alex Certify ಸಮಯಕ್ಕೆ ಬಾರದ ಆಂಬ್ಯುಲೆನ್ಸ್: ಜೆಸಿಬಿಯಲ್ಲಿ ರೋಗಿಯನ್ನ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಯಕ್ಕೆ ಬಾರದ ಆಂಬ್ಯುಲೆನ್ಸ್: ಜೆಸಿಬಿಯಲ್ಲಿ ರೋಗಿಯನ್ನ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು

ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಾಗ, ಆ ತಕ್ಷಣಕ್ಕೆ ಆಪತ್ಭಾಂವನಂತೆ ಮುಂದೆ ಬರುವುದೇ ಆಂಬ್ಯುಲೆನ್ಸ್. ಆದರೆ ಈಗ ಗಾಯಾಳು ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸುವುದಕ್ಕೆ ಸಹಾಯವಾಗಿದ್ದು ಆಂಬ್ಯುಲೆನ್ಸ್ ಬದಲಾಗಿ ಜೆಸಿಬಿ.

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಸಾಗಿಸಿದ ಘಟನೆ ಮಧ್ಯಪ್ರದೇಶದಲ್ಲಿ ಕಟ್ನಿಯಲ್ಲಿ ನಡೆದಿದೆ. ಸಮಯಕ್ಕೆ ಬಾರದ ಆಂಬ್ಯುಲೆನ್ಸ್‌ನಿಂದಾಗಿ ಅನಿವಾರ್ಯವಾಗಿ ಜೆಸಿಬಿಯಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿದೆ. ಇದು ಈಗ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಟೀಕಾಪ್ರಹಾರಕ್ಕೆ ಕಾರಣವಾಗಿದೆ.

ಗೈರ್ಟಲೈ ಪ್ರದೇಶದ ನಿವಾಸಿಯಾಗಿರುವ ಮಹೇಶ್ ಬರ್ಮನ್ ಎಂಬಾತ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರ್ಧಗಂಟೆಗೂ ಹೆಚ್ಚು  ಕಾಲ ಕಾದರೂ ಆಂಬ್ಯುಲೆನ್ಸ್ ಅಪಘಾತದ ಸ್ಥಳಕ್ಕೆ ಬಂದಿರಲಿಲ್ಲ.

ತೀವ್ರ ಗಾಯಗೊಂಡಿದ್ದ ವ್ಯಕ್ತಿ ದೇಹದಿಂದ ವಿಪರೀತ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆತನ ಜೀವ ಉಳಿಸಲು ಜನರು ಬೇರೆ ಮಾರ್ಗ ಹುಡುಕಬೇಕಾಯಿತು. ಹೀಗಾಗಾಗಿ ಅಲ್ಲೇ ಇದ್ದ ಸ್ಥಳೀಯ ಪುಷ್ಪೇಂದ್ರ ಎಂಬುವವರು ಗಾಯಾಳುವನ್ನು ಜೆಸಿಬಿಯ ಮುಂಭಾಗದ ಲೋಡರ್ನಲ್ಲಿ ಮಲಗಿಸಿಕೊಂಡು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಇದೀಗ ಜೆಸಿಬಿಯಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವಿಡಿಯೋ ವೈರಲ್ ಆಗಿದ್ದು, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಬಜೆಟ್ ಮೀಸಲಿಡದ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಟೀಕಾಪ್ರಹಾರ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...