alex Certify ಉಳಿದ ಕೇಕನ್ನು ಶೇಖರಿಸಿಡಲು ಸಖತ್‌ ಈಸಿ ಟ್ರಿಕ್ ಇದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಳಿದ ಕೇಕನ್ನು ಶೇಖರಿಸಿಡಲು ಸಖತ್‌ ಈಸಿ ಟ್ರಿಕ್ ಇದು

ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಯಾವುದೇ ಸಮಾರಂಭವೆಂದರೆ ಅಲ್ಲಿ ಸಿಹಿ ತಿನಿಸಿರಲೇಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೇಕ್‌ಅನ್ನು ಬಳಸಲಾಗುತ್ತದೆ. ಹುಟ್ಟುಹಬ್ಬ, ಮದುವೆ, ಹಬ್ಬ, ವಾರ್ಷಿಕೋತ್ಸವ ಹೀಗೇ ಯಾವುದೇ ಸಮಾರಂಭವಿರಲಿ, ಆ ದಿನವನ್ನು ಸ್ಮರಣೀಯವಾಗಿಸಲು ಕೇಕುಗಳು ಇರಲೇ ಬೇಕು ಎನ್ನುವಂತಾಗಿದೆ.

ಆದರೆ ಈ ಕೇಕುಗಳು ಸಾಮಾನ್ಯವಾಗಿ ಖಾಲಿಯಾಗುವುದು ಕಷ್ಟ. ‌ಹೀಗಾದ ಸಂದರ್ಭದಲ್ಲಿ ಉಳಿದಕೊಂಡ ಕೇಕ್‌ಅನ್ನು ಸಂಗ್ರಹಿಸಿಡಲು ಜನರು ಬಹಳಷ್ಟು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕೇಕ್‌ಅನ್ನು ಸದಾ ಫ್ರೆಶ್ ಆಗಿಡಬಹುದಾದ ಉಪಾಯವೊಂದನ್ನು ಹೇಳಿಕೊಡುವ ವಿಡಿಯೋವೊಂದು ವೈರಲ್ ಆಗಿದೆ.

14 ಸೆಕೆಂಡುಗಳ ಈ ಪುಟ್ಟ ವಿಡಿಯೋದಲ್ಲಿ ಸ್ವಲ್ಪ ತಿಂದುಬಿಟ್ಟ ಕೇಕನ್ನು ಕಂಟೇನರ್‌ ಒಂದರೊಳಗೆ ಇಟ್ಟು ಶೇಖರಿಸಿಡುವ ಟ್ರಿಕ್‌ ಒಂದನ್ನು ಹೇಳಲಾಗಿದೆ. ಈ ಉಪಯುಕ್ತವಾದ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ ನೆಟ್ಟಿಗರೊಬ್ಬರು, “ಈ ವಿಚಾರ ನನಗೆ ಯಾವತ್ತೂ ಹೊಳೆದೇ ಇಲ್ಲ ಎಂಬ ಕಾರಣಕ್ಕೆ ನನಗೆ ಸಿಟ್ಟು ಬಂದಿದೆ,” ಎಂದು ಹೇಳಿಕೊಂಡು ಶೇರ್‌ ಮಾಡಿದ್ದಾರೆ.

ಈ ವಿಡಿಯೋಗೆ ಅದಾಗಲೇ 18 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...