alex Certify ವಿಮಾನ ನಿಲ್ದಾಣದಲ್ಲಿ ಸಿನಿಮೀಯ ಶೈಲಿಯಲ್ಲಿ ಪ್ರೇಮ ನಿವೇದನೆ: ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಲ್ಲಿ ಸಿನಿಮೀಯ ಶೈಲಿಯಲ್ಲಿ ಪ್ರೇಮ ನಿವೇದನೆ: ವೈರಲ್​ ಆಯ್ತು ವಿಡಿಯೋ

ಈಗೀಗ ವಿಭಿನ್ನ ರೀತಿಯಲ್ಲಿ ಪ್ರಪೋಸ್​ ಮಾಡೋದೇ ಒಂದು ಟ್ರೆಂಡ್​ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿವಿಧ ರೀತಿಯ ಪ್ರಪೋಸ್​ ಮಾಡುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಈಗ ಮತ್ತೊಂದು ವಿಡಿಯೋ ಸೇರಿದ್ದು ಆಕ್ಲೆಂಡ್​ನ ನಿವಾಸಿಯಾಗಿರುವ ಬ್ಯಾಂಕಿಂಗ್​​ ತಜ್ಞ ಯಶರಾಜ್​ ಚಾಬ್ರಾ ಎಂಬವರು ತಮ್ಮ ಗೆಳತಿ ರಿಯಾ ಶುಕ್ಲಾರಿಗೆ ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಸಿನಿಮೀಯ ಶೈಲಿಯಲ್ಲಿ ಮದುವೆಗೆ ಪ್ರಪೋಸ್​ ಮಾಡಿದ್ದಾರೆ.

ಆಗಸ್ಟ್​ 18ರಂದು ಈ ರಮಣೀಯ ಘಟನೆ ನಡೆದಿದ್ದು ಪ್ರಸ್ತುತ ವಿಡಿಯೋ ವೈರಲ್​ ಆಗಿದೆ. ಸಾವಿರಾರು ಜನರ ಸಮ್ಮುಖದಲ್ಲಿ ಯಶರಾಜ್, ರಿಯಾರ ಎದುರು ಮಂಡಿಯೂರಿ ಪ್ರಪೋಸ್​ ಮಾಡಿದ್ದಾರೆ.

ಬಾಲಿವುಡ್​ ಸಿನಿಮಾದಂತಿದ್ದ ಈ ಪ್ರಪೋಸ್​ನ್ನು ಏರ್​ಪೋರ್ಟ್​ನಲ್ಲಿದ್ದವರು ವೀಕ್ಷಿಸಿದ್ದು ಮಾತ್ರವಲ್ಲದೇ ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾರೆ. ಏರ್​ಪೋರ್ಟ್​ನ ಸಿಬ್ಬಂದಿ ಈ ದೃಶ್ಯಾವಳಿಗಳನ್ನು ನೇರಪ್ರಸಾರ ಕೂಡ ಮಾಡಿದ್ದು ವಿಶೇಷವಾಗಿದೆ. ತನ್ನ ಗೆಳತಿ ಮರೆಯಲಾಗದ ರೀತಿಯಲ್ಲಿ ಆಕೆಯ ಎದುರು ಪ್ರೇಮ ನಿವೇದನೆ ಮಾಡೋದೇ ನನ್ನ ಗುರಿಯಾಗಿತ್ತು ಅಂತಾ ಚಾಬ್ರಾ ಹೇಳಿದ್ದಾರೆ.

ಆಕ್ಲೆಂಡ್​ ಏರ್​ಪೋರ್ಟ್ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಪ್ರೀತಿಯು ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿತ್ತು ಎಂದು ಈ ವಿಡಿಯೋಗೆ ಶೀರ್ಷಿಕೆ ಸಹ ನೀಡಲಾಗಿತ್ತು. ಅಲ್ಲದೇ ನಿಮ್ಮ ಅವಿಸ್ಮರಣೀಯ ಕ್ಷಣಕ್ಕೆ ನಮ್ಮನ್ನೂ ಒಂದು ಭಾಗ ಮಾಡಿಕೊಂಡ ರಿಯಾ ಹಾಗೂ ಚಾಬ್ರಾರಿಗೆ ಧನ್ಯವಾದ ಅಂತಾ ಸಹ ಬರೆಯಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...