alex Certify ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕ್ಷಣಾರ್ಧದಲ್ಲಿ ರೂಬಿಕ್ ಕ್ಯೂಬ್‌ ಒಗಟು ಬಿಡಿಸಿ ವಿಶ್ವ ದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕ್ಷಣಾರ್ಧದಲ್ಲಿ ರೂಬಿಕ್ ಕ್ಯೂಬ್‌ ಒಗಟು ಬಿಡಿಸಿ ವಿಶ್ವ ದಾಖಲೆ…!

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರೂಬಿಕ್‌ ಕ್ಯೂಬ್ ಒಗಟನ್ನು ಕೇವಲ 14.67 ಸೆಕೆಂಡ್‌ಗಳಲ್ಲಿ ಬಿಡಿಸಿದ ಅಮೆರಿಕದ ಟೀನೇಜರ್‌ ಟಾಮಿ ಚೆರ‍್ರಿ ಹೊಸ ದಾಖಲೆ ನಿರ್ಮಿಸಿದ್ದಾನೆ.

ಹೀಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತ್ಯಂತ ವೇಗವಾಗಿ ರೂಬಿಕ್ ಕ್ಯೂಬ್ ಒಗಟು ಬಿಡಿಸಿದ ವ್ಯಕ್ತಿ ಎಂಬ ಗೌರವ ಟಾಮಿಯದ್ದು. ಕಳೆದ ಆರೂವರೆ ವರ್ಷಗಳಿಂದ ರೂಬಿಕ್ ಕ್ಯೂಬ್ ಗೀಳು ಅಂಟಿಸಿಕೊಂಡಿರುವ ಟಾಮಿ, ರೂಬಿಕ್ ಕ್ಯೂಬ್‌ ಒಗಟುಗಳನ್ನು ಬಿಡಿಸಲು ತೆಗೆದುಕೊಳ್ಳುವ ಸರಾಸರಿ ಸಮಯ 15.24 ಸೆಕೆಂಡ್‌ಗಳಾಗಿದ್ದು ಇದೂ ಸಹ ದಾಖಲೆಯಾಗಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪರಿಚಯವೊಂದು ತಿಳಿಸಿದೆ.

ʼಗಿನ್ನಿಸ್ʼ ದಾಖಲೆ ಬರೆದ ಹುಬ್ಬಳ್ಳಿ ಹುಡುಗಿ

ಯೂಟ್ಯೂಬ್‌ನಲ್ಲಿ ಜಿಡಬ್ಲ್ಯೂಆರ್‌ ಚಾನೆಲ್ ಶೇರ್‌ ಮಾಡಿದ ವಿಡಿಯೋದಲ್ಲಿ, ಕಳೆದ ಡಿಸೆಂಬರ್‌ನಲ್ಲಿ ವಿಶ್ವ ಕ್ಯೂಬಿಂಗ್ ಸಂಘಟನೆಯ ಫ್ಲಾರಿಡಾ ಫಾಲ್ ಸ್ಫರ್ಧೆಯಲ್ಲಿ ಟಾಮಿ ಈ ಅದ್ಭುತವನ್ನು ಸಾಧಿಸಿದ್ದನ್ನು ನೋಡಬಹುದಾಗಿದೆ.

ಟೇಬಲ್ ಒಂದರ ಮೇಲೆ ಕುಳಿತ ಟಾಮಿ, ಕೆಲವೇ ಸೆಕೆಂಡ್‌ಗಳಲ್ಲಿ ತನಗೆ ಕೊಟ್ಟ ರೂಬಿಕ್ ಕ್ಯೂಬ್ ಒಗಟು ಬಿಡಿಸುವುದನ್ನು ವಿಡಿಯೋದಲ್ಲಿ ತೋರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...