alex Certify ನಗುವಂತೆ ಕಾಣುತ್ತಿರುವ ಈ ಮೀನುಗಳು ಬಲು ಡೇಂಜರಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗುವಂತೆ ಕಾಣುತ್ತಿರುವ ಈ ಮೀನುಗಳು ಬಲು ಡೇಂಜರಸ್…!

ಸಮುದ್ರದ ಅಡಿಯಲ್ಲಿ ವಿವಿಧ ಜಾತಿಯ ಮೀನುಗಳಿವೆ. ಅವುಗಳಲ್ಲಿ ಕೆಲವು ನಮಗೆ ತಿಳಿದಿದ್ದರೂ ಹೆಸರೇ ತಿಳಿದಿಲ್ಲದ ಹಲವು ಬಗೆಯವು ಇವೆ.

ಇತ್ತೀಚೆಗೆ ನೆಟ್ಟಿಗರನ್ನು ರಂಜಿಸಿದ ವಿಡಿಯೊವೊಂದರಲ್ಲಿ ನಗುವಂತೆ ಕಾಣುವ ಮೀನು ಕಾಣಿಸುತ್ತಿದೆ. ನೆದರ್​ಲ್ಯಾಂಡ್​ ನಿವಾಸಿ ಎಂದು ಹೇಳಿಕೊಳ್ಳುವ ಬ್ಯುಟೆಂಗೆಬೀಡೆನ್​ ಹೆಸರಿನ ಖಾತೆಯು ಈಗ ವೈರಲ್​ ವಿಡಿಯೊವನ್ನು ಹಂಚಿಕೊಂಡಿದೆ. “ನಮಗೆಲ್ಲರಿಗೂ ಈ ನಗು ಬೇಕು…..” ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್​ ಇದೆ.

7 ಸೆಕೆಂಡ್​ಗಳ ವಿಡಿಯೊವು ನೀರಿನ ಅಡಿಯಲ್ಲಿ ಈಜುತ್ತಿರುವ ಮೀನುಗಳನ್ನು ತೋರಿಸುತ್ತದೆ. ಅವೆಲ್ಲವೂ ದೊಡ್ಡ ಕಣ್ಣುಗಳೊಂದಿಗೆ ಸಣ್ಣ, ಅಂಡಾಕಾರದ ಆಕಾರದ ದೇಹಗಳನ್ನು ಹೊಂದಿದ್ದರೂ ಜನರ ಗಮನ ಸೆಳೆದದ್ದು ಮೀನುಗಳೆಲ್ಲ ನಗುತ್ತಿರುವಂತೆ ಕಾಣುತ್ತಿವೆ.

ಮೇಲ್ನೋಟಕ್ಕೆ, ಈ ನಗುತ್ತಿರುವ ಮೀನುಗಳು ಮುದ್ದಾಗಿ ಕಾಣಿಸಬಹುದು, ಅವುಗಳು ಸಾಕಷ್ಟು ಅಪಾಯಕಾರಿ ತಳಿಗಳಾಗಿವೆ. ಅವುಗಳನ್ನು ಮುಖ್ಯವಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಸಾಗರಗಳಲ್ಲಿ ಕಂಡುಬರುವ ಪಫರ್​ ಮೀನು ಎಂದು ಕರೆಯಲಾಗುತ್ತದೆ.

ಅವುಗಳಿಗೆ ಹೆದರಿಕೆ ಎದುರಾದಾಗ ಅಥವಾ ಬೇಟೆಯನ್ನು ಹುಡುಕಿದಾಗ ಈ ಮೀನುಗಳು ಬಲೂನಿನಂತೆ ತಮ್ಮನ್ನು ಉಬ್ಬಿಸಿಕೊಳ್ಳುತ್ತವೆ ಮತ್ತು ಅವುಗಳ ದೇಹದಿಂದ ಮೊನಚಾದ ಮುಳ್ಳುಗಳು ಹೊರಹೊಮ್ಮುತ್ತವೆ. ಈ ಮುಳ್ಳುಗಳು ವಿಷದಿಂದ ತುಂಬಿವೆ.

ಸೈನೈಡ್​ ರಾಸಾಯನಿಕಕ್ಕಿಂತ ಕೆಟ್ಟದಾಗಿರುವ ವಿಷ ಇದರಲ್ಲಿದ್ದು, ಹೆಚ್ಚು ಮಾರಕವೆಂದು ಪರಿಗಣಿಸಲಾಗಿದೆ. ಇದು ಸೈನೈಡ್​ಗಿಂತ ಸುಮಾರು 1200 ಪಟ್ಟು ಹೆಚ್ಚು ವಿಷಕಾರಿಯಾಗಿದೆ. ಇವು ವಿಷಪೂರಿತ ಮುಳ್ಳುಗಳಿಂದ ಒಂದು ಕ್ಷಣದಲ್ಲಿ 30 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ. ಈ ನಗುವ ಮೀನಿನ ವೀಡಿಯೊ 7.9 ಮಿಲಿಯನ್​ ವೀಕ್ಷಣೆಯಾಗಿದ್ದು, 334.9 ಕೆ ಗಿಂತ ಹೆಚ್ಚು ಲೈಕ್​ ಗಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...