alex Certify ಹಳ್ಳದ ನೀರಲ್ಲಿ ಮೀನು ಹಿಡಿಯಲು ಹೋದಾಗಲೇ ಘೋರ ದುರಂತ: ಇಬ್ಬರು ನೀರು ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳ್ಳದ ನೀರಲ್ಲಿ ಮೀನು ಹಿಡಿಯಲು ಹೋದಾಗಲೇ ಘೋರ ದುರಂತ: ಇಬ್ಬರು ನೀರು ಪಾಲು

ಚಿತ್ರದುರ್ಗ: ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಸೂಗೂರು ಗ್ರಾಮದ ಸಮೀಪ ಹಳ್ಳದಲ್ಲಿ ನಡೆದಿದೆ.

ಕುರಿದಾಸನಹಟ್ಟಿಯ ಲೊಕೇಶ(38), ತಿರುಮಲ(25) ನೀರು ಪಾಲಾದವರು ಎಂದು ಹೇಳಲಾಗಿದೆ. ಧರ್ಮಪುರ ಕೆರೆ ಕೋಡಿ ಬಿದ್ದು ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದಲ್ಲಿ ಮೀನು ಹಿಡಿಯುವಾಗ ತಿರುಮಲ ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಲೋಕೇಶ ಕೂಡ ನೀರು ಪಾಲಾಗಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...