alex Certify ಅಡುಗೆ ಮನೆಯಲ್ಲಿ ಹೆಬ್ಬಾವುಗಳ ಮಿಲನ: ಬೆಚ್ಚಿಬಿದ್ದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯಲ್ಲಿ ಹೆಬ್ಬಾವುಗಳ ಮಿಲನ: ಬೆಚ್ಚಿಬಿದ್ದ ಮಹಿಳೆ

ಸ್ಕೂಟರ್​ ಒಳಗೆ, ಕಾರಿನೊಳಗೆ, ಮಂಚದ ಒಳಗೆ ಹೀಗೆ ನಾಗರಹಾವುಗಳ ಇತ್ತೀಚೆಗೆ ಬೆಚ್ಚಗಿನ ಜಾಗ ಹುಡುಕಿ ಬರುವುದು ಮಾಮೂಲಾಗಿಬಿಟ್ಟಿದೆ. ನಾಗರಹಾವುಗಳೆಂದರೆ ಕನಸಿನಲ್ಲಿಯೂ ಬೆಚ್ಚಿಬೀಳುವ ಸಂದರ್ಭ ಇದ್ದಾಗ ಒಂದಲ್ಲ, ಎರಡು ಹೆಬ್ಬಾವುಗಳನ್ನು ಮನೆಯೊಳಕ್ಕೇ ನೋಡಿದರೆ ಸ್ಥಿತಿ ಹೇಗಾಗಬೇಡ?

ಇಂಥದ್ದೊಂದು ಘಟನೆ ಕ್ವೀನ್ಸ್‌ಲ್ಯಾಂಡ್​ನಲ್ಲಿ ನಡೆದಿದೆ. ಮನೆಯ ಅಡುಗೆ ಕೋಣೆಯಲ್ಲಿ ಇಟ್ಟಿರುವ ಮೈಕ್ರೊವೇವ್ ಓವನ್‌ನ ಹಿಂದೆ ಎರಡು ಹೆಬ್ಬಾವುಗಳು ಮಿಲನದ ತೊಡಗಿದ್ದನ್ನು ಕಂಡು ಮಹಿಳೆಯೊಬ್ಬಳು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ.

ಅಡುಗೆ ಮಾಡಲು ಮಹಿಳೆ ಹೋದಾಗ ಏನೋ ಸರಸರ ಎನ್ನುವುದು ಕೇಳಿದೆ. ನೋಡಿದಾಗ ಎರಡು ಹೆಬ್ಬಾವುಗಳು ಮಿಲನದಲ್ಲಿ ತೊಡಗಿದ್ದನ್ನು ಕಂಡ ಕಿರುಚಿಕೊಂಡಿದ್ದಾಳೆ.‌ ಕೂಡಲೇ ಹಾವು ಹಿಡಿಯುವವರಿಗೆ ಕರೆ ಮಾಡಲಾಗಿದೆ. ವೃತ್ತಿಪರರು ಹಾವುಗಳನ್ನು ಹಿಡಿದು ಬುಟ್ಟಿಯಲ್ಲಿ ಹಾಕಿಕೊಂಡು ಹೋಗಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಮಹಿಳೆಯ ಆಯಸ್ಸು ಗಟ್ಟಿಯಾಗಿತ್ತು, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟದ್ದಾಗಿತ್ತು ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...