alex Certify ಟೈಮ್ಸ್​ ಸ್ಕ್ವೇರ್​ನಲ್ಲಿ ಭಾಂಗ್ರಾ ನೃತ್ಯ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೈಮ್ಸ್​ ಸ್ಕ್ವೇರ್​ನಲ್ಲಿ ಭಾಂಗ್ರಾ ನೃತ್ಯ ಪ್ರದರ್ಶನ

ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ವ್ಯಕ್ತಿಯೊಬ್ಬ ಭಾಂಗ್ರಾ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದುಬೈ ಮೂಲದ ಭಾಂಗ್ರಾ ಡ್ಯಾನ್ಸರ್​ ಮತ್ತು ಶಿಕ್ಷಕ ಹಾಡಿರ್ ಸಿಂಗ್​ ಅವರು ಪ್ರಸ್ತುತ ತಮ್ಮ ಕಂಪನಿ ಪ್ಯೂರ್​ ಭಾಂಗ್ರಾಕ್ಕಾಗಿ ವಿಶ್ವ ಪ್ರವಾಸದಲ್ಲಿದ್ದಾರೆ.

ಆಗಾಗ್ಗೆ ಭಾಂಗ್ರಾ ಸೆಮಿನಾರ್​ಗಳು ಮತ್ತು ವರ್ಕ್​ಶಾಪ್​ಗಳನ್ನು ನೀಡುವ ಹಾಡಿರ್ ಸಿಂಗ್​, ಇತ್ತೀಚೆಗೆ ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಪ್ರಸಿದ್ಧವಾದ ಟೈಮ್​ ಸ್ಕ್ವೇರ್​ನಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದಶಿರ್ಸಲು ನಿರ್ಧರಿಸಿದರು.

ಅವರು ಹಂಚಿಕೊಂಡ ಕ್ಲಿಪ್​ನಲ್ಲಿ, ಜೀಬ್ರಾ ಕ್ರಾಸಿಂಗ್​ನ ಮಧ್ಯದಲ್ಲಿ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದ್ದು, ಮುಂಡಿಯನ್​ ತೋ ಬಾಚ್​ ಕೆ ಬೀಟ್​ಗಳಿಗೆ ಡ್ಯಾನ್ಸ್​ ಮಾಡುವ ಸಿಂಗ್​, ಎಲ್ಲಾ ಪ್ರೇಕ್ಷಕರ ಗಮನವನ್ನು ಸೆಳೆಯುವ ಮೂಲಕ ಸದ್ದು ಮಾಡುತ್ತಾರೆ.

ಹೌದು, ನಾನು ಟೈಮ್ಸ್​ ಸ್ಕ್ವೇರ್​ನಲ್ಲಿ ನೃತ್ಯ ಮಾಡಿದ್ದೇನೆ. ರಸ್ತೆಯ ಮಧ್ಯದಲ್ಲಿ. ಹೌದು, ನಾವು ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಪರಿಪೂರ್ಣ ಶಾಟ್​ಗಾಗಿ ನಾವು ಒಂದು ಗಂಟೆ ಕಾಯುತ್ತಿದ್ದೆವು. ಇದು ಸ್ಥಳದಲ್ಲೇ ಕೊರಿಯೊಗ್ರಾಪ್ ಆಗಿತ್ತು. ಅದು ಪಂಜಾಬಿ ಎಂಸಿ ಆಗಬೇಕಿತ್ತು. ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಅವರು ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ.

ಇದು ಅಂತರ್ಜಾಲದಲ್ಲಿ ಹಲವಾರು ಭಾಂಗ್ರಾ ಪ್ರೇಮಿಗಳ ಹೃದಯವನ್ನು ಗೆದ್ದಿದೆ. ಡ್ಯಾನ್ಸ್​ ವಿಡಿಯೋ ಫೋಟೋ ಶೇರಿಂಗ್​ ಅಪ್ಲಿಕೇಶನ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...