alex Certify Viral Video | ಬೆಂಗಳೂರು ಮೆಟ್ರೋದಲ್ಲಿ ಅನಾಗರಿಕನಂತೆ ವರ್ತಿಸಿದ ಅಮೆರಿಕದ ಖ್ಯಾತ ಕಂಟೆಂಟ್​ ಕ್ರಿಯೇಟರ್; ಭಾರತೀಯರು ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಬೆಂಗಳೂರು ಮೆಟ್ರೋದಲ್ಲಿ ಅನಾಗರಿಕನಂತೆ ವರ್ತಿಸಿದ ಅಮೆರಿಕದ ಖ್ಯಾತ ಕಂಟೆಂಟ್​ ಕ್ರಿಯೇಟರ್; ಭಾರತೀಯರು ಗರಂ

ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಸಖತ್​ ಫೇಮಸ್​ ಆಗಿರುವ ಅಮೆರಿಕ ಮೂಲದ ಕಂಟೆಂಟ್​ ಕ್ರಿಯೇಟರ್​ ಫಿಡಿಯಾಸ್​ ಪನಾಯುಟೌ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದಾರೆ ಹಾಗೂ ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ರೀಲ್ಸ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಈ ರೀಲ್ಸ್​ಗಳು ಭಾರತೀಯರಿಗೆ ಹೆಚ್ಚು ಇಷ್ಟವಾದಂತೆ ಕಾಣುತ್ತಿಲ್ಲ.

ವಿದೇಶಿಗ ಪನಾಯುಟೌ ಶೇರ್​ ಮಾಡಿರುವ ಪೋಸ್ಟ್​ಗಳಲ್ಲಿ, ಅವರು ಸ್ಥಳೀಯ ಸಲೂನ್​ಗಳಿಗೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದನ್ನು ಕಾಣಬಹುದಾಗಿದೆ. ಅಲ್ಲದೇ ಬೀದಿ ಬದಿಯಲ್ಲಿ ಪೊಲೀಸರೊಂದಿಗೆ ವಾಕ್ಸಮರ ನಡೆಸಿದ್ದಾರೆ ಮಾತ್ರವಲ್ಲದೇ ಆಟೋ ಸವಾರಿ ಮಾಡಬೇಕಾದ ಸಂದರ್ಭದಲ್ಲಿ ಆಟೋ ಡ್ರೈವರ್​ಗೆ ಚುಂಬಿಸಿದ್ದು ಅದರ ವಿಡಿಯೋ ಕೂಡ ಶೇರ್​ ಮಾಡಿದ್ದಾರೆ..!

ಭಾರತ ಪ್ರವಾಸ ಕೈಗೊಂಡಿರೋ ಪನಾಯುಟೌ ಬೆಂಗಳೂರು ಮೆಟ್ರೋದಲ್ಲಿ ಅನಧಿಕೃತವಾಗಿ ಪ್ರಯಾಣ ಮಾಡಿದ ವಿಡಿಯೋ ಶೇರ್​ ಮಾಡಿದ್ದು, ಇದರಿಂದ ವ್ಯಾಪಕ ವಿರೋಧವನ್ನು ಎದುರಿಸಿದ್ದಾರೆ. ಸಾಕಷ್ಟು ಫಾಲೋವರ್ಸ್ ಹೊಂದಿರುವ ವ್ಯಕ್ತಿಯೊಬ್ಬ ಈ ರೀತಿ ವಂಚನೆ ಮಾಡುವ ವಿಡಿಯೋಗಳನ್ನು ಶೇರ್​ ಮಾಡೋದು ಎಷ್ಟು ಸರಿ ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ. ಏಕೆಂದರೆ ಈ ವಿಡಿಯೋದಲ್ಲಿ ಪನಾಯುಟೌ ಟಿಕೆಟ್​ ಪಡೆದುಕೊಳ್ಳದೇ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿ ಹೇಗೆ ಉಚಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸಬಹುದು ಎಂಬುದನ್ನು ನಾನು ನಿಮಗೆ ಕಲಿಸುತ್ತೇನೆ ಅಂತಾ ವಿಡಿಯೋದಲ್ಲಿ ಪನಾಯುಟೌ ಹೇಳುತ್ತಾರೆ. ಟಿಕೆಟ್​ ಸ್ಕ್ಯಾನಿಂಗ್​ ಬಾರಿಕೇಡ್​ಗಳನ್ನು ಜಂಪ್​ ಮಾಡಿದ್ದಾರೆ. ಅಲ್ಲದೇ ಜನಸಂದಣಿ ಇರುವ ಮೆಟ್ರೋ ತೋರಿಸಿ ಇದೇ ಭಾರತೀಯ ಟ್ರೇನ್​ಗಳು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಮಾತ್ರವಲ್ಲದೇ ಮೆಟ್ರೋದ ಒಳಗೆ ಕಸರತ್ತನ್ನು ಪ್ರದರ್ಶಿಸೋ ಮೂಲಕ ಸಾರ್ವಜನಿಕ ವಸ್ತುವಿಗೆ ಹಾನಿಯುಂಟು ಮಾಡೋ ಕಾರ್ಯ ಕೂಡ ಮಾಡಿರುವ ಆರೋಪ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...