alex Certify ಮಹಿಳೆ ಕಿವಿಯೊಳಗಿತ್ತು ಹಾವು…! ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಕಿವಿಯೊಳಗಿತ್ತು ಹಾವು…! ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಮಹಿಳೆಯ ಕಿವಿಯೊಳಗೆ ಹಾವು ಸಿಲುಕಿರುವ ವಿಲಕ್ಷಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿದೆ.

ಮಹಿಳೆಯ ಕಿವಿಯಿಂದ ಸರೀಸೃಪವನ್ನು ಹೊರಹಾಕಲು ವೈದ್ಯರು ಅನೇಕ ತಂತ್ರ ಬಳಸುವುದನ್ನು ವಿಡಿಯೋದಲ್ಲಿ ನೋಡಬಹುದು. ಸುಮಾರು 4 ನಿಮಿಷಗಳ ಅವಧಿಯ ಕ್ಲಿಪ್​ನಲ್ಲಿ, ಕೈಯಲ್ಲಿ ಎರಡು ಉಪಕರಣಗಳನ್ನು ಹಿಡಿದಿರುವ ವೈದ್ಯಕೀಯ ತಂಡ ಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಆದರೆ ಪ್ರಯತ್ನ ವ್ಯರ್ಥವಾಯಿತು.

ಹಾವಿನ ಹಿಡಿತವನ್ನು ಸಡಿಲಗೊಳಿಸಲು ಪದೇ ಪದೇ ಇಯರ್​ ಟಾನಿಕ್​ ಬಳಸುತ್ತಾರೆ. ಆದರೆ ಅದನ್ನು ಹೊರತೆಗೆಯಲು ಸಾಧ್ಯವಾಗುವುದಿಲ್ಲ. ವೈದ್ಯರು ಮಹಿಳೆಯ ದೇಹದ ಕಿವಿಯಿಂದ ಸರೀಸೃಪವನ್ನು ಹೊರಹಾಕಲು ಸಾಧ್ಯವಾಯಿತೇ ಎಂಬುದು ಸ್ಪಷ್ಟವಾಗಿಲ್ಲ.

ವಿಡಿಯೊವನ್ನು ನೋಡಿದ ನಂತರ ಅನೇಕರು ಗಾಬರಿಯಾಗಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ಹಲವರು ಪ್ರಶ್ನೆಗಳನ್ನು ಹಾಕಲು ಪ್ರಾರಂಭಿಸಿದ್ದಾರೆ. ಹಾವು ನಿಜವಾಗಿಯೂ ಮನುಷ್ಯನ ಕಿವಿಗೆ ಹೊಂದಿಕೊಳ್ಳಬಹುದೇ ಎಂದು ಒಬ್ಬರು ಆಶ್ಚರ್ಯಪಟ್ಟರು, ಇನ್ನೊಬ್ಬರು ಘಟನೆಯ ಸಂಪೂರ್ಣ ವಿಡಿಯೋ ಪೋಸ್ಟ್​ ಮಾಡುವಂತೆಯೂ ಒತ್ತಾಯಿಸಿದ್ದಾರೆ. ಇದು ನಕಲಿ ಎಂದವರೂ ಇದ್ದಾರೆ.

ಬೆಚ್ಚಿಬೀಳಿಸುವಂತಿದೆ ಈವಿಡಿಯೋ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...