ ಇನ್ನೊಂದು ಮೊಬೈಲ್​ ಸಂಖ್ಯೆಯಿಂದ ಇದೇ ನಂಬರ್​ಗೆ ಕರೆ ಮಾಡಿದ್ದರು. ಆದು ಸೈಬರ್​ ವಂಚಕ ತನ್ನನ್ನು ತಾನು ಕೋರಿಯರ್​ ಸೇವೆಯ ಕಸ್ಟಮರ್​ ಕೇರ್​ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ. ಕೊರಿಯರ್​ ತಲುಪಿಸಲು ನಿಮ್ಮ ವಿಳಾಸ ಬೇಕು ಎಂದಾಗ ವಕೀಲೆ ವಿವರ ನೀಡಿದ್ದಾರೆ. ಅಲ್ಲದೇ ಕೊರಿಯರ್​ ಕೂಡ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ಕಟ್​ ಆಗಿದೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಏನಿದು ಸಿಮ್​ ಸ್ವಾಪ್ ಪ್ರಕರಣ..?

ಇತ್ತೀಚಿನ ದಿನಗಳಲ್ಲಿ ಸಿಮ್​ ಸ್ವಾಪ್​ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್​ ವಂಚಕರು ತಮ್ಮ ನಿಯಂತ್ರಣದಲ್ಲಿರುವ ಸಿಮ್​ ಕಾರ್ಡ್​ನಿಂದ ವಂಚನೆಗೆ ಒಳಗಾಗುವ ಸಿಮ್​ನ್ನು ಸಂಯೋಜಿಸುತ್ತಾರೆ. ವೈಯಕ್ತಿಕ ಮಾಹಿತಿಯನ್ನು ಪಡೆದ ಬಳಿಕ ಸೈಬರ್​ ವಂಚಕರು ಮೊಬೈಲ್ ಆಪರೇಟರ್​ ರಿಟೇಲ್​ ಔಟ್​ಲೆಟ್​ಗೆ ಭೇಟಿ ನೀಡುತ್ತಾರೆ. ಇಲ್ಲಿ ನಕಲಿ ಐಡಿ ಪುರಾವೆ ನೀಡಿ ತಮ್ಮ ಸಿಮ್​ ಹಾಳಾಗಿದೆ ಎಂದು ನಾಟಕ ಮಾಡಿ ನಕಲಿ ಸಿಮ್​ ಪಡೆದು ಬಳಿಕ ವಂಚನೆ ಎಸಗುತ್ತಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...