alex Certify ಸಿನಿಮೀಯ ರೀತಿಯಲ್ಲಿ ಹಳಿಯ ಮೇಲಿದ್ದ ವೃದ್ಧನ ರಕ್ಷಣೆ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮೀಯ ರೀತಿಯಲ್ಲಿ ಹಳಿಯ ಮೇಲಿದ್ದ ವೃದ್ಧನ ರಕ್ಷಣೆ..! ವೈರಲ್​ ಆಯ್ತು ವಿಡಿಯೋ

ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸ್​ ಅಧಿಕಾರಿ ಹಾಗೂ ಓರ್ವ ನಾಗರಿಕ ಸಿನಿಮೀಯ ರೀತಿಯಲ್ಲಿ ಪಾರು ಮಾಡಿದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ರೈಲು ಹಳಿಗೆ ಎಂಟ್ರಿ ಕೊಡೋದರ ಒಳಗಾಗಿ ಪೊಲೀಸ್​ ಹಾಗೂ ಪ್ರಯಾಣಿಕ ವ್ಯಕ್ತಿಯ ಜೀವ ಕಾಪಾಡುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಈ ಘಟನೆಯ ದೃಶ್ಯಾವಳಿಗಳನ್ನು ನ್ಯೂಯಾರ್ಕ್​ ಸಿಟಿ ಪೊಲೀಸ್​ ಇಲಾಖೆ ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದೆ. ಈ ವಿಡಿಯೋದಲ್ಲಿ ವ್ಯಕ್ತಿಯು ಸಬ್​​ವೇ ಟ್ರ್ಯಾಕ್​​ನಲ್ಲಿ ಬಿದ್ದಿದ್ದ. ಕೂಡಲೇ ಆ ಸ್ಥಳಕ್ಕೆ ಬಂದ ನ್ಯೂಯಾರ್ಕ್​ ಪೊಲೀಸ್​ ಅಧಿಕಾರಿ ಹಳಿಯ ಕಡೆಗೆ ಇಳಿದಿದ್ದಾನೆ. ಇದರ ಜೊತೆಗೆ ಇನ್ನೊಬ್ಬ ವ್ಯಕ್ತಿ ಕೂಡ ಹಳಿಗೆ ಇಳಿದು 60 ವರ್ಷದ ವ್ಯಕ್ತಿಯನ್ನು ಕಾಪಾಡುವಲ್ಲಿ ನೆರವಾಗಿದ್ದಾನೆ. ಇವರಿಬ್ಬರು ಆ ವ್ಯಕ್ತಿಯನ್ನು ಕಾಪಾಡಿ ಹಳಿಯಿಂದ ಮೇಲಕ್ಕೆ ಜಂಪ್​ ಮಾಡುತ್ತಿದ್ದಂತೆಯೇ ರೈಲು ಅದೇ ಹಳಿಯಿಂದ ಹಾದು ಹೋಗಿದೆ. ಹಳಿಯ ಮೇಲೆ ಬಿದ್ದಿದ್ದ ವೃದ್ಧನನ್ನು ಜೆಸ್ಸಿ ಬ್ರ್ಯಾಂಚ್​ ಎಂದು ಗುರುತಿಸಲಾಗಿದೆ. ಪ್ರಜ್ಞೆ ತಪ್ಪಿ ಇವರು ಹಳಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ.

View this post on Instagram

A post shared by NYPD (@nypd)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...