alex Certify ಇಂಗ್ಲೆಂಡ್​ಗೆ ಹೋಗಬೇಕಿದ್ದ ಯುವತಿ ಸಹೋದರನ ಮದುವೆಗೆ‌ ದಿಢೀರ್ ಬಂದು ಅಚ್ಚರಿಗೊಳಿಸಿದ ಕ್ಷಣ; ಭಾವುಕ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೆಂಡ್​ಗೆ ಹೋಗಬೇಕಿದ್ದ ಯುವತಿ ಸಹೋದರನ ಮದುವೆಗೆ‌ ದಿಢೀರ್ ಬಂದು ಅಚ್ಚರಿಗೊಳಿಸಿದ ಕ್ಷಣ; ಭಾವುಕ ವಿಡಿಯೋ ವೈರಲ್​

ತನ್ನ ಸಹೋದರನ ಮದುವೆಯ ಸಂದರ್ಭದಲ್ಲಿಯೇ ಇಂಗ್ಲೆಂಡ್​ಗೆ ಹೋಗಬೇಕಿದ್ದ ಸಹೋದರಿಯೊಬ್ಬಳು ಹಂಚಿಕೊಂಡ ವಿಡಿಯೋ ಈಗ ವೈರಲ್​ ಆಗಿದ್ದು, ಜನರು ಭಾವುಕರಾಗಿದ್ದಾರೆ. ತನ್ನ ಸಹೋದರನ ಮದುವೆಗೆ ಹೋಗಲು ಸಾಧ್ಯವಾಗಿಲ್ಲ ಎಂದು ಬೇಸರಿಸಿದ ಯುವತಿ ನಂತರ ಮುಂದಿನ ವಿಮಾನದಲ್ಲಿ ಭಾರತಕ್ಕೆ ಹಿಂತಿರುಗಲು ನಿರ್ಧರಿಸಿ ಮದುವೆಯಲ್ಲಿ ತನ್ನ ಕುಟುಂಬವನ್ನು ಅಚ್ಚರಿಗೊಳಿಸಿದ ಘಟನೆ ಇದಾಗಿದೆ.

ಶ್ರದ್ಧಾ ಶೇಲಾರ್ ಎನ್ನುವವರು ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಸಹೋದರನ ಮದುವೆಗೆ ಹಾಜರಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಜನಸಮೂಹದ ನಡುವೆ ಈಕೆ ಮದುವೆಗೆ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಆಕೆಯನ್ನು ಅನಿರೀಕ್ಷಿತವಾಗಿ ನೋಡಿದ ಪೋಷಕರು ಕುಣಿದು ಕುಪ್ಪಳಿಸಿ ಆಕೆಯನ್ನು ತಬ್ಬಿಕೊಳ್ಳಲು ಓಡಿ ಬರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಡಿಸೆಂಬರ್ 9 ರಂದು ಪೋಸ್ಟ್ ಮಾಡಲಾದ ವಿಡಿಯೋ ಇದಾಗಲೇ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಜನರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...