alex Certify ಜೊಮ್ಯಾಟೊ ಡೆಲಿವರಿ ಬಾಯ್‌ ನೃತ್ಯದ ವಿಡಿಯೋ ವೈರಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೊಮ್ಯಾಟೊ ಡೆಲಿವರಿ ಬಾಯ್‌ ನೃತ್ಯದ ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮವು ಜನರು ನೃತ್ಯ ಮಾಡುವ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಂದ ತುಂಬಿದೆ. ಇತ್ತೀಚೆಗೆ, ಜೊಮ್ಯಾಟೊ ಡೆಲಿವರಿ ಏಜೆಂಟ್ ಹಿಂದಿಯ ‘ಸಪ್ನೆ ಮೇ ಮಿಲ್ತಿ ಹೈ’ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಜೊಮ್ಯಾಟೊ ಟಿ-ಶರ್ಟ್ ಧರಿಸಿರುವ ಯುವಕ, ಮದುವೆಯ ಸ್ಥಳದ ಹೊರಗೆ ಸಾಂಪ್ರದಾಯಿಕ ಹಾಡಿಗೆ ಸ್ಟೆಪ್‌ ಹಾಕುತ್ತಿರುವುದನ್ನು ನೋಡಬಹುದು. ಈ ವಿಡಿಯೋಗೆ ಇದಾಗಲೇ 5 ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿದ್ದು, 50 ಸಾವಿರಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ.

ಈ ವಿಡಿಯೋದಲ್ಲಿ ಜೊಮ್ಯಾಟೊ ಡೆಲಿವರಿ ಎಕ್ಸಿಕ್ಯೂಟಿವ್, ಆಶಾ ಭೋಂಸ್ಲೆ ಮತ್ತು ಸುರೇಶ್ ವಾಡ್ಕರ್ ಅವರ ‘ಸಪ್ನೆ ಮೇ ಮಿಲ್ತಿ ಹೈ’ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಮದುವೆಯ ಸ್ಥಳದಲ್ಲಿ ಅತಿಥಿಗಳು ಅದೇ ಟ್ರ್ಯಾಕ್‌ಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಈಗ ವೈರಲ್ ಆಗಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ ವ್ಯಕ್ತಿ ಗಾಜಿನ ಕಿಟಕಿಯ ಮೂಲಕ ಏಕಕಾಲದಲ್ಲಿ ಎರಡೂ ಕಡೆ ತೋರಿಸಿದ್ದಾನೆ. ಈತನ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...