alex Certify ಬೆಂಕಿ ಬಿದ್ದಿದ್ದನ್ನು ಗುರುತಿಸಿ ನೀರು ಹಾಯಿಸುತ್ತೆ ಕೃತಕ ಬುದ್ಧಿಮತ್ತೆಯ ಈ ಉಪಕರಣ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿ ಬಿದ್ದಿದ್ದನ್ನು ಗುರುತಿಸಿ ನೀರು ಹಾಯಿಸುತ್ತೆ ಕೃತಕ ಬುದ್ಧಿಮತ್ತೆಯ ಈ ಉಪಕರಣ: ವಿಡಿಯೋ ವೈರಲ್​

ಕೃತಕ ಬುದ್ಧಿಮತ್ತೆಯ ಮೂಲಕ ಹಲವಾರು ರೀತಿಯ ತಂತ್ರಗಳನ್ನು ಮಾಡುತ್ತಿರುವುದು ಈಗಿನ ಟ್ರೆಂಡ್​. ಇದೀಗ ನಮ್ಮ ಜೀವನದ ಭಾಗವೇ ಆಗಿ ಹೋಗಿದೆ. ಕೃತಕ ಬುದ್ಧಿಮತ್ತೆಯ ಮೂಲಕ ಅಸಾಧ್ಯವಾದದ್ದು ಯಾವುದೂ ಇಲ್ಲ ಎನ್ನುವಂಥ ತಂತ್ರಗಳು ರೂಪು ಪಡೆಯುತ್ತಿದ್ದು, ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಇಂದು, ಪ್ರಪಂಚದಾದ್ಯಂತ ಎಂಜಿನಿಯರ್‌ಗಳು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಸಹಾಯದಿಂದ ಜನರಿಗೆ ಸ್ಮಾರ್ಟ್ ಪರಿಹಾರಗಳನ್ನು ಒದಗಿಸುತ್ತಿದ್ದಾರೆ. ಈ ಸ್ಮಾರ್ಟ್ ತಂತ್ರಜ್ಞಾನದ ಒಂದು ಕುತೂಹಲಕಾರಿ ಸೃಷ್ಟಿಯೊಂದೀಗ ಭಾರಿ ವೈರಲ್​ ಆಗಿದೆ.

ಇದು ಸ್ಮಾರ್ಟ್ ಸ್ಪ್ರಿಂಕ್ಲರ್‌ಗಳಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಬೆಂಕಿಯನ್ನು ನಂದಿಸಲು ರಚಿಸಲಾಗಿದೆ. ಇದರ ಕುರಿತು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದೆ. 51 ಸೆಕೆಂಡ್‌ಗಳ ವಿಡಿಯೋದಲ್ಲಿ ಕಾರ್ಡ್‌ಬೋರ್ಡ್ ಮತ್ತು ಮರವನ್ನು ಬಳಸಿ ಈ ತಂತ್ರಜ್ಞಾನ ರೂಪಿಸಿರುವುದನ್ನು ನೋಡಬಹುದು.

ಸ್ಮಾರ್ಟ್ ಸ್ಪ್ರಿಂಕ್ಲರ್ ಅನ್ನು ದೂರದಲ್ಲಿ ಇರಿಸಲಾಗುತ್ತದೆ ಮತ್ತು ಅದನ್ನು ಚಾವಣಿಗೆ ಜೋಡಿಸಲಾಗುತ್ತದೆ, ನಿಧಾನವಾಗಿ ಇದು ತಿರುಗಲು ಪ್ರಾರಂಭಿಸುತ್ತದೆ, ಯಾವ ಜಾಗದಲ್ಲಿ ಬೆಂಕಿ ಬಿದ್ದಿದೆ ಎಂದು ತಾನೇ ಗುರುತಿಸಿ, ತಕ್ಷಣ ಬೆಂಕಿಯನ್ನು ನಿಲ್ಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ 33 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...