alex Certify ಅಮೆರಿಕಾದಲ್ಲಿ ಇತಿಹಾಸ ಸೃಷ್ಟಿಸಿದ ತಾಯಿ – ಮಗಳು; ಮೋಡಿ ಮಾಡಿದೆ ಈ ಪೈಲೆಟ್​ ಜೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದಲ್ಲಿ ಇತಿಹಾಸ ಸೃಷ್ಟಿಸಿದ ತಾಯಿ – ಮಗಳು; ಮೋಡಿ ಮಾಡಿದೆ ಈ ಪೈಲೆಟ್​ ಜೋಡಿ…!

ತಾಯಿ ಮತ್ತು ಮಗಳ ಪೈಲೆಟ್​ ಜೋಡಿ ಒಂದೇ ವಿಮಾನದ ಜವಾಬ್ದಾರಿ ನಿರ್ವಹಿಸಿ ಇತಿಹಾಸ ನಿರ್ಮಿಸಿದೆ.

ಕ್ಯಾಪ್ಟನ್​ ಹಾಲಿ ಪೆಟಿಟ್​ ಮತ್ತು ಫಸ್ಟ್​ ಆಫೀಸರ್​ ಕೀಲಿ ಪೆಟಿಟ್​ ಜುಲೈ 23 ರಂದು ಅಮೆರಿಕಾದ ಡೆನ್ವರ್​ನಿಂದ ಸೇಂಟ್​ ಲೂಯಿಸ್​ಗೆ ವಿಮಾನ ಚಲಾಯಿಸಿದ್ದು, ಇದು ಅಮೆರಿಕಾ ಏರ್​ಲೈನ್ಸ್​ ಇತಿಹಾಸದಲ್ಲಿ ಮೊದಲ ತಾಯಿ- ಮಗಳು ಪೈಲೆಟ್​ ಜೋಡಿ ಮುನ್ನೆಡೆಸಿದ್ದು ದಾಖಲೆಯಾಯಿತು.

ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಹಾಲಿ ಪೆಟಿಟ್​ ವಿಮಾನದಲ್ಲಿ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲರಿಗೂ ಧನ್ಯವಾದಗಳು. ಇದು ನಮಗೆ ಮತ್ತು ಸೌತ್ ​ವೆಸ್ಟ್​ ಏರ್​ಲೈನ್ಸ್​ಗೆ ಬಹಳ ರೋಮಾಂಚನಾಕಾರಿ ದಿನವಾಗಿದೆ, ಸೌತ್ ​ವೆಸ್ಟ್​ ಏರ್​ಲೆನ್ಸ್​ನ ಡೆಕ್​ನಲ್ಲಿ ನಾವು ಮೊದಲ ತಾಯಿ – ಮಗಳು ಜೋಡಿಯಾಗಿದ್ದೇವೆ. ಆದ್ದರಿಂದ ಇಲ್ಲಿಗೆ ಬಂದಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಹೇಳುವುದನ್ನು ಕೇಳಬಹುದು.

ಆರಂಭದಲ್ಲಿ ಕಾಲೇಜು ಮುಗಿಸಿ ಪೈಲೆಟ್​ ಅಟೆಂಡೆಂಟ್​ ಆಗಿ ಕೆಲಸ ಆರಂಭಿಸಿದ ಹಾಲಿ, ನಂತರ ಡ್ರೈವಿಂಗ್​ ಸೀಟ್​ ನಲ್ಲಿ ಕೂರಲು ನಿರ್ಧರಿಸಿದ್ದರು. ಬಳಿಕ ಫ್ಲೈಯಿಂಗ್​ ತರಗತಿಗಳನ್ನು ತೆಗೆದುಕೊಂಡಳು. ತನ್ನ ತಾಯಿಯಂತೆ, ಕೆಲ್ಲಿ ಕೂಡ ತನ್ನ 14ನೇ ವಯಸ್ಸಿನಲ್ಲಿ ಪೈಲಟ್​ ಆಗಬೇಕೆಂದು ಕನಸು ಕಂಡು, ನಂತರ ತರಬೇತಿ ಪಡೆದು ಪರವಾನಗಿಯನ್ನು ಪಡೆದುಕೊಂಡಿದ್ದಾರೆ. 2017ರಲ್ಲಿ ಇಂಟರ್ನ್ ಆಗಿ ಏರ್​ಲೈನ್​ಗೆ ಸೇರಿದಳು.

ಭಾರತದಲ್ಲಿ ಇದೇ ರೀತಿಯ ಘಟನೆಯಲ್ಲಿ ತಾಯಿ -ಮಗ ಪೈಲಟ್​ ಜೋಡಿಯು ತಾಯಂದಿರ ದಿನದ ಸಂದರ್ಭದಲ್ಲಿ ಒಟ್ಟಿಗೆ ಹಾರಾಟ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...