alex Certify ಸಾಕುನಾಯಿಯ ಹುಟ್ಟುಹಬ್ಬವನ್ನು ಆರತಿ ಬೆಳಗಿ ಆಚರಿಸಿದ ಸುಧಾ ಮೂರ್ತಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕುನಾಯಿಯ ಹುಟ್ಟುಹಬ್ಬವನ್ನು ಆರತಿ ಬೆಳಗಿ ಆಚರಿಸಿದ ಸುಧಾ ಮೂರ್ತಿ: ವಿಡಿಯೋ ವೈರಲ್

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರದ್ದು ಬಹಳ ಸರಳ ವ್ಯಕ್ತಿತ್ವ. ಅವರ ದಯೆ ಹಾಗೂ ಮಾನವೀಯ ಆದರ್ಶಗಳ ಜೀವನ ಯುವ ಪೀಳಿಗೆಯ ಪ್ರೇರಣೆಯಾಗಿದೆ. ಮಡಿಕೇರಿ ಮಳೆ ದುರಂತ ಸಂದರ್ಭಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನಿಮ್ಮ ಮನ ಕರಗೋದು ಖಚಿತ.

ತಮ್ಮ ಸಾಕು ನಾಯಿ ಗೋಪಿಯ ಹುಟ್ಟುಹಬ್ಬದ ನಿಮಿತ್ತ ಸುಧಾ ಮೂರ್ತಿ ಹಾಗೂ ಅವರ ಸಹೋದರಿ ತಮ್ಮ ಮುದ್ದಿನ ನಾಯಿಗೆ ಆರತಿ ಬೆಳಗಿದ್ದಾರೆ. ಸಹೋದರಿಯರಿಬ್ಬರೂ ವಿಧಿವತ್ತಾಗಿ ನಾಯಿಗೆ ಆರತಿ ಬೆಳಗುತ್ತಾ, ತಮ್ಮ ಮುದ್ದಿನ ಶ್ವಾನವನ್ನು ಪ್ರೀತಿಯಿಂದ ಮುದ್ದಿಸುತ್ತಾ ಹುಟ್ಟುಹಬ್ಬದ ಶುಭಾಶಯಗಳನ್ನು ಹಾಡಿದ್ದಾರೆ.

ಸಾಕು ನಾಯಿ ಅಂದ್ರೆ ಅದು ಕೇವಲ ಶ್ವಾನವಾಗಿರದೆ ನಮ್ಮ ಕುಟುಂಬದ ಸದಸ್ಯನಂತಿರುತ್ತದೆ. ಹಾಗೆಯೇ ಸುಧಾ ಮೂರ್ತಿ ಅವರ ಮನೆಯಲ್ಲೂ ಕೂಡ ತಮ್ಮ ಶ್ವಾನಕ್ಕೆ ಕುಟುಂಬದ ಸದಸ್ಯನ ಸ್ಥಾನವನ್ನೇ ನೀಡಲಾಗಿದೆ. ಹೀಗಾಗಿ ಶ್ವಾನದ ಹುಟ್ಟುಹಬ್ಬದ ನಿಮಿತ್ತ ಅದಕ್ಕೆ ಆರತಿ ಬೆಳಗೆ, ಸಂಭ್ರಮಿಸಿದ್ದಾರೆ.

ಆರ್.ಶ್ರೀಕಾಂತ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು 30,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

— Chandra R. Srikanth (@chandrarsrikant) December 6, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...