alex Certify ಸ್ಕೂಬಾ ಡೈವರ್​ನ ಕ್ಯಾಮೆರಾ ನುಂಗಿ ಉಗುಳಿದ ಶಾರ್ಕ್​: ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೂಬಾ ಡೈವರ್​ನ ಕ್ಯಾಮೆರಾ ನುಂಗಿ ಉಗುಳಿದ ಶಾರ್ಕ್​: ಭಯಾನಕ ವಿಡಿಯೋ ವೈರಲ್

ಸ್ಕೂಬಾ ಡೈವಿಂಗ್​ ಎಂದರೆ ಧೈರ್ಯ ಅಷ್ಟಿಷ್ಟು ಸಾಕಾಗುವುದಿಲ್ಲ. ಎಷ್ಟೋ ವೇಳೆ ಸಮುದ್ರಾದಳಲ್ಲಿನ ಭಯಾನಕ ಜಲಚರಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಸ್ಕೂಬಾ ಡೈವರ್​ ಒಬ್ಬನ ಮೇಲೆ ಭಯಾನಕ ಶಾರ್ಕ್​ ದಾಳಿ ಮಾಡಿರುವ ದೃಶ್ಯ ಸಮುದ್ರದಾಳದಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

ಈ ಶಾರ್ಕ್​ ಇಡೀ ಕ್ಯಾಮೆರಾವನ್ನು ನುಂಗಿ ನಂತರ ಅದನ್ನು ಉಗುಳಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ಕೂಬಾ ಡೈವರ್‌ನ ನೀರೊಳಗಿನ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ.

ಶಾರ್ಕ್, ಕ್ಯಾಮೆರಾವನ್ನು ತನ್ನ ಬಾಯಿಯಲ್ಲಿ ಹಿಡಿದಿಟ್ಟುಕೊಂಡು ನುಂಗಲು ಪ್ರಯತ್ನಿಸಿತು, ಅದನ್ನು ಮರಳಿ ಹೊರಕ್ಕೆ ಉಗುಳಿದೆ. ಈ ಭಯಾನಕ ವಿಡಿಯೋವನ್ನು UOldguy ಎಂಬ ಟ್ವಿಟರ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...