alex Certify ಕೊಹ್ಲಿಯ ಮೇಣದ ಪ್ರತಿಮೆಗೆ ಲಿಪ್‌ ಕಿಸ್‌ ಕೊಟ್ಟ ಯುವತಿ: ಅಸಹ್ಯ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿಯ ಮೇಣದ ಪ್ರತಿಮೆಗೆ ಲಿಪ್‌ ಕಿಸ್‌ ಕೊಟ್ಟ ಯುವತಿ: ಅಸಹ್ಯ ಎಂದ ನೆಟ್ಟಿಗರು

ಸಿನಿ ತಾರೆಯರು, ಕ್ರಿಕೆಟ್​ ತಾರೆಯರಂಥ ಸೆಲೆಬ್ರಿಟಿಗಳು ಎಂದರೆ ಕೆಲವರಿಗೆ ಇನ್ನಿಲ್ಲದ ಹುಚ್ಚು. ಇವರನ್ನೇ ದೇವರು ಎಂದು ಪೂಜಿಸುವವರೂ ಇದ್ದಾರೆ. ಅದರಲ್ಲಿಯೂ ಮಹಿಳೆಯರಿಗೆ ಈ ತಾರೆಯರ ಮೇಲೆ ಸ್ವಲ್ಪ ಹುಚ್ಚು ಹೆಚ್ಚೇ ಎಂದು ಹೇಳಬೇಕು. ತಮ್ಮ ನೆಚ್ಚಿನ ತಾರೆಗಾಗಿ ಇವರು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಅಭಿಮಾನ ಅತಿರೇಕಕ್ಕೆ ಹೋಗಿರುವ ಹಲವಾರು ಉದಾಹರಣಗಳನ್ನು ಈಗಾಗಲೇ ನೋಡಿದ್ದೇವೆ.

ಇದೀಗ ಕ್ರಿಕೆಟ್​ ತಾರೆ ವಿರಾಟ್​ ಕೊಹ್ಲಿ ಅವರ ಅಭಿಮಾನಿಯೊಬ್ಬಳು ಕೊಹ್ಲಿ ಅವರ ಮೇಣದ ಪ್ರತಿಮೆಗೆ ಚುಂಬಿಸುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೆಹಲಿಯ ಮೇಡಮ್ ಟುಸ್ಸಾಡ್ಸ್ ಮೇಣದ ವಸ್ತುಸಂಗ್ರಹಾಲಯದಲ್ಲಿರುವ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಇಡಲಾಗಿದೆ. ಇದಕ್ಕೆ ಯುವತಿಯೊಬ್ಬಳು ಮುತ್ತಿಡುತ್ತಿದ್ದಾಳೆ. ಆಕೆ ತನ್ನ ಕೈಯನ್ನು ಪ್ರತಿಮೆಯ ಕುತ್ತಿಗೆಯ ಸುತ್ತಲೂ ಹಾಕಿ ಸಾಕ್ಷಾತ್​ ವಿರಾಟ್​ ಕೊಹ್ಲಿಯೇ ತನ್ನ ಎದುರಿಗೆ ನಿಂತಿರುವಂತೆ ಭಾವಿಸಿ ಚುಂಬಿಸಿ ಖುಷಿ ಪಟ್ಟಿದ್ದಾಳೆ. ಇದರ ವಿಡಿಯೋಗೆ ಥರಹೇವಾರಿ ಕಮೆಂಟ್​ಗಳು ಸುರಿಮಳೆಯಾಗುತ್ತದೆ.

ಅಭಿಮಾನ ಅಭಿಮಾನವಾಗಿದ್ದರೆ ಚೆನ್ನ. ಈ ರೀತಿಯ ಹುಚ್ಚಾಟಗಳು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ದೃಶ್ಯ ನೋಡುವ ಮೊದಲು ನಾನೇಕೆ ಸಾಯಲಿಲ್ಲ ಎಂದು ಒಬ್ಬ ಕಮೆಂಟಿಗ ತರ್ಲೆ ಕಮೆಂಟ್​ ಹಾಕಿದ್ದಾನೆ. ಇದು ಅಸಹ್ಯದ ಪರಮಾವಧಿ ಎಂದು ಹಲವರು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...