alex Certify ಅತಿ ದೊಡ್ಡ ಬಾಯಿ ಎಂಬ ಪಟ್ಟ ಪಡೆದುಕೊಂಡ ಮಹಿಳೆ ಈಗ ಗಿನ್ನೆಸ್​ ದಾಖಲೆ ಪುಟಗಳಲ್ಲಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ದೊಡ್ಡ ಬಾಯಿ ಎಂಬ ಪಟ್ಟ ಪಡೆದುಕೊಂಡ ಮಹಿಳೆ ಈಗ ಗಿನ್ನೆಸ್​ ದಾಖಲೆ ಪುಟಗಳಲ್ಲಿ…..!

ನಂಬಲಾಗದಷ್ಟು ದೊಡ್ಡ ಬಾಯಿ ಹೊಂದಿರುವ ಮಹಿಳೆಯೀಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಟ ಸೇರಿದ್ದಾಳೆ. ಈಕೆಯ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದೆ.

ಅಮೆರಿಕದ ಕನೆಕ್ಟಿಕಟ್‌ನ ಸಮಂತಾ ರಾಮ್ಸ್‌ಡೆಲ್ ಅವರು 2021 ರಲ್ಲಿ ವಿಶ್ವದ ಅತಿದೊಡ್ಡ ಬಾಯಿಯ ಅಂತರವನ್ನು ಹೊಂದಿರುವ ಮಹಿಳೆ ದಾಖಲೆ ಬರೆದರು. ಈಕೆಯ ಬಾಯಿಯಲ್ಲಿ 6.52 ಸೆಂ.ಮೀ. ಅಂತರವಿದೆ. 32 ವರ್ಷ ವಯಸ್ಸಿನ ಈಕೆ, ಸೇಬು, ಕಿತ್ತಳೆ, ಬೃಹತ್ ಕುಕೀ, ಚಾಕೊಲೇಟ್ ಬಾರ್ ಮತ್ತು ಬರ್ಗರ್ ಅನ್ನು ತನ್ನ ಬಾಯೊಳಗೆ ಒಂದೇ ಸಲಕ್ಕೆ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ ಪ್ರಕಾರ, ಚಿಕ್ಕ ವಯಸ್ಸಿನಿಂದಲೂ, ಸ್ಯಾಮ್‌ಗೆ ಅವಳು ದೊಡ್ಡ ಬಾಯಿಯನ್ನು ಹೊಂದಿದ್ದಳು ಎಂದು ಯಾವಾಗಲೂ ತಿಳಿದಿತ್ತು. ಅವಳ ಎಲ್ಲಾ ಬಾಲ್ಯದ ಛಾಯಾಚಿತ್ರಗಳಲ್ಲಿ ಅವಳ ದೈತ್ಯ ನಗು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದೆ.

ಹಲವು ನೆಟ್ಟಿಗರು ಬಾಯಿ ನೋಡಿ ಅಚ್ಚರಿ ಪಟ್ಟರೂ, ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಈಚೀಚೆಗೆ ಗಿನ್ನೆಸ್​ ದಾಖಲೆಯ ಗುಣಮಟ್ಟ ಕುಸಿಯುತ್ತಿದೆ. ಅಸಂಬದ್ಧ ಎನ್ನುವಂಥದ್ದೆಲ್ಲಾ ದಾಖಲೆ ಪುಟ ಸೇರುತ್ತಿವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...