alex Certify 24 ಗಂಟೆಗಳಲ್ಲಿ 6,931 ಬಾರಿ ರೂಬಿಕ್​ ಕ್ಯೂಬ್​ ಪಜಲ್​ ಪೂರ್ತಿಗೊಳಿಸಿ ವಿಶ್ವ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ಗಂಟೆಗಳಲ್ಲಿ 6,931 ಬಾರಿ ರೂಬಿಕ್​ ಕ್ಯೂಬ್​ ಪಜಲ್​ ಪೂರ್ತಿಗೊಳಿಸಿ ವಿಶ್ವ ದಾಖಲೆ

ಲಂಡನ್​: ಒಂದು ದಿನ ಅಂದರೆ 24 ಗಂಟೆಗಳಲ್ಲಿ 6,931 ಬಾರಿ ರೂಬಿಕ್​ ಕ್ಯೂಬ್​ ಪಜಲ್​ಗಳನ್ನು ಮಾಡುವ ಮೂಲಕ ಬ್ರಿಟಿಷ್ ವ್ಯಕ್ತಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಇದೇ 9 ರಂದು ಬೆಳಗ್ಗೆ 8 ರಿಂದ ನವೆಂಬರ್ 10 ರ ಬೆಳಗ್ಗೆ 8 ರವರೆಗೆ ಪ್ರತಿ ಕ್ಯೂಬ್‌ಗೆ ಸರಾಸರಿ 12 ಸೆಕೆಂಡುಗಳಲ್ಲಿ ಪಜಲ್​ ಬಿಡಿಸುವ ಮೂಲಕ 20 ವರ್ಷದ ಜಾರ್ಜ್ ಸ್ಕೋಲಿ ಎಂಬ ಯುವಕ ದಾಖಲೆ ಬರೆದಿದ್ದಾನೆ.

ಇದರ ನೇರ ಪ್ರಸಾರವನ್ನು ಲಂಡನ್‌ನ ಹೋಟೆಲ್ ಒಂದರಿಂದ ಬಿತ್ತರಗೊಂಡಿದೆ. ಜಾರ್ಜ್ ಸ್ಕೋಲಿ ಪ್ರಯತ್ನದ ಮೊದಲ ಗಂಟೆಯಲ್ಲಿ 327 ಘನಗಳನ್ನು ಪೂರ್ಣಗೊಳಿಸಿದ್ದ ಎಂಟನೇ ಗಂಟೆಯ ಹೊತ್ತಿಗೆ, 3,500 ಕ್ಕಿಂತ ಹೆಚ್ಚು ಘನಗಳನ್ನು ಪೂರ್ಣಗೊಳಿಸಿದ. ಈ ಮೂಲಕ 2013 ರಲ್ಲಿ 24 ಗಂಟೆಗಳಲ್ಲಿ 5,800 ಕ್ಯೂಬ್‌ಗಳನ್ನು ಪರಿಹರಿಸುವ ಎರಿಕ್ ಲೈಮ್‌ಬ್ಯಾಕ್ ಹೊಂದಿದ್ದ ದಾಖಲೆಯನ್ನು ಜಾರ್ಜ್ ಸ್ಕೋಲಿ ಮುರಿದಿದ್ದಾನೆ.

“ಆರಂಭದಲ್ಲಿ ಚೆನ್ನಾಗಿ ಆಡಿದೆ. ಮಧ್ಯರಾತ್ರಿಯಾಗುತ್ತಲೇ ಯಾಕೋ ಸ್ವಲ್ಪ ನಿಧಾನವಾಯಿತು. ನಡುನಡುವೆ ಸ್ವಲ್ಪವೇ ರೆಸ್ಟ್​ ತೆಗೆದುಕೊಂಡೆ. ಆದರೆ ನಾನು ದಾಖಲೆ ಮುರಿಯುತ್ತೇನೆ ಅಂದುಕೊಂಡಿರಲಿಲ್ಲ. ನಂತರ ಬಹಳ ಶ್ರಮವಹಿಸಿ ನನ್ನ ಟಾರ್ಗೆಟ್​ ಪೂರ್ಣಗೊಳಿಸಿದೆ” ಎಂದು ಜಾರ್ಜ್​ ಸ್ಕೋಲಿ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...