
ಘಟನೆ ಸಂಬಂಧ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
BREAKING: 68 ವರ್ಷಗಳ ಬಳಿಕ ಕೊನೆಗೂ ಟಾಟಾ ಸನ್ಸ್ ತೆಕ್ಕೆಗೆ ಮರಳಿದ ಏರ್ ಇಂಡಿಯಾ – ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ
ಜಿತೇಂದ್ರ ಎಂಬ ವ್ಯಕ್ತಿಯು ತನ್ನ ಸಂಬಂಧಿಯೊಬ್ಬರನ್ನು ಇದೇ ಆಸ್ಪತ್ರೆಗೆ ದಾಖಲು ಮಾಡಿದ್ದರು. ರೋಗಿಗೆ ಪುರುಷರ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನರ್ಸ್ ಆಶಾ ಪನ್ಸೆ ಕರ್ತವ್ಯದಲ್ಲಿದ್ದರು. ಜೀತೇಂದ್ರ ರೋಗಿಗೆ ವೈದ್ಯಕೀಯ ನೆರವು ನೀಡುವಂತೆ ಪದೇ ಪದೇ ಕೇಳುತ್ತಿದ್ದರಿಂದ ಆಶಾ ರೋಗಿಗೆ ಗ್ಲುಕೋಸ್ ಬಾಟಲಿ ಏರಿಸಿದ್ದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರೋದಾಗಿ ಹೇಳಿಕೊಂಡಿರುವ ಜೀತೇಂದ್ರ ಆಶಾ ಬಳಿಕ ಪದೇ ಪದೇ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಹೇಳುತ್ತಲೇ ಇದ್ದರು. ಈ ವೇಳೆ ಆಶಾ ಫೋನಿನಲ್ಲಿ ಬೇರೆಯವರ ಜೊತೆ ಮಾತನಾಡುತ್ತಿರೋದನ್ನು ಗಮನಿಸಿದ ಜೀತೇಂದ್ರ ಮೊಬೈಲ್ ಕಸಿದು ಅದನ್ನು ಪುಡಿ ಪುಡಿ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ನರ್ಸ್ ಜೀತೇಂದ್ರ ಕೆನ್ನೆಗೆ ಬಾರಿಸಿದ್ದಾರೆ.
ಸ್ಮಾರ್ಟ್ ಆಗಿ ಕೆಲಸ ಶುರು ಮಾಡಿ ಕೈ ತುಂಬ ಗಳಿಸಿ
ಇದಾದ ಬಳಿಕ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಕೋಪಗೊಂಡ ನರ್ಸ್ ಜೀತೇಂದ್ರರಿಗೆ ಚಪ್ಪಲಿಯಿಂದ ಬಾರಿಸಿದ್ದಾಳೆ. ಜೀತೇಂದ್ರ ಕೂಡ ನರ್ಸ್ ಕತ್ತು ಹಿಸುಕಲು ಯತ್ನಿಸಿದ್ದಾರೆ.
ನರ್ಸ್ ಆಶಾ ವೈದ್ಯರ ಜೊತೆಗೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ ಇಬ್ಬರ ನಡುವೆ ರಾಜಿ ಸಂಧಾನ ಮಾಡಲಾಗಿದೆ. ಹೀಗಾಗಿ ಆಶಾ ಯಾವುದೇ ಎಫ್ಐಆರ್ ದಾಖಲಿಸದೇ ಇಲ್ಲಿಂದ ತೆರಳಿದ್ದಾರೆ ಎಂದು ಎಸ್ಐ ರಾಜಕುಮಾರ್ ಶರ್ಮಾ ಹೇಳಿದರು.