alex Certify ಪಂಜಾಬ್ ಪ್ಲೇ ಆಫ್ ಗೆ ಹೋಗದ್ದಕ್ಕೆ ಶಿಖರ್ ಧವನ್ ಗೆ ಬಿತ್ತು ಒದೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್ ಪ್ಲೇ ಆಫ್ ಗೆ ಹೋಗದ್ದಕ್ಕೆ ಶಿಖರ್ ಧವನ್ ಗೆ ಬಿತ್ತು ಒದೆ….!

ಐಪಿಎಲ್ ಪ್ಲೇಆಫ್ ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಕೊಂಡೊಯ್ಯಲು ವಿಫಲರಾಗಿದ್ದಕ್ಕೆ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ತಮ್ಮ ತಂದೆಯಿಂದ ಒದೆ ತಿಂದಿದ್ದಾರೆ !

ಶಿಖರ್ ಧವನ್ 14 ಪಂದ್ಯಗಳಲ್ಲಿ 460 ರನ್ ಸಿಡಿಸಿದ್ದರೂ ಅವರ ತಂದೆಗೆ ತೃಪ್ತಿ ತಂದಿಲ್ಲ. ತಂಡವನ್ನು ಪ್ಲೇ ಆಫ್ ವರೆಗೆ ಕೊಂಡೊಯ್ಯುವಲ್ಲಿ ವಿಫಲನಾಗಿದ್ದೀಯ ಎಂದು ಒದೆ ಕೊಟ್ಟಿದ್ದಾರಂತೆ.

ತಂದೆಯಿಂದ ಒದೆ ತಿನ್ನುತ್ತಿರುವ ವಿಡಿಯೋವನ್ನು ಸ್ವತಃ ಶಿಖರ್ ಧವನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಂದೆಯಿಂದ ಒದೆ ತಿನ್ನುತ್ತಿರುವ ಧವನ್ ರನ್ನು ಕುಟುಂಬ ಸದಸ್ಯರು ಪಾರು ಮಾಡುತ್ತಿರುವ ದೃಶ್ಯವೂ ಇದೆ.

ಪೊಲೀಸ್ ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಇದೇನಪ್ಪಾ ಈ ರೀತಿಯೂ ಇದೆಯಾ ? ಎಂದು ಹುಬ್ಬೇರಿಸಬೇಡಿ. ಕೆಲವು ಕ್ರೇಜಿ ಎನಿಸುವ ವಿಡಿಯೋಗಳನ್ನು ಹಂಚಿಕೊಳ್ಳುವುದರಲ್ಲಿ ಧವನ್ ನಿಷ್ಣಾತರು. ಅದೇ ರೀತಿಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಧವನ್ ಗೆ ತಂದೆ ಒದೆ ಕೊಡುವಂತೆ ಇದ್ದು, ಇದನ್ನು ಬಿಡಿಸಲು ಕುಟುಂಬ ಸದಸ್ಯರು ಪ್ರಯತ್ನ ನಡೆಸುತ್ತಿದ್ದಾರೆ.

ಈ ವಿಡಿಯೋಗೆ ಧವನ್, `ಐಪಿಎಲ್ ಪ್ಲೇ ಆಫ್ ಗೆ ಅರ್ಹತೆ ಪಡೆಯದೇ ಇರುವುದಕ್ಕೆ ನನ್ನ ತಂದೆ ನನಗೆ ಒದೆ ಕೊಟ್ಟರು’ ಎಂದು ಶೀರ್ಷಿಕೆ ಬರೆದಿದ್ದಾರೆ.

ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, `ಬಪ್ಪು ನಿನ್ನಲ್ಲೂ ಒಬ್ಬ ನಟ ಅಡಗಿದ್ದಾನೆ. ಕ್ಯಾ ಬಾತ್ ಹೈ’ ಎಂದು ಹೇಳಿದ್ದಾರೆ.

ಹರ್ಪ್ರೀತ್ ಬ್ರಾರ್ ಪ್ರತಿಕ್ರಿಯೆ ನೀಡಿ, `ಹಹ್ಹ ಅಂಕಲ್ ಬೆಂಕಿಯಾಗಿದ್ದಾರೆ’ ಎಂದು ಉದ್ಘರಿಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...