alex Certify ಮುಂಬೈ ಬೀದಿಗಳಲ್ಲಿ ಹೀಗೆಲ್ಲಾ ಕ್ರಿಸ್‌ಮಸ್‌ ಸಡಗರ: ವಿಡಿಯೋ ವೈರಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಬೀದಿಗಳಲ್ಲಿ ಹೀಗೆಲ್ಲಾ ಕ್ರಿಸ್‌ಮಸ್‌ ಸಡಗರ: ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಅನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ.

ಕ್ರಿಸ್‌ಮಸ್‌ ಹಬ್ಬದ ಉತ್ಸಾಹದಲ್ಲಿ ಮುಳುಗಿದ ಮುಂಬೈನ ಜನರು ಸಾಂತಾ ಕ್ಯಾಪ್‌ಗಳನ್ನು ಧರಿಸಿ ನಗರದ ಬೀದಿಗಳಲ್ಲಿ ಹಾಡುತ್ತಾ ನೃತ್ಯ ಮಾಡುತ್ತಾ ದಿನವನ್ನು ಆನಂದಿಸಿರುವುದನ್ನು ನೋಡಬಹುದು. ಕೊರೋನಾ ವೈರಸ್ ಹರಡುವಿಕೆಯಿಂದಾಗಿ ಕಳೆದ ಎರಡು ವರ್ಷಗಳ ಆಚರಣೆಗಳು ಮಂದವಾಗಿದ್ದುದರಿಂದ ಈ ವರ್ಷ, ಕ್ರಿಸ್‌ಮಸ್ ಹೆಚ್ಚು ವಿಶೇಷವಾಗಿತ್ತು.

ಎಎನ್‌ಐ ಹಂಚಿಕೊಂಡ ವಿಡಿಯೋದಲ್ಲಿ, ಜನರು ಭಾನುವಾರ ಬೆಳಿಗ್ಗೆ ಮುಂಬೈನ ಐಕಾನಿಕ್ ಮರೈನ್ ಡ್ರೈವ್‌ನಲ್ಲಿ ಕ್ರಿಸ್‌ಮಸ್ ಅನ್ನು ಹೆಚ್ಚು ಉತ್ಸಾಹದಿಂದ ಆಚರಿಸಿರುವುದನ್ನು ನೋಡಬಹುದಾಗಿದೆ. ಮಹಿಳೆಯರು, ಮಕ್ಕಳು ಕೂಡ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಮತ್ತೆ ಕೊರೋನಾದ ಸುದ್ದಿ ಹರಿದಾಡುತ್ತಿರುವ ಕಾರಣ, ಜನರು ಈ ಬಾರಿಯಾದರೂ ನೆಮ್ಮದಿಯಿಂದ ಹಬ್ಬ ಆಚರಿಸಿದರು ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...