alex Certify ಫುಟ್ಬಾಲ್ ನಲ್ಲಿಯೂ ಸಚಿನ್ ತೆಂಡೂಲ್ಕರ್ ಕಮಾಲ್…! ವಿಡಿಯೋ ನೋಡಿ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ನಲ್ಲಿಯೂ ಸಚಿನ್ ತೆಂಡೂಲ್ಕರ್ ಕಮಾಲ್…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಆಟದ ಹುಚ್ಚು ಭಾರತವನ್ನೂ ಬಿಟ್ಟಿಲ್ಲ. ಭಾರತವು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲವಾದರೂ ಇಲ್ಲಿಯ ಫುಟ್‌ಬಾಲ್ ಅಭಿಮಾನಿಗಳು ಕ್ರೀಡೆಯನ್ನು ಹುರಿದುಂಬಿಸುವುದನ್ನು ಮತ್ತು ಆಚರಿಸುವುದನ್ನು ನಿಲ್ಲಿಸಿಲ್ಲ.

ಈಗ, ಈ ಎಲ್ಲದರ ನಡುವೆ, ಮಾಜಿ ಕ್ರಿಕೆಟಿಗ ಮತ್ತು ಸೂಪರ್ ‌ಸ್ಟಾರ್ ಸಚಿನ್ ತೆಂಡೂಲ್ಕರ್ ಅವರು ಫಿಫಾ ವಿಶ್ವಕಪ್ 2022 ಥೀಮ್ ಹಿನ್ನೆಲೆಯಲ್ಲಿ ಫುಟ್‌ಬಾಲ್ ಆಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

“ಫುಟ್ಬಾಲ್ ನನ್ನ ಮನಸ್ಸಿನಲ್ಲಿ!” ಎಂಬ ಶೀರ್ಷಿಕೆಯೊಂದಿಗೆ ಕಿರು ವಿಡಿಯೋ ಅವರು ಶೇರ್​ ಮಾಡಿಕೊಂಡಿದ್ದು, ಸಚಿನ್​ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ವೀಡಿಯೊದಲ್ಲಿ, ತೆಂಡೂಲ್ಕರ್ ನೀಲಿ ಟಿ-ಶರ್ಟ್ ಮತ್ತು ನೀಲಿ ಶಾರ್ಟ್ಸ್ ಮೇಲೆ ಕಿತ್ತಳೆ ಬಣ್ಣದ ಉಡುಪನ್ನು ಧರಿಸಿ ಫುಟ್​ಬಾಲ್​ ಆಡುವುದನ್ನು ನೋಡಬಹುದು.

ತಂತ್ರಗಳನ್ನು ಮತ್ತು ಕೌಶಲ ತೋರಿಸುವುದು ವಿಡಿಯೋದಲ್ಲಿ ಕಂಡುಬಂದಿದೆ. “ಕ್ರಿಕೆಟ್ ದೇವರು ಫುಟ್‌ಬಾಲ್ ದೇವರಾಗಲು ಪ್ರಯತ್ನಿಸುತ್ತಿದ್ದಾರೆ” ಎಂದು ಹಲವರು ತಮ್ಮ ಅಭಿಮಾನಿಗೆ ಅಭಿಮಾನ ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್​ ತೆಂಡೂಲ್ಕರ್​ ಆಲ್​ ರೌಂಡರ್​ ಎಂದು ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...