alex Certify ಸಿಂಹದ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಯುವತಿಯ ಶರ್ಟ್​ ಎಳೆದ ಕರಡಿ: ತಮಾಷೆಯ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹದ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಯುವತಿಯ ಶರ್ಟ್​ ಎಳೆದ ಕರಡಿ: ತಮಾಷೆಯ ವಿಡಿಯೋ ವೈರಲ್​

ಸೆಲ್ಫಿ ತೆಗೆಯುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸೆಲ್ಫಿ ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ, ಆದರೆ ಹಾಗೆ ಮಾಡುವಾಗ ಕೆಲವೊಮ್ಮೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಇಲ್ಲದಿದ್ದರೆ ಪ್ರಾಣಕ್ಕೇ ಕುತ್ತಾಗಬಹುದು.

ಇತ್ತೀಚೆಗೆ ಅಭಯಾರಣ್ಯವೊಂದರಲ್ಲಿ ಹುಲಿಯ ವಿಡಿಯೋ ಮಾಡಲು ಹೋಗಿ ವ್ಯಕ್ತಿಯೊಬ್ಬ ಅದರ ದಾಳಿಗೆ ಒಳಗಾಗಿರುವ ಭೀಕರ ಘಟನೆ ನಡೆದಿದೆ. ಆದರೆ ಕೆಲವೊಮ್ಮೆ ಹಾಸ್ಯಭರಿತ ಘಟನೆಗಳೂ ನಡೆಯುತ್ತವೆ. ಅಂಥದ್ದೇ ಹಾಸ್ಯಭರಿತ ಘಟನೆಯೊಂದರ ವಿಡಿಯೋ ಇದೀಗ ವೈರಲ್​ ಆಗಿದೆ.

ವೀಡಿಯೊದಲ್ಲಿ, ಯುವತಿ ಕರಡಿ ಮತ್ತು ಸಿಂಹಿಣಿಯ ಹತ್ತಿರ ಕುಳಿತಿರುವುದನ್ನು ಕಾಣಬಹುದು. ಇವೆರಡೂ ಪಂಜರದಲ್ಲಿದ್ದು, ಅವುಗಳ ಜತೆ ಸೆಲ್ಪಿಗೆ ಯುವತಿ ಮುಂದಾಗಿದ್ದಾಳೆ. ಎರಡೂ ಪ್ರಾಣಿಗಳು ಒಟ್ಟಿಗೇ ಬರುವ ರೀತಿ ಸೆಲ್ಫೀ ತೆಗೆದುಕೊಳ್ಳಲು ಆಕೆ ಯತ್ನಿಸುತ್ತಿದ್ದಾಳೆ.

ಯುವತಿ ಸಿಂಹಿಣಿಯ ಸಮೀಪ ಇದ್ದಾಗ ಕರಡಿ ಪಂಜರದಿಂದ ತನ್ನ ಪಂಜಗಳನ್ನು ಹೊರತೆಗೆದು ಹುಡುಗಿಯ ಟೀ ಶರ್ಟ್ ಅನ್ನು ಹಿಡಿಯುವುದನ್ನು ಕಾಣಬಹುದು. ಬಾಲಕಿ ಭಯಗೊಂಡು ಆಮೇಲೆ ನಗುವುದನ್ನು ನೋಡಬಹುದು. ಸಿಂಹದ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿರುವುದಕ್ಕೆ ಕರಡಿಗೆ ಕೋಪ ಬಂತು ಎಂದು ಹಲವರು ತಮಾಷೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...