alex Certify ಕಾಂಗರೂ ವೇಷ ಧರಿಸಿ ಮರಿ ಪ್ರಾಣಿಯೊಂದಿಗೆ ಕುಣಿದ ಮಹಿಳೆ; 3 ಮಿಲಿಯನ್ ವೀಕ್ಷಣೆ ಗಳಿಸಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗರೂ ವೇಷ ಧರಿಸಿ ಮರಿ ಪ್ರಾಣಿಯೊಂದಿಗೆ ಕುಣಿದ ಮಹಿಳೆ; 3 ಮಿಲಿಯನ್ ವೀಕ್ಷಣೆ ಗಳಿಸಿದ ವಿಡಿಯೋ

ಮಹಿಳಾ ಸ್ವಯಂಸೇವಕರೊಬ್ಬರು ಕಾಂಗರೂ ಮರಿಗೆ ಜಂಪ್ ಮಾಡಲು ಕಲಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪುಟ್ಟ ಕಾಂಗರೂಗೆ ತರಬೇತಿ ನೀಡಲು ಮಹಿಳೆಯೊಬ್ಬರು ಕಾಂಗರೂ ವೇಷಭೂಷಣವನ್ನು ಧರಿಸಿದ್ದಾರೆ. ಇಬ್ಬರೂ ಕೂಡ ಒಟ್ಟಿಗೆ ಜಿಗಿದಿದ್ದಾರೆ. ಮಹಿಳೆಯು ಕಾಂಗೂರೂ ಮರಿಗೆ ಯಾವ ರೀತಿ ಜಿಗಿಯಬೇಕು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಬಳಿಕ ಕಾಂಗರೂ ಮರಿ ಜಿಗಿಯುತ್ತಾ ಮಹಿಳೆ ಹಿಡಿದುಕೊಂಡಿದ್ದ ಚೀಲಕ್ಕೆ ಹಾರಿ ಕೂತಿದೆ. ಈ ಮುದ್ದಾದ ವಿಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ನೆಟ್ಟಿಗರ ಮನಗೆದ್ದಿದೆ.

ಹದಿನೈದು ಸೆಕೆಂಡ್‌ಗಳ ಅವಧಿಯ ವಿಡಿಯೋದಲ್ಲಿ ಮರಿ ಕಾಂಗರೂ ಮಹಿಳೆ ಹಿಡಿದುಕೊಂಡಿದ್ದ ತಾಯಿ ಕಾಂಗರೂಗಳ ಚೀಲದಂತೆ ಇದ್ದ ಚೀಲಕ್ಕೆ ಜಿಗಿಯುವುದರೊಂದಿಗೆ ಕೊನೆಗೊಂಡಿತು. ನಂತರ ಆಕೆ ಪ್ರೀತಿಯಿಂದ ಕಾಂಗರೂ ಮರಿಯನ್ನು ಮುದ್ದಾಗಿ ತಬ್ಬಿಕೊಳ್ಳುತ್ತಾಳೆ.

ಪ್ರಾಣಿಗಳು ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪೋಸ್ಟ್ ಮಾಡುವ WOW ಅನಿಮಲ್ಸ್ ಹೆಸರಿನ ಪುಟದಿಂದ ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ವಿಡಿಯೋ 3.6 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದ್ದು, ಅನೇಕರ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...