alex Certify OMG: ಒಂದೂವರೆ ದಿನದಲ್ಲಿ ನಿಮಾರ್ಣವಾಯ್ತು 10 ಅಂತಸ್ತಿನ ಕಟ್ಟಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಒಂದೂವರೆ ದಿನದಲ್ಲಿ ನಿಮಾರ್ಣವಾಯ್ತು 10 ಅಂತಸ್ತಿನ ಕಟ್ಟಡ…!

ಗಂಗನಚುಂಬಿ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಅಂದರೆ ವರ್ಷಾನುಗಟ್ಟಲೇ ಪರಿಶ್ರಮ ಅತ್ಯಗತ್ಯ. ಆದರೆ ಚೀನಾದ ಚಂಗ್ಶಾದಲ್ಲಿರುವ ಕಟ್ಟಡ ಕಾಮಗಾರಿ ನಡೆಸುವ ಕಂಪನಿ ಮಾತ್ರ ಈ ಮಾತಿಗೆ ತದ್ವಿರುದ್ಧ ಎಂಬಂತೆ ಕೆಲಸ ಮಾಡಿ ತೋರಿಸಿದೆ. ಕೇವಲ 28 ಗಂಟೆ 45 ನಿಮಿಷಗಳಲ್ಲಿ ಈ ಕಂಪನಿಯು 10 ಅಂತಸ್ತಿನ ಕಟ್ಟಡವನ್ನ ನಿರ್ಮಾಣ ಮಾಡಿದೆ.

ಅರೇ….! ಇಷ್ಟು ಕಡಿಮೆ ಸಮಯದಲ್ಲಿ ಗಗನಚುಂಬಿ ಕಟ್ಟಡ ನಿರ್ಮಾಣ ಕಾರ್ಯ ಹೇಗೆ ಸಾಧ್ಯವಾಯ್ತು ಎಂದು ನೀವು ಯೋಚಿಸ್ತಾ ಇರಬಹುದು. ಇದೊಂದು ಪೂರ್ವ ನಿರ್ಮಿತ ಕಟ್ಟಡ ನಿರ್ಮಾಣ ವ್ಯವಸ್ಥೆ ತಂತ್ರಜ್ಞಾನವಾಗಿದೆ. ಈ ಕಂಪನಿಯು ಮೊದಲೇ ಅಂತಸ್ತುಗಳನ್ನ ನಿರ್ಮಾಣ ಮಾಡಿಕೊಂಡಿರುತ್ತದೆ.

ಬಳಿಕ ಇದನ್ನ ಜೋಡಣೆ ಮಾಡುವ ಪ್ರಕ್ರಿಯೆಯನ್ನ ಮಾಡಲಾಗುತ್ತೆ. ಎಲ್ಲಾ ಅಂತಸ್ತುಗಳನ್ನ ಒಂದರ ಮೇಲೆ ಒಂದರಂತೆ ಜೋಡಣೆ ಮಾಡಿದ ಬಳಿಕ ನೀರಿನ ಸೌಲಭ್ಯ ಹಾಗೂ ವಿದ್ಯುತ್​ ಸೌಲಭ್ಯಗಳನ್ನ ಒದಗಿಸಲಾಗುತ್ತದೆ.

ಯುಟ್ಯೂಬ್​ನಲ್ಲಿ ಪೋಸ್ಟ್​ ಮಾಡಲಾದ 4 ನಿಮಿಷ 52 ಸೆಕೆಂಡ್​ನ ವಿಡಿಯೋದಲ್ಲಿ ಈ ಗಗನಚುಂಬಿ ಕಟ್ಟಡವನ್ನ ಹೇಗೆ ನಿರ್ಮಾಣ ಮಾಡಲಾಯ್ತು ಅನ್ನೋದನ್ನ ತೋರಿಸಲಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...