alex Certify ಮನೆಗೆ ಮಗಳು ತಂದ ಗೊಂಬೆ ನೋಡಿ ದಂಗಾದ ತಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಮಗಳು ತಂದ ಗೊಂಬೆ ನೋಡಿ ದಂಗಾದ ತಾಯಿ…!

ಮಕ್ಕಳು ತಮಗಿಷ್ಟವಾದ ಆಟದ ವಸ್ತುಗಳನ್ನು ಖರೀದಿಸಲು ಇಷ್ಟಪಡ್ತಾರೆ. ಆದ್ರೆ ಕೆಲವೊಮ್ಮೆ ಮಕ್ಕಳು ತರುವ ವಸ್ತುಗಳು ಚಿತ್ರವಿಚಿತ್ರವಾಗಿರುತ್ತವೆ. 6 ವರ್ಷದ ಬಾಲಕಿ ತಂದ ಆಟದ ವಸ್ತು ನೋಡಿ ತಾಯಿ ದಂಗಾಗಿದ್ದಾಳೆ.

6 ವರ್ಷದ ಬಾಲಕಿ ಸ್ಕೈ  ಅಜ್ಜ – ಅಜ್ಜಿ ಮನೆಗೆ ಹೋಗಿದ್ದಳಂತೆ. ಅಲ್ಲಿ ಆರಾಮವಾಗಿ ದಿನ ಕಳೆದ ಸ್ಕೈ ಸಾಕಷ್ಟು ಶಾಪಿಂಗ್ ಮಾಡಿದ್ದಾಳೆ. ಈ ವೇಳೆ ಆಟಿಕೆಯೊಂದನ್ನು ಖರೀದಿಸಿದ್ದಾಳೆ. ಆಕೆ ತಂದ ಆಟಿಕೆ ನೋಡಿ,ತಾಯಿ ಜೋಡಿ ಲೂ ಕಂಗಾಲಾಗಿದ್ದಾಳೆ. ಜೊತೆಗೆ ಮಗಳ ಧೈರ್ಯಕ್ಕೆ ಮೆಚ್ಚಿದ್ದಾಳೆ.

ನೂತನ ಜೋಡಿಗೆ ಪರೀಕ್ಷೆಯಿಟ್ಟ ಕುಟುಂಬಸ್ಥರು: ವಧು-ವರ ಮಾಡಿದ್ದೇನು ಗೊತ್ತಾ…..?

ಸ್ಕೈ  ತಂದ ಆಟಿಕೆ ಭಯಾನಕವಾಗಿದೆ. ಅದ್ರ ಕಣ್ಣಿಗೆ ಎರಡು ಬಟನ್ ಇದೆ. ಅದು ಕೆಂಪು ಬಣ್ಣದಲ್ಲಿದೆ. ಕೀ ಕೊಟ್ಟರೆ ಅದು ಭೂತದಂತೆ ಹಾಡು ಹೇಳುತ್ತದೆ. ಇದನ್ನು ಸ್ಕೈ ವಿಡಿಯೋ ಕಾಲ್ ವೇಳೆ ತಾಯಿಗೆ ತೋರಿಸಿದ್ದಳಂತೆ. ತಾಯಿ ಅದನ್ನು ಮನೆಗೆ ತರಬೇಡ ಎಂದಿದ್ದಳಂತೆ. ಆದ್ರೆ ಸ್ಕೈ  ತಾಯಿಯನ್ನು ಒಪ್ಪಿಸಿ ಮನೆಗೆ ತಂದಿದ್ದಾಳೆ.

ಸ್ಕೈ, ತನ್ನ 9 ವರ್ಷದ ಅಕ್ಕ ಹಾಗೂ ತಮ್ಮನಿಗೆ ಈ ಗೊಂಬೆ ತೋರಿಸಿ, ಹೆದರಿಸಿ ಕೆಲಸ ಮಾಡಿಸಿಕೊಳ್ತಾಳಂತೆ. ಸ್ಕೈ ಯಾವಾಗ್ಲೂ ಧೈರ್ಯವಂತೆ. ಭಯಪಡದೆ ಕೆಲಸ ಮಾಡ್ತಾಳೆ. ಹ್ಯಾಲೋವೀನ್‌ ದಿನ ಭೂತದ ವೇಷ ಹಾಕುವ ಆಸೆಯಲ್ಲಿದ್ದಳು. ಆದ್ರೆ ಮತ್ತೆ ಅಜ್ಜಿ ಮನೆಗೆ ಹೋಗ್ತಿದ್ದಾಳೆಂದು ತಾಯಿ ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...