alex Certify ‘ಭಾರತದಲ್ಲಿ ಯಾರನ್ನೂ ಮತಾಂತರಗೊಳಿಸುವ ಅಗತ್ಯವೇ ಇಲ್ಲ’ – ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಭಾರತದಲ್ಲಿ ಯಾರನ್ನೂ ಮತಾಂತರಗೊಳಿಸುವ ಅಗತ್ಯವೇ ಇಲ್ಲ’ – ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​​

ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಒತ್ತಿ ಹೇಳಿದ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗ್ವತ್​ ಯಾರನ್ನೂ ಮತಾಂತರಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಛತ್ತೀಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗ್ವತ್​, ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ. ಆದರೆ ಹೇಗೆ ಬದುಕಬೇಕು ಎಂದು ಕಲಿಸುತ್ತೇವೆ. ಇಡೀ ವಿಶ್ವಕ್ಕೆ ಈ ಪಾಠವನ್ನು ನಮ್ಮ ಜನ್ಮಭೂಮಿ ಭಾರತ ಕಲಿಸಿದೆ. ನಮ್ಮ ಪಂಥವು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತೆ. ನಾವು ಯಾರ ಧರ್ಮವನ್ನೂ ಬದಲಾಯಿಸಲು ಒತ್ತಾಯಿಸುವುದಿಲ್ಲ ಎಂದು ಹೇಳಿದರು.

1930ರಿಂದ ದೇಶದಲ್ಲಿ ಮುಸ್ಲಿಂ ಜನಶಕ್ತಿಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜುಲೈ ತಿಂಗಳಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗ್ವತ್​ ಆರೋಪಿಸಿದ್ದರು.

ಭಾರತವನ್ನು ಮತ್ತೊಂದು ಪಾಕಿಸ್ತಾನವನ್ನಾಗಿ ಮಾಡುವ ಉದ್ದೇಶದಿಂದ ಮುಸ್ಲಿಂಮರ ಪ್ರಾಬಲ್ಯವನ್ನು ಹೆಚ್ಚಿಸಲು ಸಾಕಷ್ಟು ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿದೆ. ಪಂಜಾಬ್​, ಸಿಂಧ್​, ಆಸ್ಸಾಂ, ಹಾಗೂ ಪಶ್ಚಿಮ ಬಂಗಾಳದಲ್ಲಿ 1930ರಿಂದಲೇ ಇಂತಹ ಪ್ರಯತ್ನಗಳು ನಡೆಯುತ್ತಿದೆ. ಅಲ್ಲದೇ ಇದು ನಿರ್ದಿಷ್ಟ ಮಟ್ಟದಲ್ಲಿ ಯಶಸ್ವಿ ಕೂಡ ಆಗಿದೆ ಎಂದು ಆತಂಕ ಹೊರಹಾಕಿದ್ದರು.

ಇದಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗ್ವತ್​, ಎಲ್ಲಾ ಭಾರತ ವಾಸಿಗಳ ಡಿಎನ್​ಎ ಒಂದೇ ಆಗಿದೆ. ಹೀಗಾಗಿ ಅವರು ಯಾವ ಧರ್ಮವನ್ನು ಆರಾಧಿಸುತ್ತಾರೆ ಎಂಬುದರ ಮೇಲೆ ಅವರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಮರು ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ತಪ್ಪು ತಿಳುವಳಿಕೆಯನ್ನು ಬಿಟ್ಟು ಬಿಡಿ ಎಂದು ಕರೆ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...