alex Certify ಥೇಟ್​ ಮನುಷ್ಯರಂತೆ ಕಂಪ್ಯೂಟರ್​ ಮುಂದೆ ಕುಳಿತು ಕೀಬೋರ್ಡ್ ಒತ್ತಿದ ಮಂಗ : ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೇಟ್​ ಮನುಷ್ಯರಂತೆ ಕಂಪ್ಯೂಟರ್​ ಮುಂದೆ ಕುಳಿತು ಕೀಬೋರ್ಡ್ ಒತ್ತಿದ ಮಂಗ : ವಿಡಿಯೋ ವೈರಲ್​

ನಿತ್ಯ ಕಚೇರಿಗೆ ಹೋಗೋದು, ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡೋದು ಅನೇಕರಿಗೆ ನಿತ್ಯದ ಕಾಯಕ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ದೃಶ್ಯವೊಂದರಲ್ಲಿ ಕಂಪ್ಯೂಟರ್​ ಮುಂದೆ ಮಂಗವೊಂದು ಕುಳಿತಿದ್ದು, ನೋಡೋಕ್​ ಸಖತ್​ ಫನ್ನಿಯಾಗಿದೆ.

ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎನ್ನಲಾಗಿದ್ದು ರೈಲ್ವೆ ಕಚೇರಿಯಲ್ಲಿ ಕಂಪ್ಯೂಟರ್​ ಮುಂದೆ ಕುಳಿತ ಮಂಗವು ಕೀಬೋರ್ಡ್ ಹಾಗೂ ಮೌಸ್​ಗಳನ್ನು ಥೇಟ್​ ಮನುಷ್ಯರಂತೆಯೇ ಚಲಾಯಿಸಿದೆ.

ಬೋಲ್ಪುರ್​ ರೈಲ್ವೆ ನಿಲ್ದಾಣದ ವಿಚಾರಣಾ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಥೇಟ್ ಅಧಿಕಾರಿಗಳಂತೆಯೇ ಕುರ್ಚಿಯ ಮೇಲೆ ಕುಳಿತ ಮಂಗವು ಕಂಪ್ಯೂಟರ್​​ನಲ್ಲಿ ಕೆಲಸ ಮಾಡುತ್ತಿರುವಂತೆ ಪೋಸ್​ ಕೊಟ್ಟಿದೆ.

ಮಂಗವು ಕಂಪ್ಯೂಟರ್​ ಚಲಾಯಿಸುತ್ತಿದ್ದ ರೀತಿಯನ್ನು ನೋಡಿದ್ರೆ ಅದು ಬಹಳ ದಿನಗಳಿಂದ ಅಧಿಕಾರಿಗಳು ಕಂಪ್ಯೂಟರ್​ ಚಲಾಯಿಸೋದನ್ನು ಗಮನಿಸುತ್ತಿತ್ತು ಅನ್ನೋದಂತು ಸ್ಪಷ್ಟವಾಗಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಸಖತ್​ ವೈರಲ್​ ಆಗಿದೆ. ಕೋತಿಯ ಮಂಗಾಟವನ್ನು ನೋಡಿದ ಅಧಿಕಾರಿಗಳು ನಗುತ್ತಿರೋದನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...