alex Certify ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ; ಭಾವುಕರನ್ನಾಗಿಸುತ್ತೆ ಅಮ್ಮ – ಮಗನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ; ಭಾವುಕರನ್ನಾಗಿಸುತ್ತೆ ಅಮ್ಮ – ಮಗನ ವಿಡಿಯೋ

ಅಪ್ಪ-ಅಮ್ಮ ಎಂದರೆ ಹಾಗೇನೆ. ಅವರ ಪ್ರೀತಿಗೆ ಎಣೆಯೇ ಇಲ್ಲ. ಮಕ್ಕಳನ್ನು ಸಂತೋಷವಾಗಿಡಲು ಅವರು ಸಕಲ ರೀತಿಯ ಪ್ರಯತ್ನ ಮಾಡುತ್ತಾರೆ. ತಾವು ಎಷ್ಟೇ ಕಷ್ಟಪಟ್ಟರೂ ಮಕ್ಕಳು ಸುಖವಾಗಿ ಇರಲಿ ಎಂದು ಬಯಸುವವರೇ ಹಲವರು. ಅಂಥದ್ದೇ ಒಂದುವಿಡಿಯೋ ಇದೀಗ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.

ಈ ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ಸರ್​ಪ್ರೈಸ್​ ನೀಡಿದ್ದಾಳೆ. ದೊಡ್ಡದಾದ ಮನೆಯೊಂದರ ಮುಂದೆ ಕಾರಿನಲ್ಲಿ ಕರೆದುಕೊಂಡು ಹೋಗುವ ತಾಯಿ ಅದು ತಮ್ಮದೇ ಮನೆ ಎಂದಾಗ ಅರೆಕ್ಷಣ ಮಗ ಗೊಂದಲಕ್ಕೆ ಬೀಳುವುದು, ನಂತರ ಜೋರಾಗಿ ಅಳುವ ದೃಶ್ಯ ಈ ವಿಡಿಯೋದಲ್ಲಿ ಇದೆ.

ಇದ್ಯಾಕೆ ಇಲ್ಲಿ ಕಾರು ನಿಲ್ಲಿಸಿದೆ ಎಂದು ಮಗ ಕೇಳಿದಾಗ ತಾಯಿ ಮನೆ ತೋರಿಸುತ್ತಾಳೆ. ಮಗ ಆ ಕ್ಷಣದಲ್ಲಿ ನಂಬಲೇ ಇಲ್ಲ. ಕೊನೆಗೆ ತಾಯಿ ನಿಜವಾಗಿಯೂ ಇದು ನಮ್ಮದೇ ಮನೆ ಎಂದಾಗ ಮಗ ಭಾವುಕನಾಗಿ ಜೋರಾಗಿ ಅಳುತ್ತಾನೆ. ಅಮ್ಮನ ಪ್ರೀತಿಗೆ ಸಾಟಿಯೇ ಇಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...