alex Certify ಗೋಗಿ ಹತ್ಯೆ ಬಳಿಕ ಸೋಶಿಯಲ್​ ಮೀಡಿಯಾಕ್ಕೂ ಕಾಲಿಟ್ಟ ‌ʼಗ್ಯಾಂಗ್‌ ವಾರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಗಿ ಹತ್ಯೆ ಬಳಿಕ ಸೋಶಿಯಲ್​ ಮೀಡಿಯಾಕ್ಕೂ ಕಾಲಿಟ್ಟ ‌ʼಗ್ಯಾಂಗ್‌ ವಾರ್ʼ

ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಹಾಡಹಗಲೇ ನಡೆದ ಕುಖ್ಯಾತ ರೌಡಿ ಜಿತೇಂದ್ರ ಗೋಗಿ ಹಾಗೂ ಇತರೆ ಮೂವರ ಹತ್ಯೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನೇ ಬೆಚ್ಚಿಬೀಳಿಸಿದೆ. ಕೊಲೆಯಲ್ಲಿ ಅಂತ್ಯವಾಗಿರುವ ಗ್ಯಾಂಗ್​ವಾರ್ ಇದೀಗ ಸೋಶಿಯಲ್​ ಮೀಡಿಯಾಕ್ಕೂ ಕಾಲಿಟ್ಟಿದೆ.

ಈ ಬದ್ಧ ವೈರಿಗಳು ಸೋಶಿಯಲ್​ ಮೀಡಿಯಾದ ಮೂಲಕ ನಡುರಸ್ತೆಯಲ್ಲಿ ರಕ್ತದ ಕೋಡಿ ಹರಿಸುವ ಬೆದರಿಕೆಯೊಡ್ಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ಮೆಸೇಜ್​ನಲ್ಲಿ, ನಾವು ಸುಮ್ಮನಿದ್ದೇವೆ ಎಂದ ಮಾತ್ರಕ್ಕೆ ಸತ್ತಿದ್ದೇವೆ ಎಂದು ಅರ್ಥವಲ್ಲ. ಶೀಘ್ರದಲ್ಲೇ ದೊಡ್ಡ ಪರಿಣಾಮಗಳನ್ನು ಎದುರಿಸಲಿದ್ದೀರಿ. ಬೀದಿಯಲ್ಲಿ ಹರಿಯುವ ರಕ್ತವನ್ನೂ ನಾವು ಒಣಗಲು ಬಿಡುವುದಿಲ್ಲ. ಆಟದ ನಿಯಮ ಬದಲಾಗಿದೆ ಎಂದು ಬರೆಯಲಾಗಿದೆ.

ಸೆಪ್ಟೆಂಬರ್​ 21ರಂದು ನಟೋರಿಯಸ್​ ಗ್ಯಾಂಗ್​ಸ್ಟರ್​ ಜಿತೇಂದ್ರ ಮಾನ್​ ಅಲಿಯಾಸ್​ ಗೋಗಿ ಎಂಬಾತನನ್ನು ರೋಹಿಣಿ ಕೋರ್ಟ್​ನಲ್ಲಿ ಹತ್ಯೆಗೈಯಲಾಗಿತ್ತು. ವಕೀಲರ ವೇಷದಲ್ಲಿ ಕೋರ್ಟ್​ಗೆ ನುಗ್ಗಿದ್ದ ದಾಳಿಕೋರರು ಗೋಗಿ ಹತ್ಯೆಗೈದಿದ್ದರು.

ದಾಳಿಕೋರರು ಒಬ್ಬರಿಗೊಬ್ಬರು ಬೆದರಿಕೆಯೊಡ್ಡುತ್ತಿರುವ ಈ ಪರಿಸ್ಥಿತಿಯು ದೆಹಲಿ ಪೊಲೀಸರನ್ನು ಆತಂಕಕ್ಕೀಡುಮಾಡಿದೆ. ಮೂಲಗಳ ಪ್ರಕಾರ ಕೊಲೆಯಾದ ಗೋಗಿಯು ಕಲಾ ಜಥೇರಿ ಹಾಗೂ ಲಾರೆನ್ಸ್​ ಬಿಷ್ಣೋಯ್​ ಆಪ್ತನಾಗಿದ್ದನು. ಹೀಗಾಗಿ ಈ ಬೆದರಿಕೆ ಸಂದೇಶದ ಹಿಂದೆ ಇವರಿಬ್ಬರೇ ಇದ್ದಾರೆ ಎಂದು ತಿಳಿದುಬಂದಿದೆ.

ಗೋಗಿಯ ಮೃತದೇಹದ ಫೋಟೋದ ಜೊತೆಗೆ ಈ ಸಂದೇಶವನ್ನು ಪೋಸ್ಟ್​ ಮಾಡಲಾಗ್ತಿದೆ. ಒಂದರಲ್ಲಿ, ಇದು ಹೊಸ ಯುದ್ಧದ ಆರಂಭವಾಗಿದೆ. ನಮ್ಮ ವಿರುದ್ಧ ಯಾರ್ಯಾರು ಇದ್ದಾರೋ ಅವರೆಲ್ಲ ಇನ್ಮೇಲೆ ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಯುದ್ಧದಲ್ಲಿ ಈಗ ಯಾರೂ ಸುರಕ್ಷಿತವಲ್ಲ. ಇಂದಿನಿಂದ ಬೀದಿಯಲ್ಲಿ ರಕ್ತವು ಒಣಗುವ ಮಾತೇ ಇಲ್ಲ. ಯುದ್ಧದ ನಿಯಮ ಇದೀಗ ಬದಲಾಗಿದೆ ಎಂದು ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...