alex Certify ವಧುವಿಗೆ ಕೇಕ್​ ತಿನ್ನಿಸಬೇಕು ಎನ್ನುವಷ್ಟರಲ್ಲಿಯೇ ಕೇಕ್​ ಹಾಳು ಮಾಡಿದ ವ್ಯಕ್ತಿ; ವರನಿಂದ ಕಪಾಳಮೋಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿಗೆ ಕೇಕ್​ ತಿನ್ನಿಸಬೇಕು ಎನ್ನುವಷ್ಟರಲ್ಲಿಯೇ ಕೇಕ್​ ಹಾಳು ಮಾಡಿದ ವ್ಯಕ್ತಿ; ವರನಿಂದ ಕಪಾಳಮೋಕ್ಷ

ಮದುವೆ ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದೇ ನಡೆಯಲಿ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಏನೆಲ್ಲಾ ಸರ್ಕಸ್​ ಮಾಡುತ್ತಾರೆ. ಭಾರತೀಯ ಸಂಪ್ರದಾಯವು ಸ್ವಲ್ಪ ಜೋರಾಗಿಯೇ ಇದ್ದ ಕಾರಣದಿಂದ ಭಾರತೀಯ ಮದುವೆಗಳಲ್ಲಿ ಅದರಲ್ಲಿಯೂ ಹೆಣ್ಣಿನ ಮನೆಯವರು ಮದುವೆ ಸರಿಯಾಗಿ ನೆರವೇರಬೇಕೆಂದು ಎಲ್ಲಾ ದೇವರಿಗೂ ಹರಕೆ ಹೊತ್ತುಕೊಳ್ಳುವುದು ಇದೆ.

ಮದುವೆಗೆ ಬಂದ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ನಿಜ. ಆದರೆ ಆ ಅತಿಥಿಯೇ ಎಡವಟ್ಟು ಮಾಡಿದರೆ? ಆಗಲೂ ಅವರನ್ನು ಬೈಯಬಾರದು ಎಂದು ಸಂಪ್ರದಾಯ ಹೇಳುತ್ತದೆ.

ವಿದೇಶಗಳಲ್ಲಿ ಈ ಸಂಪ್ರದಾಯ ಇದೆಯೋ ಇಲ್ಲವೋ ತಿಳಿಯದು. ಆದರೆ ಹೀಗೆ ಎಡವಟ್ಟು ಮಾಡಲು ಹೋದ ಅತಿಥಿಯೊಬ್ಬನನ್ನು ವರ ಮಹಾಶಯ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ಕೆಲವು ದೇಶಗಳಲ್ಲಿ ಮದುವೆ, ಹುಟ್ಟುಹಬ್ಬ ಯಾವುದೇ ಸಂಪ್ರದಾಯವಿದ್ದರೂ ಅದರಲ್ಲಿ ಕೇಕ್​ ಕತ್ತರಿಸುವುದೇ ಮಹತ್ವದ ಪಾತ್ರ ವಹಿಸುತ್ತದೆ. ಮದುವೆಯಾಗಿದ್ದರೆ ಕೇಕ್​ ಕತ್ತರಿಸಿ ವಧು ತನ್ನ ವರನಿಗೂ, ವರ ತನ್ನ ವಧುವಿಗೂ ಅದನ್ನು ತಿನ್ನಿಸುವುದು ನಂತರ ಉಂಗುರ ಬದಲಾಯಿಸಿಕೊಳ್ಳುವುದೇ ಇಲ್ಲಿ ಮಹತ್ವದ್ದು. ಅಂಥ ಮಹತ್ವದ ಕಾರ್ಯಕ್ಕೇ ಅಡ್ಡಿಪಡಿಸಿದರೆ ಹೇಗಿರುತ್ತದೆ? ಈ ವಿಡಿಯೋದಲ್ಲಿ ನೋಡಿದರೆ ಇಲ್ಲಿ ವರ ಸಿಟ್ಟುಗೊಳ್ಳಲೂ ಅದೇ ಕಾರಣ.

ಇನ್ನೇನು ವರ ಕೇಕ್​ ಕತ್ತರಿಸಿ ವಧುವಿನ ಬಾಯಿಗೆ ಇಡಬೇಕು ಎನ್ನುವಷ್ಟರಲ್ಲಿ ಫುಲ್​ ಟೈಟ್​ ಆಗಿ ಬಂದ ವ್ಯಕ್ತಿಯೊಬ್ಬ ಕೇಕ್​ ಅನ್ನು ನಾಶಪಡಿಸಿದ್ದಾನೆ. ವಧು-ವರರ ಸಮೀಪ ಹೋದ ವ್ಯಕ್ತಿ ಕೇಕ್ ಅನ್ನು ಕೈಯಿಂದ ಹಿಡಿದು ವರ ಮತ್ತು ವಧುವಿನ ಮುಖದ ಮೇಲೆ ಹಾಕಲು ಪ್ರಯತ್ನಿಸುತ್ತಾನೆ. ಆಘಾತಗೊಂಡ ವಧು ಹಿಂದಕ್ಕೆ ಸರಿಯುತ್ತಾಳೆ.

ಆ ಅತಿಥಿಯ ಕ್ರಮಕ್ಕೆ ಸಿಟ್ಟಿಗೆದ್ದ ವರ ಮಹಾಶಯ ಅತಿಥಿಯ ಕಪಾಳಕ್ಕೆ ಹೊಡೆಯುತ್ತಾನೆ. ಕೇಕ್​ ನಾಶಪಡಿಸಿದ ಆ ವ್ಯಕ್ತಿ ಕೊನೆಗೆ ವರನನ್ನು ಅಪ್ಪಿಕೊಳ್ಳಲು ಮುಂದಾದಾಗ ಸಿಟ್ಟಿಗೆದ್ದ ವರ ಕಪಾಳಕ್ಕೆ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...