alex Certify ಹಾರುತ್ತಿರುವ ವಿಮಾನದ ಹೊರಗೆ ಮಹಿಳೆ ವರ್ಕೌಟ್‌; ಹೇಗೆಂದು ತಿಳಿಯಲು ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರುತ್ತಿರುವ ವಿಮಾನದ ಹೊರಗೆ ಮಹಿಳೆ ವರ್ಕೌಟ್‌; ಹೇಗೆಂದು ತಿಳಿಯಲು ಈ ವಿಡಿಯೋ ನೋಡಿ

ಸ್ಕೈ ಡೈವಿಂಗ್​ ಖಂಡಿತವಾಗಿಯೂ ಸಾಹಸ ಕ್ರೀಡೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸ್ಕೈ ಡೈವಿಂಗ್​ ಮಾಡುವ ಗುರಿ ಹೊಂದಿರುತ್ತಾರೆ. ಆದರೆ ಅದರಲ್ಲಿ ಒಳಗೊಂಡಿರುವ ಹೆಚ್ಚಿನ ಅಪಾಯವನ್ನು ಪರಿಗಣಿಸಿದರೆ ಅದು ಕಪ್​ ಚಹಾ ಕುಡಿದಷ್ಟು ಸಲೀಸಲ್ಲ.

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೊದಲ್ಲಿ ಮಹಿಳೆಯೊಬ್ಬರು ಹಾರಾಟದಲ್ಲಿದ್ದ ವಿಮಾನದ ಬದಿಯಲ್ಲಿ ವರ್ಕೌಟ್​ ಮಾಡುವುದನ್ನು ಕಾಣಿಸುತ್ತದೆ. ಶೌರ್ಯ, ಸಾಹಸ ಬಿಂಬಿಸುವ ವಿಡಿಯೊಗಳು ಜಾಲತಾಣದಲ್ಲಿ ಸಾಮಾನ್ಯ. ಆದರೆ, ಈ ವಿಡಿಯೋ ಬಿರುಗಾಳಿಯಂತೆ ವೈರಲ್​ ಆಗಿದೆ.

ಮಹಿಳೆಯೊಬ್ಬರು ವಿಮಾನದ ಒಂದು ಬದಿಯಲ್ಲಿ ವರ್ಕೌಟ್​ ಮಾಡುವುದನ್ನು ತೋರಿಸುವ ಮೂಲಕ ಪ್ರಾರಂಭವಾಗುತ್ತದೆ. ಇದೇನು ವಿಮಾನದ ಹೊರಗೆ ಇಂತಾ ಸಾಹಸ ಎಂದು ಅಚ್ಚರಿ ಬೀಳುವುದು ಗ್ಯಾರಂಟಿ. ಕೊನೆಗೆ ಆಕೆ ತನ್ನ ಹಿಡಿತವನ್ನು ಬಿಟ್ಟು ಡೈವ್​ ಮಾಡುವುದನ್ನು ನೋಡಬಹುದು.

ವಿಡಿಯೋ ಅಪ್​ಲೋಡ್​ ಮಾಡಿದ ನಂತರ, ಸುಮಾರು 60 ಮಿಲಿಯನ್​ ವೀಕ್ಷಣೆ ಪಡೆದಿದೆ. ಆಕೆಯ ದಿಟ್ಟ ನಡೆ ಅನೇಕರನ್ನು ಬೆಚ್ಚಿಬೀಳಿಸಿದೆ. ಜೊತೆಗೆ ನೂರಾರು ಕಾಮೆಂಟ್​ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...